ಸ್ಯಾಂಡಲ್‌ವುಡ್ ಸ್ಟಾರ್ ಚಿರಂಜೀವಿ ಸರ್ಜಾ ನಿಧನಕ್ಕೆ ಮಾಲಿವುಡ್‌ನಿಂದ ನಸ್ರಿಯಾ ನಾಜಿಮ್ ಸಂತಾಪ ವ್ಯಕ್ತಪಡಿಸಿದ್ದಾರೆ. ಚಿರಂಜೀವಿ ಜೊತೆಗಿನ ಹಳೆ ಫೋಟೋ ಶೇರ್ ಮಾಡಿ, ಮಿಸ್‌ ಮಾಡಿಕೊಳ್ಳುತ್ತೇವೆ ಎಂದು ಬರೆದಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡುತ್ತಲೇ ಇರುವ ನಸ್ರಿಯಾ ಮೇಘನಾ ಹಾಗೂ ಚಿರಂಜೀವಿ ಜೊತೆಗಿನ ತಮ್ಮ ಹಳೆಯ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಮೇಘನಾ ಹಾಗೂ ಚಿರಂಜೀವಿ ಜೊತೆ ಕಳೆದ ಕ್ಷಣಗಳನ್ನು ಅವರು ನೆನಪಿಸಿಕೊಂಡಿದ್ದಾರೆ.

ಸೌತ್ ಇಂಡಿಯನ್ ಸ್ಟಾರ್‌ಗಳ ಬಾಡಿಗಾರ್ಡ್ ಸಾವು: ಸಿನಿ ತಾರೆಗಳ ಸಂತಾಪ

ನಸ್ರಿಯಾ ಹಾಗೂ ಮೇಘನಾ ಮ್ಯಾಡ್ ಡಾಡ್ ಮಲಯಾಳಂ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ನಸ್ರಿಯಾ ಎನರ್ಜಿಯ ಬಂಡಲ್ ಇದ್ದಂತೆ, ಆಕೆಯ ಜೊತೆ ಹಾಗೂ ಸುತ್ತಮುತ್ತಲಿದ್ದರೆ ಬೋರ್ ಎನಿಸುವುದೇ ಇಲ್ಲ ಎಂದು ಮೆಘನಾ ಹಿಂದೊಮ್ಮೆ ಹೇಳಿದ್ದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

ನಸ್ರಿಯಾ ಮೇಘನಾ ಹಾಗೂ ಚಿರು ವಿವಾಹ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದರು. ಇನ್ನು ಚಿರಂಜೀವಿ ಹಾಗೂ ಮೇಘನಾ ಕೊಚ್ಚಿಗೆ ಬಂದಾಗ ನಸ್ರಿಯಾ ಹಾಗೂ ಫಹಾದ್ ಫಾಸಿಲ್ ಮನೆಗೂ ಭೇಟಿ ಕೊಟ್ಟಿದ್ದರು.