ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೇವಲ ಲಾರೆನ್ಸ್ ಹೆಸರಷ್ಟೇ ಕೇಳಿಬರುತ್ತಿಲ್ಲ. ಈ ರೇಸ್‌ನಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಮತ್ತು ಮಾಜಿ ಐಎಎಸ್ ಅಧಿಕಾರಿ ಇರೈಯನ್ಬು ಅವರ ಹೆಸರುಗಳು ಕೂಡ ಮುಂಚೂಣಿಯಲ್ಲಿವೆ. ಒಂದು ವೇಳೆ ತ್ರಿಶಾ ಮತ್ತು ಲಾರೆನ್ಸ್ ಇಬ್ಬರೂ ಅಖಾಡಕ್ಕೆ ಇಳಿದರೆ? 

ಬ್ರೇಕಿಂಗ್ ನ್ಯೂಸ್: ತಮಿಳು ರಾಜಕೀಯಕ್ಕೆ ಲಾರೆನ್ಸ್ 'ಮಾಸ್' ಎಂಟ್ರಿ? ದಳಪತಿ ವಿಜಯ್ ಪಾರ್ಟಿಯಿಂದ ಕಣಕ್ಕೆ? ಜೂನ್ 11ರ 'ಆ' ನಿರ್ಧಾರದ ಮೇಲೆ ಎಲ್ಲರ ಕಣ್ಣು!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈ: ಸಿನಿಮಾ ಮತ್ತು ರಾಜಕೀಯಕ್ಕೆ ಅವಿನಾಭಾವ ಸಂಬಂಧವಿರುವ ತಮಿಳುನಾಡಿನಲ್ಲಿ ಈಗ ಮತ್ತೊಂದು 'ಮೆಗಾ' ಸಂಚಲನ ಶುರುವಾಗಿದೆ. ದಳಪತಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಈಗ ಮತ್ತೊಬ್ಬ ಸ್ಟಾರ್ ನಟ ರಾಜಕೀಯ ಅಖಾಡಕ್ಕೆ ಧುಮುಕಲು ಸಜ್ಜಾಗಿದ್ದಾರೆ. ಅವರು ಮತ್ಯಾರೂ ಅಲ್ಲ, ಎಲ್ಲರ ನೆಚ್ಚಿನ ಲಾರೆನ್ಸ್ ಮಾಸ್ಟರ್ ಅಲಿಯಾಸ್ ರಾಘವ ಲಾರೆನ್ಸ್!

ತಿರುಚ್ಚಿ ಪೂರ್ವದ ಮೇಲೆ ಲಾರೆನ್ಸ್ ಕಣ್ಣು?

ಸದ್ಯ ತಮಿಳುನಾಡು ರಾಜಕಾರಣದಲ್ಲಿ ತಿರುಚ್ಚಿ ಪೂರ್ವ ಕ್ಷೇತ್ರದ ಉಪಚುನಾವಣೆ ಹೈವೋಲ್ಟೇಜ್ ಸೃಷ್ಟಿಸಿದೆ. ಈ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಆಡಳಿತಾರೂಢ ಟಿವಿ ಕೆ ಪಕ್ಷದಿಂದ ರಾಘವ ಲಾರೆನ್ಸ್ (Ragava Lawrence) ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಲಾರೆನ್ಸ್ ಅವರ ಸಮಾಜಸೇವೆ ಮತ್ತು ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ವಿಜಯ್ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿಯಿಂದಾಗಿ ಇಡೀ ಕಾಲಿವುಡ್ ಮತ್ತು ರಾಜಕೀಯ ವಲಯದಲ್ಲಿ ಕುತೂಹಲದ ಪರಾಕಾಷ್ಠೆ ತಲುಪಿದೆ.

ಟ್ವಿಟರ್‌ನಲ್ಲಿ ಲಾರೆನ್ಸ್ ನೀಡಿದ ಆ ಒಂದು 'ಹಿಂಟ್'!

ಸತತವಾಗಿ ಕೇಳಿಬರುತ್ತಿರುವ ಈ ವದಂತಿಗಳಿಗೆ ಸ್ವತಃ ರಾಘವ ಲಾರೆನ್ಸ್ ಅವರೇ ಈಗ ಬ್ರೇಕ್ ಹಾಕಿದ್ದಾರೆ. ತಮ್ಮ ಅಧಿಕೃತ 'X' ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, "ನಾನು ತಿರುಚ್ಚಿ ಪೂರ್ವದಿಂದ ಸ್ಪರ್ಧಿಸುತ್ತೇನೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ಕೇಳಲು ಮಾಧ್ಯಮ ಮಿತ್ರರು ಸತತವಾಗಿ ಕರೆ ಮಾಡುತ್ತಿದ್ದಾರೆ. ಪ್ರಸ್ತುತ ನಾನು ನನ್ನ 'ಬೆಂಜ್' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಜೂನ್ 10ಕ್ಕೆ ಚಿತ್ರೀಕರಣ ಮುಗಿಯಲಿದೆ," ಎಂದು ತಿಳಿಸಿದ್ದಾರೆ.

ಆದರೆ, ಅಸಲಿ ಟ್ವಿಸ್ಟ್ ಇರೋದೇ ಇಲ್ಲಿ! "ಬರುವ ಜೂನ್ 11ರಂದು (ಗುರುವಾರ) ಬೆಳಿಗ್ಗೆ 9:30ಕ್ಕೆ ನನ್ನ ತಾಯಿಯ ಆಶೀರ್ವಾದದೊಂದಿಗೆ ನನ್ನ ಜೀವನದ ಅತ್ಯಂತ ಪ್ರಮುಖ ನಿರ್ಧಾರವನ್ನು ಜಗತ್ತಿಗೆ ತಿಳಿಸಲಿದ್ದೇನೆ," ಎಂದು ಲಾರೆನ್ಸ್ ಘೋಷಿಸಿದ್ದಾರೆ. ಇದು ರಾಜಕೀಯ ಪ್ರವೇಶದ ಘೋಷಣೆಯೇ? ಅಥವಾ ದಳಪತಿ ವಿಜಯ್ ಜೊತೆಗಿನ ಹೊಸ ಮೈತ್ರಿಯ ಮುನ್ನುಡಿಯೇ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.

ತ್ರಿಶಾ ವರ್ಸಸ್ ಲಾರೆನ್ಸ್?

ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೇವಲ ಲಾರೆನ್ಸ್ ಹೆಸರಷ್ಟೇ ಕೇಳಿಬರುತ್ತಿಲ್ಲ. ಈ ರೇಸ್‌ನಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಕೃಷ್ಣನ್ (Trisha Krishnan) ಮತ್ತು ಮಾಜಿ ಐಎಎಸ್ ಅಧಿಕಾರಿ ಇರೈಯನ್ಬು ಅವರ ಹೆಸರುಗಳು ಕೂಡ ಮುಂಚೂಣಿಯಲ್ಲಿವೆ. ಒಂದು ವೇಳೆ ತ್ರಿಶಾ ಮತ್ತು ಲಾರೆನ್ಸ್ ಇಬ್ಬರೂ ಅಖಾಡಕ್ಕಿಳಿದರೆ, ಇದೊಂದು ಪಕ್ಕಾ ಸಿನಿಮೀಯ ಫೈಟ್ ಆಗುವುದರಲ್ಲಿ ಸಂಶಯವೇ ಇಲ್ಲ.

ಏನು ಬೇಕಾದರೂ ಆಗಬಹುದು!

2026ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಈ ಉಪಚುನಾವಣೆ ಬಹಳ ಮುಖ್ಯವಾಗಿದೆ. ವಿಜಯ್ ಅವರ ನೇತೃತ್ವದ ಸರ್ಕಾರ ರಚನೆಯಾಗಿ ಕೇವಲ ಒಂದು ತಿಂಗಳು ಕಳೆಯುವಷ್ಟರಲ್ಲೇ ಇಷ್ಟೆಲ್ಲಾ ರಾಜಕೀಯ ಸರ್ಕಸ್ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ಲಾರೆನ್ಸ್ ಅವರ ಜನಸೇವಾ ಕಾರ್ಯಗಳು ಅವರಿಗೆ ಪ್ಲಸ್ ಪಾಯಿಂಟ್ ಆಗಲಿವೆಯೇ? ಜೂನ್ 11ರಂದು ಲಾರೆನ್ಸ್ ಕೈಯಲ್ಲಿ ಸ್ಕ್ರಿಪ್ಟ್ ಇರುತ್ತಾ ಅಥವಾ ರಾಜಕೀಯದ ಬಾವುಟ ಇರುತ್ತಾ? ಕಾದು ನೋಡಬೇಕಿದೆ!

Stay Tuned! ಜೂನ್ 11ರ ಆ ಬಿಗ್ ಅಪ್‌ಡೇಟ್‌ಗಾಗಿ ಇಡೀ ದಕ್ಷಿಣ ಭಾರತವೇ ಕಾಯುತ್ತಿದೆ!