ಗುರುತೇ ಸಿಗದಷ್ಟು ಬದಲಾದ ನಟ ರಾಜ್‌ಕುಮಾರ್ ರಾವ್, Chin Implant ಸರ್ಜರಿ ಮಾಡಿಸಿಕೊಂಡ್ರಾ ಬಾಲಿವುಡ್ ಸ್ಟಾರ್?
rajkumar rao did surgery ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇತ್ತೀಚೆಗೆ ತಮ್ಮ ಹೊಸ ಲುಕ್‌ನಲ್ಲಿ ಅವರು ಕಾಣಿಸಿಕೊಂಡಿದ್ದು, ರಾಜ್‌ಕುಮಾರ್ ರಾವ್ ಖಂಡಿತವಾಗಿ ಚಿನ್ ಇಂಪ್ಲಾಂಟ್ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ.
ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಈಗ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಅದಕ್ಕೆ ಕಾರಣ ಅವರ ಹೊಸ ಲುಕ್. ಶನಿವಾರ ಸಂಜೆ ಮುಂಬೈನಲ್ಲಿ ನಡೆದ ದಲ್ಜಿತ್ ದೊಸಾಂಜ್ ಅವರ ಕಾರ್ಯಕ್ರಮಕ್ಕರ ಪತ್ನಿ ಪತ್ರಲೇಖಾ ಜೊತೆ ಆಗಮಿಸಿದ ರಾಜ್‌ಕುಮಾರ್ ರಾವ್ ಅವರ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿರೋದು ಮಾತ್ರವಲ್ಲ, ರಾಜ್‌ಕುಮಾರ್ ರಾವ್ ಖಂಡಿತವಾಗಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 'ಶ್ರೀಕಾಂತ್' ಮತ್ತು 'ಮಿಸ್ಟರ್ & ಮಿಸಸ್ ಮಹಿ' ಬಯೋಪಿಕ್‌ನಲ್ಲಿ ಕಾಣಿಸಿಕೊಳ್ಳಲಿರುವ ನಟ, ಕಪ್ಪು ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಕುಮಾರ್ ರಾವ್ ಅವರ ವೀಡಿಯೊಗಳು ಆನ್‌ಲೈನ್‌ಗೆ ಬಂದ ಬೆನ್ನಲ್ಲಿಯೇ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಹೆಚ್ಚಿನವರು ರಾಜ್‌ಕುಮಾರ್ ರಾವ್‌ನ ಲುಕ್‌ನ ಬಗ್ಗೆಯೇ ಬೇಸರ ವ್ಯಕ್ತಪಡಿಸಿದ್ದಾರೆ. ಸುಂದರವಾಗಿ ಕಾಣುವ ಸಲುವಾಗಿ ರಾಜ್‌ಕುಮಾರ್ ರಾವ್ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದೂ ಶಂಕೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ರಾಜ್‌ಕುಮಾರ್ ರಾವ್ ಅವರ ಅಭಿಮಾನಿಗಳೇ ಆಗಿದ್ದಾರೆ.
ಅದಲ್ಲದೆ, ರಾಜ್‌ಕುಮಾರ್ ರಾವ್, ಹೃತಿಕ್ ರೋಶನ್-ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರದ ವಿಲನ್ ರಿಷಬ್ ಸವಾನೆ ರೀತಿಯಲ್ಲಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಯೂಸರ್ ರಾಜ್‌ಕುಮಾರ್ ರಾವ್ ಅವರ ಬಾಲಿವುಡ್‌ನ ಆರಂಭಿಕ ದಿನಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. 'ಇದು ರಾಜ್‌ಕುಮಾರ್ ರಾವ್ ಅವರ ಸಿನಿಮಾ ಜರ್ನಿ. ಆರಂಭದಲ್ಲಿ ಅನುರಾಗ್ ಕಶ್ಯಪ್ ಸಿನಿಮಾದ ಲುಕ್‌ನಿಂದ ಕರಣ್ ಜೋಹರ್ ಅವರ ಸಿನಿಮಾದ ಲುಕ್‌ವರೆಗೆ' ಎಂದು ಟ್ರೋಲ್ ಮಾಡಿದ್ದಾರೆ.
ಮಿಸ್ಟರ್ ಅಂಡ್ ಮಿಸೆಸ್ ಮಹಿ ಚಿತ್ರೀಕರಣದಲ್ಲಿನ ರಾಜ್‌ಕುಮಾರ್ ರಾವ್ ಪೋಟೋ ಹಂಚಿಕೊಂಡ ಜಾನ್ವಿ
ರಾಜ್‌ಕುಮಾರ್ ರಾವ್ ಶೀಘ್ರದಲ್ಲೇ 'ಮಿಸ್ಟರ್ & ಮಿಸಸ್ ಮಹಿ' ಚಿತ್ರದಲ್ಲಿ ಜಾಹ್ನ್ವಿ ಕಪೂರ್ ಅವರ ಜೊತೆಯಾಗಿ ನಟಿಸಲಿದ್ದಾರೆ. ಹುಡ್ ಹುಡ್ ದಬಾಂಗ್ ಎಂಬ ಹೆಸರಿನ ಮತ್ತೊಬ್ಬ ಯೂಸರ್, ರಾಜ್‌ಕುಮಾರ್ ರಾವ್ ಚಿನ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಯೂಸರ್, 2010 ರಿಂದ ಕಳೆದ ಶನಿವಾರದವರೆಗಿನ ರಾಜ್‌ಕುಮಾರ್ ರಾವ್ ಅವರ ಅನೇಕ ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದು, ಇವರೀಗ 'ಮಿಸ್ಟರ್ ಚಿನ್ - ಕ್ರೆಡಿಬಲ್' ಎಂದು ಲೇವಡಿ ಮಾಡಿದ್ದಾರೆ. ಕಳೆದ ತಿಂಗಳು ಕೂಡ, ರಾಜ್‌ಕುಮಾರ್ ಅವರು ಗಲ್ಲದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಯೂಸರ್ ಒಬ್ಬರು ಹೇಳಿದ್ದರು. ಆದರೆ ಸಂದರ್ಶನವೊಂದರಲ್ಲಿ ರಾಜ್‌ಕುಮಾರ್ ರಾವ್ ಅವರೇ ಇದನ್ನು ನಿರಾಕರಿಸಿದ್ದಲ್ಲದೆ, "ನಹೀ ಭೈಯಾ, ಕೋಯಿ ಪ್ಲಾಸ್ಟಿಕ್ ಸರ್ಜರಿ ನಹೀ ಹುಯೇ' (ಇಲ್ಲ ಅಣ್ಣ, ಯಾವುದೇ ಪ್ಲಾಸ್ಟಿಕ್ ಸರ್ಜರಿ ಆಗಿಲ್ಲ) ಎಂದು ಹೇಳಿದ್ದರು.
44 ಕೋಟಿ ಮನೆ ಖರೀದಿಸಿದ ನಂತರ ಏರ್ಪೋರ್ಟ್‌ನಲ್ಲಿ ಹ್ಯಾಪಿಯಾಗಿ ಕಾಣಿಸಿಕೊಂಡ ರಾಜ್‌ಕುಮಾರ್ ರಾವ್!