ಲಾಕ್‌ಡೌನ್‌ನಿಂದ ಸಿನಿಮಾ ತಾರೆಯರು ಮಿಸ್ ಮಾಡಿಕೊಂಡ ಸಂಗತಿಗಳು!
ಸಿನಿಮಾ, ಶೂಟಿಂಗ್, ಸಂಭ್ರಮ, ಕಾರ್ಯಕ್ರಮ, ಅಭಿಮಾನಿಗಳು ಸಾರ್ವಜನಿಕ ಜೀವನದಲ್ಲೇ ಕಾಲ ಕಳೆಯುತ್ತಿದ್ದ ಸೆಲೆಬ್ರಿಟಿಗಳು ಮನೆಯಲ್ಲೇ ಕೂತಿದ್ದಾರೆ. ಈ ಲಾಕ್ ಡೌನ್ ದಿನಗಳಲ್ಲಿ ಅವರು ಮಿಸ್ ಮಾಡಿಕೊಳ್ಳುತ್ತಿರುವುದೇನು ಎಂಬುದನ್ನು ಅವರೇ ಹೇಳಿದ್ದಾರೆ ಕೇಳಿ.
ಕೊನೆಯ ಬಾರಿ ಅವರನ್ನು ನೋಡಲೂ ಆಗಲಿಲ್ಲ
ಪಾವನಾ, ನಟಿ
1. ಲಾಕ್ ಡೌನ್ ಆಗುವುದಕ್ಕೂ ಒಂದು ವಾರದ ಮೊದಲು ನಟ ಬುಲೆಟ್ ಪ್ರಕಾಶ್ ಅವರ ಜತೆ ನಟಿಸಿದ್ದೆ. ಮೆಹಬೂಬ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಅವರ ಜತೆ ಕಳೆದ ದಿನಗಳು ಮರೆಯಲಾಗದು. ಆದರೆ, ಅನಾರೋಗ್ಯದಿಂದ ಅವರು ತೀರಿಕೊಂಡಾಗ ಅವರನ್ನು ಕೊನೆಯ ಬಾರಿಗೆ ನೋಡಲಿಕ್ಕೂ ಆಗಲಿಲ್ಲ. ನಮ್ಮ ಜತೆ ಕೆಲಸ ಮಾಡಿದ ನಟ ತೀರಿಕೊಂಡಾಗ ಅವರನ್ನು ನೋಡಲು ಆಗಲಿಲ್ಲ ಎನ್ನುವ ನೋವು ಇದೆ.
ಇಟಲಿ ಚಿತ್ರೋತ್ಸವದಲ್ಲಿ ಕನ್ನಡತಿ ಪಾವನಗೆ ಬೆಸ್ಟ್ ನಟಿ ಪುರಸ್ಕಾರ!
2. ನನ್ನ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದ್ದ ಚಿತ್ರೋತ್ಸವಕ್ಕೆ ಭಾಗವಹಿಸುವ ಅವಕಾಶ ಸಿಕ್ಕಿತು. ಅದು ಇಟಲಿಯಲ್ಲಿ ನಡೆಯಬೇಕಿತ್ತು. ಜತೆಗೆ ನಮ್ಮ ರುಧ್ರಿ ಚಿತ್ರಕ್ಕೆ ಪ್ರಶಸ್ತಿಯೂ ಬಂದಿತ್ತು. ಆದರೆ, ಕೊರೋನಾ, ಈ ಲಾಕ್ ಡೌನ್ ನಿಂದ ಆ ಸಂಭ್ರಮವನ್ನು ಮಿಸ್ ಮಾಡಿಕೊಂಡೆ. ಈ ವರ್ಷ ಇಟಲಿಯ ಪ್ರತಿಷ್ಠಿತ ಚಿತ್ರೋತ್ಸವ ನಡೆಯುವುದೇ ಡೌಟು.
ಭೈರವೇಶ್ವರನ ದರ್ಶನವಿಲ್ಲದೆ ಸಂಕಟ
ಕೋಮಲ್, ನಟ
1. ಕಳೆದ ಒಂದು ವರ್ಷದಿಂದ ಪ್ರತಿ ವಾರ ಮಾಯಸಂದ್ರದಲ್ಲಿರುವ ಭೈರವೇಶ್ವರ ದೇವಸ್ಥಾನಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸುತ್ತಾ ಬರುತ್ತಿದ್ದೆ. ಬೆಳಗ್ಗೆ 3 ಗಂಟೆಗೆ ಮೈಸೂರಿನ ಪುರೋಹಿತರನ್ನು ಕರೆದುಕೊಂಡು ಹೋಗುತ್ತಿದ್ದೆ. 450 ವರ್ಷಗಳ ಹಳೆಯ ದೇವಾಲಯ. ಆದರೆ, ಕಳೆದ ಮೂರು ವಾರದಿಂದ ಈ ದೇವಸ್ಥಾನಕ್ಕೆ ಹೋಗಲು ಆಗುತ್ತಿಲ್ಲ. ತುಂಬಾ ಸಂಕಟ ಆಗುತ್ತಿದೆ.
2. ಹೊಸ ಸಿನಿಮಾಗಾಗಿ ದೇಹ ದಂಡಿಸಿಕೊಳ್ಳುತ್ತಿದ್ದೆ. ಜಿಮ್ ತರಬೇತುದಾರರಿಂದ ತಯಾರಿ ಮಾಡಿಕೊಳ್ಳುತ್ತಿದ್ದೆ. ಆದರೆ, ಜಿಮ್ ಗೆ ಹೋಗಲು ಆಗತ್ತಿಲ್ಲ. ಜಿಮ್ ತರಬೇತು ದಾರರನ್ನು ಮನೆಗೂ ಕರೆಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಇದ್ದಕ್ಕಿದಂತೆ ಜಿಮ್ ಬಿಡಬೇಕಾಯಿತು.
ಕತೆ ಕೇಳುವ ಖುಷಿ ಇಲ್ಲವಾಗಿದೆ
ಗಣೇಶ್, ನಟ
1. ಶೂಟಿಂಗ್ ಇದ್ದರೆ ಸೆಟ್ ನಲ್ಲಿ, ಚಿತ್ರೀಕರಣ ಇಲ್ಲದಿದ್ದಾಗ ಮನೆಗೆ ಅಭಿಮಾನಿಗಳು ಬರುತ್ತಿದ್ದರು. ಅವರನ್ನು ಭೇಟಿ ಮಾಡಿ ಮಾತನಾಡಿ, ಅವರ ಜತೆ ಫೋಟೋ ತೆಗೆಸಿಕೊಂಡು ಖುಷಿ ಪಡುವ ಕ್ಷಣಗಳನ್ನು ಪ್ರತಿ ದಿನ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಯಾಕೆಂದರೆ ಅಭಿಮಾನಿಗಳು ಇದ್ದರೆ ನಾವು. ಈಗ ಅವರನ್ನೇ ದೂರ ಮಾಡಿಕೊಂಡು ಲಾಕ್ ಡೌನ್ ಜೀವನ ಕಳೆಯುತ್ತಿದ್ದೇವೆ.
#Lockdown ಗೋಲ್ಡನ್ ಸ್ಟಾರ್ ಪುತ್ರಿ ಕೈಯಲ್ಲಿ ತಯಾರಾಗ್ತಿದೆ yummy ಅಡುಗೆ!
2. ಸಿನಿಮಾ ಶೂಟಿಂಗ್ ಇಲ್ಲದೆ ಇದ್ದರೆ ಟ್ರಾವೆಲ್ ಮಾಡಿಕೊಂಡು ಕತೆ ಕೇಳುತ್ತಿದ್ದೆ. ಈಗ ಮನೆಯಿಂದ ಆಚೆ ಹೋಗುವಂತಿಲ್ಲ. ಮನೆಗೂ ಯಾರನ್ನೂ ಕರೆಸಿಕೊಂಡು ಕತೆ ಕೇಳುವಂತಿಲ್ಲ. ಕತೆ ಕೇಳುವ ನನ್ನ ನೆಚ್ಚಿನ ಹಾವ್ಯಸವನ್ನು ಮಿಸ್ ಮಾಡಿಕೊಂಡಿದ್ದೇನೆ.
ನಮ್ಮೂರಿಂದ ದೂರವಾದ ನೋವು
ಧನಂಜಯ್, ನಟ
1. ನನ್ನ ಜೀವನದಲ್ಲಿ ಸ್ನೇಹಿತರು ಬಹು ಮುಖ್ಯ ಪಾತ್ರ ವಹಿಸಿದ್ದಾರೆ. ಎಷ್ಟೇ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಸ್ನೇಹಿತರನ್ನು ಭೇಟಿ ಮಾಡುತ್ತಿದ್ದೆ. ಈಗ ಅದು ಸಾಧ್ಯವಾಗುತ್ತಿಲ್ಲ. ಫೋನ್ ಮಾಡಿ ಮಾತನಾಡಿಸುವುದು ಅಷ್ಟೇ ಆಗಿದೆ.
ಕೊರೋನಾ ಸಂಕಷ್ಟ: ಜನರ ನೆರವಿಗೆ ಡಾಲಿ ಧನಂಜಯ್
2. ನಾನು ವಾರ ಅಥವಾ 15 ದಿನಕ್ಕೊಮ್ಮೆ ನನ್ನ ಹಳ್ಳಿಗೆ ಹೋಗಿ ಬರುತ್ತಿದ್ದೆ. ಆ ಮೂಲಕ ಹುಟ್ಟಿದ ಊರು, ಬೆಳೆದ ಪರಿಸರವನ್ನು ಯಾವತ್ತೂ ಮರೆತಿರಲಿಲ್ಲ. ಕೊರೋನಾ ಭೀತಿಯಿಂದ ಉಂಟಾಗಿರುವ ಲಾಕ್ ಡೌನ್, ಎಲ್ಲೂ ಹೋಗದಂತೆ ಮಾಡಿದೆ. ನನ್ನ ಊರನ್ನು ಮಿಸ್ ಮಾಡಿಕೊಂಡು ಮೂರು ವಾರ ಆಗುತ್ತಿದೆ.
ಗದ್ದೆಯ ನಂಟಿಲ್ಲದೆ ಬೇಸರ
ಆರ್ ಚಂದ್ರು, ನಿರ್ದೇಶಕ
1. ತೋಟಕ್ಕೆ ಹೋಗಿ ಕೃಷಿ ಕೆಲಸಗಳನ್ನು ಮಾಡಲು ಆಗುತ್ತಿಲ್ಲ. ನಾನು ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ಇರಲ್ಲ. ನನ್ನ ಊರಾದ ಕೇಶವಾರಕ್ಕೆ ಹೋಗಿ ಬಿಡುತ್ತಿದ್ದೆ. ಅಲ್ಲಿ ನಾನೇ ಜಮೀನು ತೆಗೆದುಕೊಂಡು ಕೃಷಿ ಮಾಡುತ್ತಿದ್ದೇನೆ. ನಾನೇ ಮುಂದೆ ನಿಂತು ಗದ್ದೆ ಕೆಲಸಗಳನ್ನು ಮಾಡುತ್ತಿದ್ದೆ. ನನಗೆ ಇಷ್ಟವಾದ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ ಎನ್ನುವ ಬೇಸರ ಇದೆ.
2. ನನ್ನದೇ ನಿರ್ದೇಶನ, ನಿರ್ಮಾಣದ ಬಹು ಭಾಷೆಯ ಕಬ್ಜ ಚಿತ್ರದ ಕೆಲಸಗಳನ್ನು ತುಂಬಾ ಉತ್ಸಾಹದಿಂದ ಮಾಡುತ್ತಿದ್ದೆ. ಈ ಚಿತ್ರಕ್ಕಾಗಿ ಬೇರೆ ಬೇರೆ ಭಾಷೆಯವರನ್ನು ಭೇಟಿ ಮಾಡುತ್ತಿದ್ದೆ. ಈಗ ಎಲ್ಲ ಕೆಲಸಗಳನ್ನು ನಿಲ್ಲಿಸಿ ಮನೆಯಲ್ಲಿ ಕೂರುವಂತಾಗಿದೆ.