ಮನೆ ಮನಗನಂತಿದ್ದ ಚಿರಂಜೀವಿ ಸರ್ಜಾ ಅಗಲಿಕೆಯ ನೋವಿನಿಂದ ನಟ ಅರ್ಜುನ್ ಸರ್ಜಾ ಅವರು ಹೊರಬಂದಿಲ್ಲ. ಪ್ರೀತಿಯ ಅಳಿಯನ ಜೊತೆ ಮಾವನಿಗಿಂತ ಹೆಚ್ಚು ಗೆಳೆಯನಾಗಿಯೇ ಬೆರೆತಿದ್ದ ಅರ್ಜುನ್ ಸರ್ಜಾ ಮನೆ ಮಗನಲ್ಲಿ ಒಂದು ಮನವಿ ಮಾಡಿದ್ದಾರೆ.

ಮನೆ ಮಗನಿಗೆ ಮಾವನ ಮನವಿ ಎಂಬ ತಲೆ ಬರಹದಲ್ಲಿ ಅರ್ಜುನ್ ಸರ್ಜಾ ಕಿರು ಬರಹವೊಂದನ್ನು ಬರೆದಿದ್ದು, ಅಳಿಯ ಚಿರು ಸರ್ಜಾ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಈ ಮೂಲಕ ಚಿರು ಅಗಲಿಕೆಯ ನೋವನ್ನ ಸರ್ಜಾ ಹಂಚಿಕೊಂಡಿದ್ದಾರೆ.

ಚಿರು ನಿಧನಕ್ಕೆ ನಸ್ರಿಯಾ ಸಂತಾಪ: ಹಳೇ ಫೋಟೋ ಪೋಸ್ಟ್ ಮಾಡಿದ ನಟಿ

ತನ್ನದೇ ಮಾತುಗಳಲ್ಲಿ ತನ್ನ ನೋವನ್ನ ಹಂಚಿಕೊಂಡಿರೋ ಅರ್ಜುನ್, ನೀನು ಕೊಟ್ಟ ನೋವು  ಮರಿಬೇಕು ಅಂದರೆ ನಿನ್ನಿಂದ ಮಾತ್ರ ಸಾಧ್ಯ. ಮೇಘನಾ ಹೊಟ್ಟೆಯಲ್ಲಿ ಮಗುವಾಗಿ ಬಂದು ನಮ್ಮ ನೋವನ್ನ ಮರೆಸು. ನೀನು ಸದಾ ಚಿರಂಜೀವಿ ಎಂದಿಗೂ ನಿನ್ನ ನೆನಪು ಚಿರಂಜೀವಿ ಎಂದು ಭಾವುಕವಾಗಿ ಬರೆದಿದ್ದಾರೆ.

ಹೀಗಿದೆ ಆ ಪತ್ರ:

ಚಿನ್ನ ಮಗನೇ, ನಿನ್ನ ಮನ್ನಿಗೆ ಯಾರಾದ್ರೂ ಏಜಾರು ಮಾಡಿದ್ರೆ.. ನೀನು ಕೋಪ ಮಾಡ್ಕೊಂಡು ಸ್ವಲ್ಪ ಮಾತಾಡ್ತಿದ್ರು.. ನಮ್ಮನ್ನ ಬೈಕೊಂಡಿದ್ರು, ನಮಗ್ಎ ಹೇಳದೆ ಹೇಳ್ದೆ ಯಾವ್ದಾರು ಊರಿಗೆ ಹೋಗಿ ಬಂದಿದ್ರು ಪರವಾಗಿರಿರ್ತಿರ್ಲಿಲ್ಲ. ಆದ್ರೆ ವಾಪಸ್ಸೇ ಬರಕ್ಕಾಗ್ದಿರೋ ಅಂತ ಊರಿಗೆ ಹೋಗಿ ನಮ್ಗೆಲ್ಲಾ ಇಂತ ಶಿಕ್ಷೆ ಕೊಡ್ಬಿಟ್ಯಲ್ಲಪ್ಪ.

ಕಣ್ಣು ಮುಚ್ಚುದ್ರು ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ, ಸರಿ ಸ್ವಲ್ಪ ದಿನ ಕಳೆದ್ರೆ ಮರ್ತುಬಿಡ್ತಾರೆ ಅಂತ ನೀಡು ತಿಳ್ಕೊಂಡಿದ್ರೆ ಅದು ಸುಳ್ಳು. ನಮ್ಗೆಲ್ಲರಿಗೂ ಇದು ದೊಡ್ಡ ಗಾಯ. ಆದರೆ ಇರೋ ಅಂತ ಗಾಯ ಯಾವಾಗ್ಲೂ ನೀನು ನಮ್ಮ ಮನ್ಸಲ್ಲಿ. ಹೃದಯದಲ್ಲೆ ಇರ್ತೀಯ ಕಂದ.

ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗ್ಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.

ಚಿರು.. ಎಲ್ರು ಹೇಳ್ತಾರೆ ಈ ನೋವನ್ನ ತಡ್ಕೊಳ್ಳೋ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡ್ಬೇಕು ಅಂತ. ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದ್ರೆ, ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದ್ಬಿಡು ಕಂದ. ಆ ಮಗು ನಗಗುವಿನಲ್ಲೇ ನಿನ್ನ ನೋಡ್ತೀವಿ ಪ್ಲೀಸ್