'ಹುಷಾರು ಕಣ್ರೋ...!' ತನ್ನವರ ಕಾಳಜಿ ವಹಿಸಿದ್ದ ಚಿರು: ಕೊನೆ ಕ್ಷಣದಲ್ಲಿ ಆಡಿದ ಮಾತಿದು!

First Published Jun 9, 2020, 10:13 AM IST

ಚಿರಂಜೀವಿ ಸರ್ಜಾ ಚಿರ ನಿದ್ರೆಗೆ ಜಾರಿದ್ದಾರೆ. ನಿನ್ನೆ, ಸೋಮವಾರ ಕನಕಪುರದ ನೆಲಗುಳಿ ಫಾರ್ಮ್‌ಹೌಸ್‌ನಲ್ಲಿ ಅವರ ಅಂತ್ಯಕ್ರಿಯೆ ನಡೆದಿದೆ. ಚಿರು ಅಗಲುವಿಕೆ ಕುಟುಂಬಕ್ಕೆ ಬಹುದೊಡ್ಡ ಆಘಾತ ನೀಡಿದ್ದರೆ, ಸ್ಯಾಂಡಲ್‌ವುಡ್‌ ತನ್ನ ಅಮೂಲ್ಯ ರತ್ನವೊಂದನ್ನು ಕಳೆದುಕೊಂಡ ಶೋಕದಲ್ಲಿದೆ. ತಾನೊಬ್ಬ ಸ್ಟಾರ್ ಎಂಬ ಅಹಂ ತೋರದೆ ಎಲ್ಲರೊಂದಿಗೂ ನಗುಮೊಗದಿಂದ ಖುಷಿ ಖುಷಿಯಾಗೇ ಇರುತ್ತಿದ್ದ ಚಿರುಗೆ ಬೇರೆಯವರ ಮುಖದಲ್ಲಿ ಖುಷಿ ಕಂಡು ತಾನೂ ಸಂತಸಪಡುತ್ತಿದ್ದರು ಎಂಬ ವಿಚಾರ ಇಡೀ ಕರ್ನಾಟಕಕ್ಕೇ ತಿಳಿದಿದೆ. ಆದರೆ ಅವರು ಆಸ್ಪತ್ರೆಗೆ ಕರೆದೊಯ್ಯುವಾಗಲೂ ತನ್ನವರ ಕಾಳಜಿ ಎಷ್ಟು ವಹಿಸಿದ್ದರೆಂಬುವುದಕ್ಕೆ ಅವರಾಡಿದ ಕೊನೆ ಮಾತುಗಳೇ ಸಾಕ್ಷಿ.