ನೀತಾ ಅಂಬಾನಿ ನಾಟ್ಯ ವೈಭವ: ರಘುಪತಿ ರಾಘವ ಹಾಡಿಗೆ ನೃತ್ಯ: ವಿಡಿಯೋ ವೈರಲ್

ಇತ್ತೀಚೆಗೆ  ನೀತಾ ಮುಕೇಶ್ ಅವರು  ತಮ್ಮದೇ ಆದ ನೀತಾ ಮುಕೇಶ್ ಕಲ್ಚರಲ್ ಸೆಂಟರ್‌ ಎಂಬ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವೊಂದನ್ನು ಸ್ಥಾಪಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವತಃ ತಾವು ಕೂಡ ನೃತ್ಯ ಮಾಡಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು. 

Neeta ambani mind blowing dance performance for Ragupathi raghava song in NMACC inauguration program in Mumbai akb

ಮುಂಬೈ: ದೇಶದ ಆಗರ್ಭ ಶ್ರೀಮಂತ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಕೇವಲ ಮುಖೇಶ್ ಅಂಬಾನಿ ಪತ್ನಿ, ಆಗರ್ಭ ಶ್ರೀಮಂತನ ಪತ್ನಿ ಎಂದು ಗುರುತಿಸಿಕೊಂಡವರಲ್ಲ, ಭರತನಾಟ್ಯದಲ್ಲಿ ಆಸಕ್ತಿ ಇರುವ ಅವರೊಬ್ಬ ಪ್ರಖ್ಯಾತ ಭರತನಾಟ್ಯ ಕಲಾವಿದೆಯೂ ಹೌದು, ಅವರು ಈಗಾಗಲೇ ಹಲವು ಸಾರ್ವಜನಿಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನಗಳನ್ನೂ ನೀಡಿದ್ದಾರೆ. ಕೋಟ್ಯಾಂತರ ಜನರ ನಡುವೆ ನಿಂತರೂ ಎದ್ದು ಕಾಣುವ ರೂಪರಾಶಿಯನ್ನು ಹೊಂದಿರುವ ಪ್ರತಿಭಾನ್ವಿತ ಕಲಾವಿದೆಯೂ ಆಗಿರುವ ನೀತಾ ಓರ್ವ ಬ್ಯುಸಿನೆಸ್ ವುಮನ್ (Business woman) ಕೂಡ ಹೌದು. ತಾವು  ಸಾಂಸ್ಕೃತಿಕ ಚಟುವಟಿಕೆಗಳಲ್ಲಿ (Cultural events) ಭಾಗಿಯಾಗುವುದಲ್ಲದೇ ಹಲವು ಸಾಂಸ್ಕೃತಿಕ ಚಟುವಟಿಕೆಗಳಿಗೂ ಅವರು ಪ್ರೋತ್ಸಾಹವನ್ನು ನೀಡುತ್ತಾರೆ. ಇತ್ತೀಚೆಗೆ ಅವರು  ತಮ್ಮದೇ ಆದ ನೀತಾ ಮುಕೇಶ್ ಕಲ್ಚರಲ್ ಸೆಂಟರ್‌ ಎಂಬ ಸಾಂಸ್ಕೃತಿಕ ಚಟುವಟಿಕೆಯ ಕೇಂದ್ರವೊಂದನ್ನು ಸ್ಥಾಪಿಸಿದ್ದು, ಅದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ವತಃ ತಾವು ಕೂಡ ನೃತ್ಯ ಮಾಡಿ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು. 

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು ಮಾತ್ರವಲ್ಲದೇ ಸಮಾಜದ ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾಗಿಯಾಗಿದ್ದರು. ಇವರೆಲ್ಲರ ಮುಂದೆ ನೀತಾ ಅಂಬಾನಿ ರಘುಪತಿ ರಾಘವ ರಾಜಾರಾಮ್ ಹಾಡಿಗೆ ಭರತನಾಟ್ಯ ಶೈಲಿಯಲ್ಲಿ ನೃತ್ಯ ಮಾಡಿ ಬಂದಿದ್ದ ಅತಿಥಿಗಳ ಮನರಂಜಿಸಿದ್ದರು. ನೀತಾ ಅಂಬಾನಿ (Neeta ambani) ನೃತ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಗ್ರೇಟ್ ಇಂಡಿಯನ್ ಮ್ಯೂಸಿಕಲ್ ಸಿವಿಲೈಜೇಷನ್ ಟು ನೇಷನ್ (Great Indian Musical: Civilisation to Nation) ಎಂಬ ವಿಷಯದಲ್ಲಿ ಅವರು ರಘುಪತಿ ರಾಘವ ರಾಜಾರಾಮ್ ಹಾಡಿಗೆ ತಾವೇ ಕೊರಿಯೋಗ್ರಾಫ್ ಮಾಡಿ ನೃತ್ಯ ಮಾಡಿದರು. ಈ ವಿಡಿಯೋವನ್ನು ಅನೇಕ ಹವ್ಯಾಸಿ ಫೋಟೋಗ್ರಾಫರ್‌ಗಳು ಪಪ್ಪಾರಾಜಿಗಳು ಹಾಗೂ ಎನ್‌ಎಂಸಿಸಿ ಇಂಡಿಯಾದ ಸಾಮಾಜಿಕ ಜಾಲತಾಣ (Social Media) ಖಾತೆಗಳಲ್ಲಿ ಪೋಸ್ಟ್ ಆಗಿದ್ದು,  ಅನೇಕರು ನೀತಾ ಅಂಬಾನಿ ಅವರ ಡಾನ್ಸ್ ಹಾಗೂ ಅವರೇನು ಧರಿಸಿದ್ದರು ಎಂಬುದನ್ನು ನೋಡಲು ಈ ವಿಡಿಯೋ ವೀಕ್ಷಿಸಿದ್ದಾರೆ. 

ನೀತಾ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರ್ಜರಿ ಭೋಜನ; ಊಟದ ಫೋಟೋ ಶೇರ್ ಮಾಡಿದ ನಟಿ

ಮಾರ್ಚ್‌ 31 ರಂದು ಮುಂಬೈನಲ್ಲಿ ಎನ್‌ಎಂಎಸಿಸಿ  ಉದ್ಘಾಟನೆಯಾಗಿದೆ, ಈ ಕಾರ್ಯಕ್ರಮದಲ್ಲಿ ಶಾರೂಖ್ ಖಾನ್ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್, ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಅಲಿಯಾ ಭಟ್, ಜಾನ್ವಿ ಕಪೂರ್, ವರುಣ್ ಧವನ್, ಕ್ರಿತಿ ಸನನ್, ಕರೀನಾ ಕಪೂರ್, ಅಮೀರ್ ಖಾನ್, ಸೈಫ್ ಅಲಿ ಖಾನ್, ಕರೀಷ್ಮಾ ಕಪೂರ್, ವಿದ್ಯಾ ಬಾಲನ್ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಮಾತ್ರವಲ್ಲದೇ  ಹಾಗೂ ನೀತಾ ಅಂಬಾನಿ ಮುಕೇಶ್ ಅಂಬಾನಿ ಕುಟುಂಬದ ಸದಸ್ಯರಾದ ಇಶಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್  ಭಾಗವಹಿಸಿದ್ದು, ಎಲ್ಲರೂ ಅಂಬಾನಿ ಕುಟುಂಬದ ಎಲ್ಲರೂ ಸಂಪ್ರದಾಯಿಕ ಧಿರಿಸಿನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.  ಈ ಕಾರ್ಯಕ್ರಮಕ್ಕೆ ನೀತಾ ಅಂಬಾನಿ  ನೀಲಿ ಬಣ್ಣದ ಸಿಲ್ಕ್ ಸಾರಿ ಧರಿಸಿದ್ದರು, ಆದರೆ ನೃತ್ಯದ ಸಲುವಾಗಿ ಅವರು  ಪಿಂಕ್ ಹಾಗೂ ಕೆಂಪು ಬಣ್ಣ ಮಿಶ್ರಿತ ಲೆಹೆಂಗಾ ಸೆಟ್ ಅನ್ನು ಧರಿಸಿದ್ದರು. 

WPL ಫೈನಲ್ ತಲುಪಿದ ಮುಂಬೈ ಇಂಡಿಯನ್ಸ್, ನೀತಾ ಅಂಬಾನಿ ಜೊತೆ ಕುಣಿದು ಕುಪ್ಪಳಿಸಿದ ತಂಡ!

ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ನೃತ್ಯ ಹಾಗೂ ಹಾಡಿನ ಆಯ್ಕೆಯನ್ನು ಗಣ್ಯರು ಕೊಂಡಾಡಿದ್ದಾರೆ.  ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಇಷ್ಟೊಂದು ದೊಡ್ಡ ವೇದಿಕೆಯಲ್ಲಿ ನಾನು ನೃತ್ಯ ಪ್ರದರ್ಶಿಸಿದಾಗ ಇಷ್ಟು ದಶಕಗಳ ಕಾಲ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದರೂ ನಾನು ಆರು ವರ್ಷದವಳಿದ್ದಾಗ ಹೇಗೆ ಮೊದಲ ಬಾರಿ ನೃತ್ಯ ಪ್ರದರ್ಶನ ನೀಡುವಾಗ ಹೇಗೆ ಉತ್ಸಾಹವಿತ್ತೋ ಅದೇ ರೀತಿಯ ಉತ್ಸಾಹ ನನ್ನಲ್ಲಿತ್ತು. ನನಗೆ ಸಣ್ಣ ವಯಸ್ಸಿನಲ್ಲಿ ನೃತ್ಯ ಮಾಡುವಾಗ ಇದ್ದಷ್ಟೇ ಎನರ್ಜಿ ಈ ನೃತ್ಯ ಮಾಡುವಾಗಲೂ ಅನುಭವಕ್ಕೆ ಬಂತು ಎಂದು ಹೇಳಿಕೊಂಡರು. 

 

Latest Videos
Follow Us:
Download App:
  • android
  • ios