ಬೆಂಗಳೂರು(ಜೂ.14): ಮೇಘನಾ ರಾಜ್ ಕಳೆದ ಒಂದು ವಾರದ ಹಿಂದೆ ತನ್ನ ಪ್ರೀತಿಯ ಗಂಡ ಚಿರುನನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಇತ್ತ ಗರ್ಭಿಣಿಯಾಗಿರುವ ಮೇಘನಾ ತನ್ನನ್ನು ಅಗಲಿದ ಚಿರುವೇ ತನ್ನ ಹೊಟ್ಟೆಯಲ್ಲಿರುವ ಕಂದನಾಗಿ ಮತ್ತೆ ಹುಟ್ಟಿ ಬರಲೆಂಬ ಆಶಯದಲ್ಲಿದ್ದಾರೆ. ಹೀಗಿರುವಾಗ ಸ್ಯಾಂಡಲ್‌ವುಡ್‌ ನವರಸನಾಯಕ ಜಗ್ಗೇಶ್ ಮಾಡಿರುವ ಟ್ವೀಟ್ ಭಾರೀ ಕುತೂಹಲ ಮೂಡಿಸಿದೆ. ಮೇಘನಾಗೆ ಅವಳಿ ಮಕ್ಕಳು ಹುಟ್ಟುವ ಸುಳಿವು ಕೊಟ್ಟಿದೆ.

'ಹುಷಾರು ಕಣ್ರೋ...!' ತನ್ನವರ ಕಾಳಜಿ ವಹಿಸಿದ್ದ ಚಿರು: ಕೊನೆ ಕ್ಷಣದಲ್ಲಿ ಆಡಿದ ಮಾತಿದು!

ಈ ಸಂಬಂಧ ಟ್ವೀಟ್ ಮಾಡಿರುವ ಜಗ್ಗೇಶ್ ಯಾಕೋ ಭೈರವ ಮೇಘನಳ ಉದರದಲ್ಲಿ ಎರಡು ಜೀವ ಬರುತ್ತದೆ ಎಂದು ನುಡಿದುಬಿಟ್ಟ!. ನಿಜವಾದರೆ ಚಿರಂಜೀವಿ ಎರಡು ಆತ್ಮವಾಗಿ ಮರುಹುಟ್ಟು!. ಒಂದು ದುಃಖ! ಎರಡು ಸಂತೋಷ! ಸತ್ಯವಾಗಲಿ ಹರಸಿಬಿಡಿ!' ಎಂದು ಬರೆದಿದ್ದಾರೆ.

ಹೌದು ಚಿರು ಮೃತಪಟ್ಟ ಬಳಿಕ ಮೇಘನಾ ಗರ್ಭಿಣಿಯಾಗಿದ್ದಾರೆಂಬ ವಿಚಾರ ಬಹಿರಂಗಗೊಂಡಿತ್ತು. ಚಿರು ಲಾಕ್‌ಡೌನ್ ಬಳಿಕ ವಿಭಿನ್ನವಾಗಿ ಈ ವಿಚಾರ ಹೊರ ಜಗತ್ತಿಗೆ ತಿಳಿಸಬೇಕೆಂಬ ಪ್ಲಾನಿಂಗ್ ಮಾಡಿದ್ದರಂತೆ. ಆದರೆ ವಿಧಿಯಾಟವೇ ಬೇರೆಯಾಗಿತ್ತು. ನಗು ನಗುತ್ತಲೇ ಇದ್ದ ಚಿರು ಕ್ಷಣಾರ್ಧದಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಇದಾದ ಬಳಿಕ ಮೇಘನಾ ಹೊಟ್ಟೆಯಲ್ಲಿ ಟ್ವಿನ್ಸ್ ಇವೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಸದ್ಯ ಜಗ್ಗೇಶ್ ಟ್ವೀಟ್  ಮಾತುಗಳಿಗೆ ಮತ್ತಷ್ಟು ಬಲ ತುಂಬಿದೆ.

ಪತಿಯನ್ನು ಕಳೆದುಕೊಂಡ ದುಃಖ, ಪುಟ್ಟ ಕಂದನ ನಿರೀಕ್ಷೆಯ ಖುಷಿ

'ಮಾಮ ಬಂದಿದ್ದೀನಿ, ಕಣ್ಣು ಬಿಡೋ'; ಬಿಕ್ಕಿ ಬಿಕ್ಕಿ ಅತ್ತ ಅರ್ಜುನ್‌ ಸರ್ಜಾ!

ಇನ್ನು ಚಿರು ಹಾಗೂ ಮೇಘನಾ ಪರಸ್ಪರ ಹತ್ತು ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮದುವೆಯಾದ ಎರಡು ವರ್ಷದಲ್ಲಿ ಚಿರು ತನ್ನ ಮಡದಿಯನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಜೇನಿನ ಗೂಡಿನಂತಿದ್ದ ಅವರ ಕುಟುಂಬದಲ್ಲಿ ಸದ್ಯ ಎಲ್ಲರ ಮನದಲ್ಲೂ ಚಿರು ಕಳೆದುಕೊಂಡಿರುವ ದುಃಖ. ಇವೆಲ್ಲದರ ನಡುವೆ ಮೇಘನಾ ಉದರಲ್ಲಿ ಚಿರು ಮರುಜನ್ಮ ಪಡೆದು ಬರುವ ಆಶಯ. 

"