ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿ ಮಕ್ಕಳನ್ನು ಸಂಭಾಳಿಸುವುದೇ ಒಂದು ಸವಾಲು.  ಅವರನ್ನು ಯಾವಾಗಲೂ ಎಂಗೇಜ್ ಆಗಿಡೋದ್ರಲ್ಲಿ ಅಪ್ಪ ಅಮ್ಮ ಹೈರಾಣಾಗಿರುತ್ತಾರೆ. ಇದು ಒಬ್ಬರ ಮನೆಯ ಕಥೆಯಲ್ಲ. ಎಲ್ಲರ ಮನೆ ಮನೆ ಕಥೆ. ಮಾದಕ ಚೆಲುವೆ ಸನ್ನಿ ಲಿಯೋನ್ ಕೂಡಾ ಇದೇ ಮಾತನ್ನು ಹೇಳಿದ್ದಾರೆ. 

ಲಾಕ್‌ಡೌನ್ ಸಮಯದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದೇ ಒಂದು ಸವಾಲು. ನಮ್ಮ ಮಕ್ಕಳಿಗೆ ಸ್ಕೂಲ್ ವರ್ಕ್‌ಗಳು, ಆರ್ಟ್ಸ್, ಕ್ರಾಫ್ಟ್ ಹೀಗೆ ಏನೇನೋ ಮಾಡಿಸುತ್ತಾ ಅವರನ್ನು ಬ್ಯುಸಿಯಾಗಿಡಲು ಟ್ರೈ ಮಾಡುತ್ತಿದ್ದೇವೆ' ಎಂದಿದ್ದಾರೆ. 

ಬೇಸಗೆಯ 12 ದಿನಗಳು: ಸನ್ನಿಯ ಹೊಸ ಅವತಾರದ ಮೋಹಕ ಭಂಗಿಗಳು!

ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಿ ನಿಟ್ಟುಸಿರು ಬಿಡುವುದನ್ನೇ ಕಾಯುತ್ತಿದ್ದೇನೆ. ಮಕ್ಕಳು ಕೂಡಾ ಶಾಲೆಯನ್ನು, ಅವರ ಪಾಠಗಳನ್ನು, ಫ್ರೆಂಡ್ಸ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಲಾಕ್‌ಡೌನ್ ಮುಗಿದ ಕೂಡಲೇ ನಾವು ದುಬೈಗೆ ಹೋಗುತ್ತೇವೆ. ಎಂದಿದ್ದಾರೆ. 

ಮಕ್ಕಳನ್ನು ಶಾಲೆಗೆ ಬಿಟ್ಟ ನಂತರ ಮನೆಯನ್ನು ಡೆಕೊರೇಟ್ ಮಾಡಬೇಕು. ಮಕ್ಕಳ ಆಟ, ತುಂಟಾಟದಲ್ಲಿ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಎಲ್ಲವನ್ನೂ ಸರಿಯಾಗಿಡಬೇಕು' ಎಂದಿದ್ದಾರೆ ಸನ್ನಿ. 

ಸನ್ನಿ ಕಿಸ್ಸಿಂಗ್ ವಿಡಿಯೋ ಹಾಕಿದ್ದೇ ತಡ ವೈರಲ್ಲೋ ವೈರಲ್!

ಸನ್ನಿ -ಡೇನಿಯಲ್ ದಂಪತಿಗೆ ನಿಶಾ, ನೋಹಾ, ಆಶೆರ್ ಮೂರು ಮಕ್ಕಳು. ಇಬ್ಬರು ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದಿದ್ದಾರೆ. ಒಂದು ಮಗುವನ್ನು ದತ್ತು ಪಡೆದಿದ್ದಾರೆ. 

"