WPL ಫೈನಲ್ ತಲುಪಿದ ಮುಂಬೈ ಇಂಡಿಯನ್ಸ್, ನೀತಾ ಅಂಬಾನಿ ಜೊತೆ ಕುಣಿದು ಕುಪ್ಪಳಿಸಿದ ತಂಡ!
ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಫೈನಲ್ ಪ್ರವೇಶಿಸಿದೆ. ಈ ಸಂಭ್ರಮವನ್ನು ಖುದ್ದು ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ತಂಡದ ಜೊತೆ ಸಂಭ್ರಮಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಪ್ರತಿಯೊಬ್ಬ ಆಟಗಾರ್ತಿಯರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಮುಂಬೈ(ಮಾ.25): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮಹಿಳಾ ತಂಡ, ಯುಪಿ ವಾರಿಯರ್ಸ್ ವಿರುದ್ಧ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ. ಚೊಚ್ಚಲ ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಫೈನಲ್ ಪ್ರವೇಶಿಸಿದೆ. ಈ ಸಂಭ್ರವನ್ನು ತಂಡ ಫ್ರಾಂಚೈಸಿ ಮಾಲಕಿ ನೀತಾ ಅಂಬಾನಿ ಜೊತೆ ಆಚರಿಸಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್, ಕೋಚ್ ಜುಲನ್ ಗೋಸ್ವಾಮಿ ಸೇರಿದಂತೆ ಪ್ರತಿಯೊಬ್ಬ ಮುಂಬೈ ಇಂಡಿಯನ್ಸ್ ಪ್ಲೇಯರ್ಸ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಯುಪಿ ವಾರಿಯರ್ಸ್ ವಿರುದ್ದದ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 72 ರನ್ ಗೆಲುವು ದಾಖಲಿಸಿ ಫೈನಲ್‌ಗೆ ಎಂಟ್ರಿಕೊಟ್ಟಿತು. ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಎಲಿಮಿನೇಟರ್ ಪಂದ್ಯದ ಗೆಲುವಿನ ಬಳಿಕ ಮುಂಬೈ ಇಂಡಿಯನ್ಸ್ ಆಟಗಾರ್ತಿಯರು ಮೈದಾನದಲ್ಲಿ ಸಂಭ್ರಮ ಆಚರಿಸಿದರು. ಇದೇ ವೇಳೆ ನೀತಾ ಅಂಬಾನಿ ಮುಂಬೈ ಆಟಗಾರ್ತಿಯನ್ನು ಭೇಟಿಯಾಗಿ ಸಂತಸ ಹಂಚಿಕೊಂಡರು.
IPL 2023 ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭೇಟಿಯಾಗೋಣ: RCB ಫ್ಯಾನ್ಸ್‌ಗೆ ಮ್ಯಾಕ್ಸ್‌ವೆಲ್ ಸ್ಪೆಷಲ್ ಮೆಸೇಜ್..!
ನೀತಾ ಅಂಬಾನಿ ಮಹಿಳಾ ತಂಡ ಫೈನಲ್ ಪ್ರವೇಶವನ್ನು ವಿಶೇಷವಾಗಿ ಆಚರಿಸಲು ಮುಂದಾಗಿದ್ದಾರೆ. ನೀತಾ ಅಂಬಾನಿ ಮಹಿಳಾ ತಂಡದ ಒಬ್ಬೊಬ್ಬ ಆಟಗಾರ್ತಿ ಹೆಸರು ಕೂಗಿದ್ದಾರೆ. ಈ ವೇಳೆ ಆಟಗಾರ್ತಿಯರು ಡ್ಯಾನ್ಸ್ ಮೂಲಕ ಸಂಭ್ರಮ ಆಚರಿಸಿದ್ದಾರೆ. ಸಹ ಆಟಗಾರ್ತಿಯರು ಹಡಲ್ ನಡುವೆ ಡ್ಯಾನ್ಸ್ ಮಾಡುವ ಆಟಗಾರ್ತಿಗೆ ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದ್ದಾರೆ.
ಇತ್ತ ನೀತಾ ಅಂಬಾನಿ ಕೂಡ ಮಹಿಳಾ ತಂಡದ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಮುಂಬೈ ಇಂಡಿಯನ್ಸ್ ತಂಡದ ಡ್ಯಾನ್ಸ್ ಅಭಿಮಾನಿಗಳ ಹೃದಯ ಗೆದ್ದಿದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
IPL ದುಬಾರಿ ಆಟಗಾರ ಸ್ಯಾಮ್ ಕರ್ರನ್ Love Story ತುಂಬಾ ಇಂಟ್ರೆಸ್ಟಿಂಗ್, ಗರ್ಲ್‌ಫ್ರೆಂಡ್ ಯಾರು ಗೊತ್ತಾ?
ಲೀಗ್ ಹಂತದಲ್ಲಿ 6 ಪಂದ್ಯ ಗೆದ್ದು ಅಗ್ರಸ್ಥಾನಿಯಾದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ಲೀಗ್ ಹಂತದಲ್ಲಿ ಸತತ 2 ಪಂದ್ಯದಲ್ಲಿ ಮುಗ್ಗರಿಸಿತ್ತು. ಪ್ಲೇ ಆಫ್ ಹಂತಕ್ಕೇರಿದ ಮೊದಲ ತಂಡ ಮುಂಬೈ ಇಂಡಿಯನ್ಸ್ ಎಲಿಮಿನೇಟರ್ ಪಂದ್ಯದ ಮೂಲಕ ಫೈನಲ್ ಪ್ರವೇಶಿಸಿದೆ. ಟೂರ್ನಿಯ ಮೊದಲ ಐದೂ ಪಂದ್ಯಗಳಲ್ಲಿ ಗೆದ್ದಿದ್ದ ಮುಂಬೈ ಬಳಿಕ 2 ಪಂದ್ಯ ಸೋತಿತ್ತು. ಕೊನೆ ಪಂದ್ಯದಲ್ಲಿ ಗೆದ್ದರೂ ನೆಟ್ ರನ್ರೇಟ್ ಆಧಾರದಲ್ಲಿ 2ನೇ ಸ್ಥಾನ ಪಡೆದುಕೊಂಡಿತು. ಹೀಗಾಗಿ ಮುಂಬೈ ಇಂಡಿಯನ್ಸ್ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು. ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಫೈನಲ್ ಪಂದ್ಯ ಮಾ.26ಕ್ಕೆ ನಡೆಯಲಿದೆ.