MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • 'ವದಿನಾ' ಜೊತೆ ಹೆಜ್ಜೆ ಹಾಕಿದ 'ಬೇಬಿ' ನಟನ ವಿಡಿಯೋ ವೈರಲ್; ಅಣ್ಣನ ಮದುವೆಯಲ್ಲಿ ತಮ್ಮನ ಮಸ್ತಿನೇ ಜಾಸ್ತಿನಾ?!

'ವದಿನಾ' ಜೊತೆ ಹೆಜ್ಜೆ ಹಾಕಿದ 'ಬೇಬಿ' ನಟನ ವಿಡಿಯೋ ವೈರಲ್; ಅಣ್ಣನ ಮದುವೆಯಲ್ಲಿ ತಮ್ಮನ ಮಸ್ತಿನೇ ಜಾಸ್ತಿನಾ?!

ರಶ್ಮಿಕಾ-ವಿಜಯ್ ಸ್ಟಾರ್ ಜೋಡಿಯ ಮದುವೆಯ ಫೋಟೋಗಳು ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದ ಹೊತ್ತಿನಲ್ಲೇ, ವಿಜಯ್ ಸಹೋದರ ಆನಂದ್ ದೇವರಕೊಂಡ ಒಂದು ಸಖತ್ ವಿಡಿಯೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

2 Min read
Author : Shriram Bhat
Published : Mar 12 2026, 12:40 PM IST
Share this Photo Gallery
  • FB
  • TW
  • Linkdin
  • Whatsapp
17
Image Credit : Instagram

ವಿಜಯ್ ದೇವರಕೊಂಡ-ರಶ್ಮಿಕಾ ಮದುವೆಯಲ್ಲಿ ಆನಂದ್ ಮಸ್ತಿ: 'ವದಿನಾ' ಜೊತೆ ಹೆಜ್ಜೆ ಹಾಕಿದ 'ಬೇಬಿ' ನಟ! ವಿಡಿಯೋ ವೈರಲ್

ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ರೋಮ್ಯಾಂಟಿಕ್ ಜೋಡಿ ಎನಿಸಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

27
Image Credit : Instagram

ಈ ಸ್ಟಾರ್ ಜೋಡಿಯ ಮದುವೆಯ ಫೋಟೋಗಳು ಮತ್ತು ವಿಡಿಯೋಗಳಿಗಾಗಿ ಅಭಿಮಾನಿಗಳು ಕಾದು ಕುಳಿತಿದ್ದ ಹೊತ್ತಿನಲ್ಲೇ, ವಿಜಯ್ ಸಹೋದರ ಆನಂದ್ ದೇವರಕೊಂಡ ಒಂದು ಸಖತ್ ವಿಡಿಯೋ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದಾರೆ.

Related Articles

Related image1
'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?
Related image2
ಮುಸ್ಲಿಂ ಹುಡುಗನ ಇಷ್ಟಪಟ್ಟ ರುದ್ರಾಕ್ಷಿ ಮಾರೋ ಹುಡುಗಿ.. ನನಗೆ ಫರ್ಮಾನ್‌ ಖಾನ್‌ ಬೇಕೇ ಬೇಕು ಅಂತಾ ಹಠ ಹಿಡಿದಿದ್ಯಾಕೆ ಮೊನಾಲಿಸಾ?
37
Image Credit : Instagram

ಸಂಭ್ರಮದ ಮದುವೆಯಲ್ಲಿ ಡ್ಯಾನ್ಸ್ ಫೀವರ್!

ನಟ ಆನಂದ್ ದೇವರಕೊಂಡ ಬುಧವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನವಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ಆನಂದ್ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಮದುವೆಯ ಸಂಭ್ರಮದ ನಡುವೆ ಈ ಮೂವರು ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಬಹಳ ಸರಳವಾಗಿ ಮತ್ತು ಖುಷಿಯಾಗಿ ಕುಣಿದಿರುವುದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

47
Image Credit : Instagram

ವಿಡಿಯೋದಲ್ಲಿ ವಿಜಯ್ ದೇವರಕೊಂಡ ಅವರು ರಂಗುರಂಗಿನ ಶರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸಿ ಮಿಂಚುತ್ತಿದ್ದರೆ, ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಸಿಂಪಲ್ ಆಗಿ ಶಾರ್ಟ್ಸ್ ಮತ್ತು ಶರ್ಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಚ್ಚ ಹಸಿರಿನ ಹುಲ್ಲುಹಾಸಿನ ಮೇಲೆ ಈ ಮೂವರು ಅಕ್ಕಪಕ್ಕದವರ ಬಗ್ಗೆ ತಲೆಕೆಡಿಸಿಕೊಳ್ಳದೆ ಫುಲ್ ಜೋಶ್‌ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.

57
Image Credit : Instagram

'ಸಂಚಾರಮೆ' ಹಾಡಿಗೆ ಮಸ್ತಿ:

ವಿಶೇಷವೆಂದರೆ, ಈ ಜೋಡಿ ಆನಂದ್ ದೇವರಕೊಂಡ ಅಭಿನಯದ ಮುಂಬರುವ 'ಎಪಿಕ್' (Epic) ಚಿತ್ರದ 'ಸಂಚಾರಮೆ' ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡು ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದರೆ, ಕುಟುಂಬದವರೆಲ್ಲರೂ ಸೇರಿ ಸಂಗೀತಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋಗೆ ಕ್ಯಾಪ್ಷನ್ ನೀಡಿರುವ ಆನಂದ್, "ಇದು ನೋಡಲು ಸ್ವಲ್ಪ ಗೊಂದಲಮಯವಾಗಿ ಕಾಣಿಸಬಹುದು (Chaotic), ಆದರೆ ಆ ಕ್ಷಣದಲ್ಲಿ ನಾವೆಲ್ಲರೂ ತುಂಬಾ ಸಂತೋಷವಾಗಿದ್ದೆವು. ನಮಗೆ ಇಷ್ಟವಾದವರ ಜೊತೆ ಪ್ರಯಾಣ ಮಾಡುವುದು ಮತ್ತು ಕುಣಿಯುವುದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನಿದೆ?" ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

67
Image Credit : Instagram

'ವದಿನಾ ಹೇಗಿದ್ದಾರೆ?' ಎಂದವರಿಗೆ ಸಿಕ್ಕಿತು ಉತ್ತರ!

ಮದುವೆಯ ನಂತರ ಆನಂದ್ ತಮ್ಮ ಅತ್ತಿಗೆ ರಶ್ಮಿಕಾ ಬಗ್ಗೆ ಒಂದು ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ. "ಹಿಂದೆಲ್ಲಾ ನಾನು ಹೊರಗೆ ಹೋದಾಗ ಅಭಿಮಾನಿಗಳು 'ವದಿನಾ (ಅತ್ತಿಗೆ) ಹೇಗಿದ್ದಾರೆ?' ಎಂದು ಕಿಚಾಯಿಸುತ್ತಿದ್ದರು. ಆಗ ನನಗೆ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆದರೆ ಈಗ ಅಧಿಕೃತವಾಗಿ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ತುಂಬಾ ಖುಷಿಯಾಗುತ್ತಿದೆ" ಎಂದು ಹೇಳಿದ್ದಾರೆ. ಜೊತೆಗೆ ಮೆಹೆಂದಿ ಕಾರ್ಯಕ್ರಮದ ಕೆಲವು ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ಅವರು, "ಮದುವೆಯ ಪ್ರತಿ ದಿನವೂ ನಮಗೆ ಒಂದು ರಜಾದಿನದಂತಿತ್ತು, ನಮ್ಮ ಆತ್ಮೀಯರು ಮತ್ತು ಕುಟುಂಬದವರ ಜೊತೆ ಕಳೆದ ಆ ಕ್ಷಣಗಳನ್ನು ಈಗ ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ" ಎಂದಿದ್ದಾರೆ.

 
 
 
 
View this post on Instagram
 
 
 
 
 
 
 
 
 
 
 

A post shared by Anand Deverakonda (@ananddeverakonda)

77
Image Credit : Instagram

ಉದಯಪುರದಲ್ಲಿ ನಡೆದ ಅದ್ಧೂರಿ ವಿವಾಹ:

ಅಂದಹಾಗೆ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಖಾಸಗಿಯಾಗಿ ನೆರವೇರಿತ್ತು. ಕೇವಲ ಆಪ್ತ ಸಂಬಂಧಿಗಳು ಮತ್ತು ಚಿತ್ರರಂಗದ ಕೆಲವು ಗಣ್ಯರು ಮಾತ್ರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಆನಂದ್ ದೇವರಕೊಂಡ ಅವರು ತಮ್ಮ 'ಎಪಿಕ್' ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಸದ್ಯಕ್ಕೆ ವಿಜಯ್-ರಶ್ಮಿಕಾ ಅವರ ಈ ಡ್ಯಾನ್ಸ್ ವಿಡಿಯೋ ಅಂತೂ ಇಂಟರ್ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ
ಟಾಲಿವುಡ್
ಮನರಂಜನಾ ಸುದ್ದಿ
Latest Videos
Recommended Stories
Recommended image1
ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ
Recommended image2
Khushbu Sundar Weight Loss: 98kg ಇದ್ದ ಖುಷ್ಬು 55ನೇ ವಯಸ್ಸಿನಲ್ಲಿ ಇಷ್ಟು ಸಣ್ಣಗಾಗಿದ್ದು ಹೇಗೆ? ನಟಿ ಸೀಕ್ರೆಟ್
Recommended image3
Badhai Ho Movie ಥರವೇ 66 ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತ? ಸತ್ಯ ಏನು?
Related Stories
Recommended image1
'ಬಂಧನವಲ್ಲ, ನಿಮಗೆ ಬಿಡುಗಡೆ ನೀಡೋ ಪ್ರೀತಿಯನ್ನು ಕಂಡುಕೊಳ್ಳಿ' ಎಂದ ರಶ್ಮಿಕಾ ಮಂದಣ್ಣ ಪೋಸ್ಟ್ ಭಾರೀ ವೈರಲ್; ಅರ್ಥ ಆಯ್ತಾ?
Recommended image2
ಮುಸ್ಲಿಂ ಹುಡುಗನ ಇಷ್ಟಪಟ್ಟ ರುದ್ರಾಕ್ಷಿ ಮಾರೋ ಹುಡುಗಿ.. ನನಗೆ ಫರ್ಮಾನ್‌ ಖಾನ್‌ ಬೇಕೇ ಬೇಕು ಅಂತಾ ಹಠ ಹಿಡಿದಿದ್ಯಾಕೆ ಮೊನಾಲಿಸಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved