ತಿಂಗಳುಗಟ್ಟಲೆ ಮನೆಯಲ್ಲಿದ್ದರೆ ಸೆಲೆಬ್ರಿಟಿಗಳಿಗೂ ಇತರರಿಗೂ ಹೆಚ್ಚಿನ ವ್ಯತ್ಯಾಸವಿರೋಲ್ಲ. ಸ್ನಾನ ಮಾಡಿ ಶಿಸ್ತಾಗಿ ಬಟ್ಟೆ ಧರಿಸಿಕೊಂಡು ಹತ್ತು ಗಂಟೆಗೆ ಸರಿಯಾಗಿ ಕಂಪ್ಯೂಟರ್‌ ಮುಂದೆ ಕೂತುಕೊಂಡು ಆಫೀಸ್‌ ಕೆಲಸಕ್ಕೆ ಲಾಗಿನ್‌ ಆಗುವವರು ಇರಬಹುದು. ಆದರೆ ಸಿಕ್ಕಿರೋ ಅವಕಾಶದಲ್ಲಿ ಸಾಕಷ್ಟು ನಿದ್ದೆ ಮಾಡಿ, ಉಳಿದ ಸಮಯದಲ್ಲಿ ಕೆಲಸ ಮಾಡೋಣ ಅಂದುಕೊಳ್ಳೋರೇ ಹೆಚ್ಚಿನವರು. ಇಂಥ ಹೊತ್ತಿನಲ್ಲೇ ಹಾಸಿಗೆ ಮೇಲೂ ತಲೆದಿಂಬಿನ ಮೇಲೂ ತುಂಬಾ ಪ್ರೀತಿ ಹುಟ್ಟಿಬಿಡೋದು. ಇದೇ ಸಂದರ್ಭ ಅಂತ ಕೆಲವರು ಪಿಲ್ಲೋಗಳನ್ನೇ ತಮ್ಮ ಸೊಂಟಕ್ಕೆ ಬೆಲ್ಟ್‌ನಿಂದ ಸುತ್ತಿಕೊಂಡು, ಸೊಗಸಾದ ಡ್ರೆಸ್‌ ಥರಾ ಕಾಣಿಸುವ ಹಾಗೆ ಮಾಡಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್‌ ಕೊಡ್ತಿದಾರೆ. ಬೇರೆಯವರಿಗೂ ಹಾಗೇ ಮಾಡುವಂತೆ ಸವಾಲು ಹಾಕ್ತಿದಾರೆ. ಮನೆಯಲ್ಲೇ ಕೊಳೀತಾ ಇರುವವರಿಗೆ ಇರೋ ಜಾಗದಲ್ಲೇ ಹೊಸ ನಮೂನೆಯಲ್ಲಿ ಕಾಣಿಸೋದಕ್ಕೆ ನೆರವಾಗುವ ಈ ಟ್ರೆಂಡ್‌ಗೆ ಕ್ವಾರಂಟೈನ್‌ ಪಿಲ್ಲೋ ಚಾಲೆಂಜ್‌ ಅಂತಲೂ ಸೊಗಸಾದ ಹೆಸರನ್ನು ಇಡಲಾಗಿದೆ.

ಲಾಕ್‌ಡೌನ್‌ನಿಂದ ಸಿನಿಮಾ ತಾರೆಯರು ಮಿಸ್ ಮಾಡಿಕೊಂಡ ಸಂಗತಿಗಳು! 

ಆಗಷ್ಟೇ ಬೆಡ್ ನಿಂದ ಮೇಲೆದ್ದ ಫೀಲು, ಹೆಚ್ಚು ಕಮ್ಮಿ ನಗ್ನವಾಗಿಯೇ ಇರುವ ಬಾಡಿಗೆ ಮರ್ಯಾದಾ ಕವಚದ ಹಾಗೆ ಪಿಲ್ಲೋ. ತಲೆ ದಿಂಬನ್ನೇ ವಸ್ತ್ರದಂತೆ ಮೈಗೆ ಸುತ್ಕೊಂಡು ಮಧ್ಯಕ್ಕೆ ಬೆಲ್ಟ್ ತೊಟ್ಟುಕೊಂಡು ಒಂದು ಸೆಲ್ಫೀ. ಸಖತ್ತಾಗಿ ಮೇಕಪ್ ಮಾಡಿಕೊಂಡು, ಆಕ್ಸೆಸರೀಸ್ ಎಲ್ಲ ತೊಟ್ಟುಕೊಂಡು ಈ ಥರ ಪಿಲ್ಲೋ ಪೀಸ್ ನಲ್ಲಿ ನಿಂತರೆ ಹತ್ತು ಮಾರ್ಕ್ಸ್ ಹೆಚ್ಚೇ. ಈ ಚಾಲೆಂಜ್ ಗೆ ಎಷ್ಟೋ ದಶಲಕ್ಷ ಹೆಣ್ಣುಮಕ್ಕಳು ಸ್ಪಂದಿಸಿದ್ದಾರೆ. ಹ್ಯಾಶ್ ಟ್ಯಾಗ್ ಬಳಸಿ ಕ್ವಾರಂಟೇನ್ ಪಿಲ್ಲೋ ಚಾಲೆಂಜ್ ಅಂತ ಟೈಮ್ ಮಾಡಿ ನಿಮ್ಮ ಪಿಲ್ಲೋ ಸೆಲ್ಫೀಯನ್ನು ಪೋಸ್ಟ್ ಮಾಡಿದ್ರೆ ಆಯ್ತು. ಸಖತ್ ಥ್ರಿಲ್ಲಿಂಗ್ ಅನುಭವ ಇದು. 

 
 
 
 
 
 
 
 
 
 
 
 
 

This is for my journalism work; please respect me #pillowchallenge #quarantinepillowchallenge

A post shared by jenny.leah.singer (@jenny.leah.singer) on Apr 11, 2020 at 11:27am PDT

ಅಂದಹಾಗೆ ಈ ಕ್ವಾರಂಟೈನ್ ಪಿಲ್ಲೋ ಚಾಲೆಂಜ್ ನಲ್ಲಿ ಆಕ್ಟಿವ್ ಆಗಿರೋರು ಎಂದಿನ ಹಾಗೆ ಹೆಣ್ಮಕ್ಕಳು. ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ಸೀರೆ ಚಾಲೆಂಜ್, ಅಡುಗೆ ಚಾಲೆಂಜ್ ಅಂತೆಲ್ಲ ಹೆಣ್ ಮಕ್ಕಳು ಸಖತ್ ಚಟುವಟಿಕೆಯಿಂದಿದ್ರು. ಇದಕ್ಕೆ ಪುರುಷ ಪುಂಗವರು ಎಲ್ಲೆಲ್ಲೂ ಉರಿ ಹತ್ತಿಸ್ಕೊಂಡು ಕಮೆಂಟಿಸಿದ್ದೇ ಕಮೆಂಟಿಸಿದ್ದು. ಇಂಥಾ ಕಡುಕಷ್ಟದ ಟೈಮ್ ನಲ್ಲೂ ಶೋಕಿ ಮಾಡ್ತಾರೆ ಅನ್ನೋದು ಈ ಕಮೆಂಟ್ ಗಳ ಹಿಂದಿದ್ದ ವ್ಯಂಗ್ಯದ ಟೋನ್. ಜಗಳಕ್ಕೆ ಬಂದರೆ ಬುದ್ಧಿ ಕಲಿಸೋತನಕ ನಿದ್ದೆ ಮಾಡದ ಹೆಣ್ಮಕ್ಕಳು, ಹೌದು, ನಾವು ಈ ಕ್ವಾರಂಟೈನ್ ಟೈಮ್ ನಲ್ಲೂ ಸೀರೆ ಚಾಲೆಂಜ್, ರೆಸಿಪಿ ಚಾಲೆಂಜ್ ಅಂತ ಮಜಾ ಮಾಡ್ತಿದ್ದೀವಿ. ನೀವು ಇದ್ಕೆಲ್ಲ ಕೆಟ್ಟದಾಗಿ ಕಮೆಂಟ್ ಮಾಡ್ತಿದ್ದೀರಲ್ಲಾ, ನೀವೇನು ಮನೇಲಿ ಕೂತ್ಕೊಂಡು ಕೊರೋನಾಗೆ ಮದ್ದು ಅರೀತಿದ್ದೀರಾ ಅಂತ ಟಾಂಗ್ ಕೊಟ್ಟ ಮೇಲೆ ಗಂಡು ಹುಡುಗ್ರು ಉಸ್ಕ್ ದಮ್ ಎತ್ತಿದ್ರೆ ಕೇಳಿ. 

ಲಾಕ್‌ಡೌನ್ ಮುಗಿಯೋದೇ ತಡ ಸನ್ನಿಗೆ ಈ ಕೆಲಸ ಮಾಡೋದಕ್ಕೆ ಅವಸರ ಆಗಿದೆಯಂತ .

ಈ ಪಿಲ್ಲೋ ಚಾಲೆಂಜ್ ಅನ್ನು ನಮ್ ರಾಮಾಯಣ ಸೀರಿಯಲ್ ನಟಿ ಡೆಬಿನಾ ಬೊನರ್ಜಿ ಸ್ವೀಕರಿಸಿದ್ದಾರೆ. ತನ್ನ ಬೆತ್ತಲೆ ಮೈಗೆ ಬಣ್ಣ ಬಣ್ಣ ಕ್ಯೂಟ್ ಪಿಲ್ಲೋವನ್ನು ಬಟ್ಟೆಯಾಗಿ ಮಾಡಿಕೊಂಡು ಇದಕ್ಕೆ ಮ್ಯಾಚಿಂಗ್ ಆಗಿರೋ ಬೆಲ್ಟ್ ತೊಟ್ಟಿದ್ದಾರೆ. ಜೊತೆಗೆ ಸನ್ ಗ್ಲಾಸ್, ಕ್ಯೂಟ್ ಸ್ಟೆಲಿಟೋಸ್ ತೊಟ್ಟು ಮಾದಕವಾದ ಫೋಸ್ ನಲ್ಲಿ ಸೆಲ್ಫೀ ಕ್ಲಿಕ್ಕಿಸಿದ್ದಾರೆ. ಇದನ್ನು ಇನ್ ಸ್ಟಾ, ಟ್ವಿಟರ್ ಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಮಾಡೆಲ್ ಪಿಲ್ಲೋ ಚಾಲೆಂಜ್ ನಲ್ಲಿ ತನ್ನ ನಾಯಿಮರಿಯನ್ನೂ ಜೊತೆಗಿಟ್ಟುಕೊಂಡು ಸೆಲ್ಫಿ ಕ್ಲಿಕ್ಕಿಸಿದ್ದಾಳೆ. ನೀವೊಮ್ಮೆ ಇನ್ ಸ್ಟಾಗ್ರಾಂಗೆ ವಿಸಿಟ್ ಮಾಡಿ ಪಿಲ್ಲೋ ಚಾಲೆಂಜ್ ಅಂತ ಸರ್ಚ್ ಕೊಟ್ಟರೆ ನಾನಾ ಭಂಗಿಗಳ ಮಾದಕ ಬೆಡಗಿಯರು ನಗ್ನ ಮೈಗೆ ದಿಂಬು ಸುತ್ತಿಕೊಂಡು ಏನೇನೆಲ್ಲ ಆಕ್ಸೆಸರೀಸ್ ಧರಿಸಿರುವ ಐತಿಹಾಸಿಕ ಫೋಟೋಗಳನ್ನು ನೋಡಬಹುದು.