ಶ್ರೀನಿಧಿಯ ಈ ಉತ್ತರ ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ‘ಕೆಜಿಎಫ್’ ಜೋಡಿಯಾದ ಯಶ್-ಶ್ರೀನಿಧಿ ಬಗ್ಗೆ ಅಭಿಮಾನಿಗಳಿಗೆ ಈಗಾಗಲೇ ವಿಶೇಷ ಅಭಿಮಾನವಿದೆ. ಹೀಗಿರುವಾಗ, ಯಶ್‌ಗಿಂತ ನಾನಿಯೇ ಹೆಚ್ಚು ನಗಿಸುತ್ತಾರೆ ಎಂಬ ಶ್ರೀನಿಧಿಯ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಸಹಜವೇ! ಆದರೆ, ಇಲ್ಲಿರೋ ಮ್ಯಾಟರ್ ಏನ್ ಹೇಳಿ..!

‘ಕೆಜಿಎಫ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ ನಟಿ ಶ್ರೀನಿಧಿ ಶೆಟ್ಟಿ ಇದೀಗ ಸಿನಿಮಾ ಆಯ್ಕೆಯಲ್ಲಿ ಸಾಕಷ್ಟು ಚ್ಯೂಸಿ ಆಗಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು ಸೇರಿದಂತೆ ಬೇರೆ ಭಾಷೆಗಳಲ್ಲೂ ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಿರುವ ಅವರು, ಸದ್ಯ ವಿಭಿನ್ನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶ್ರೀನಿಧಿ ಶೆಟ್ಟಿ ನೀಡಿರುವ ಇತ್ತೀಚಿನ ಸಂದರ್ಶನದ ಹೇಳಿಕೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತು ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ!

ಮಾಧ್ಯಮ ಸಂವಾದವೊಂದರಲ್ಲಿ ಶ್ರೀನಿಧಿ ಶೆಟ್ಟಿಗೆ ಕುತೂಹಲಕಾರಿ ಪ್ರಶ್ನೆಯೊಂದು ಎದುರಾಗಿದೆ. ‘ಯಶ್ ಅಥವಾ ನಾನಿ, ನಿಮ್ಮನ್ನು ಯಾರು ಹೆಚ್ಚು ನಗಿಸುತ್ತಾರೆ?’ ಎಂದು ಕೇಳಿದಾಗ, ನಟಿ ನೀಡಿದ ಉತ್ತರ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇಬ್ಬರೂ ನಟರ ಜೊತೆಗಿನ ತಮ್ಮ ಅನುಭವವನ್ನು ನೆನಪಿಸಿಕೊಂಡ ಶ್ರೀನಿಧಿ, ಯಶ್ ಮತ್ತು ನಾನಿ ಇಬ್ಬರೂ ತಮ್ಮ ವೃತ್ತಿಜೀವನದಲ್ಲಿ ವಿಶೇಷ ಸ್ಥಾನ ಹೊಂದಿರುವವರು ಎಂದು ಹೇಳಿದ್ದಾರೆ.

ಶ್ರೀನಿಧಿ ಶೆಟ್ಟಿಯ ಸಿನಿ ಜರ್ನಿಯಲ್ಲಿ ಯಶ್ ಅವರಿಗೆ ವಿಶೇಷ ಸ್ಥಾನವಿದೆ. ‘ಕೆಜಿಎಫ್’ ಸಿನಿಮಾದಲ್ಲಿ ಯಶ್ ಜೊತೆ ನಟಿಸುವ ಮೂಲಕವೇ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಗಮನ ಸೆಳೆದರು. ಮತ್ತೊಂದೆಡೆ ತೆಲುಗು ಚಿತ್ರರಂಗದಲ್ಲಿ ನಾನಿ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ಶ್ರೀನಿಧಿಗೆ ದೊರಕಿದೆ. ಹೀಗಾಗಿ ಇಬ್ಬರೂ ನಟರು ತಮ್ಮ ಪಾಲಿಗೆ ತುಂಬಾ ವಿಶೇಷ ಎಂದು ಅವರು ಹೇಳಿದ್ದಾರೆ.

ಆದರೆ ಇಬ್ಬರ ಸ್ವಭಾವವನ್ನು ಹೋಲಿಸಿದಾಗ ಶ್ರೀನಿಧಿಗೆ ಒಂದು ವ್ಯತ್ಯಾಸ ಸ್ಪಷ್ಟವಾಗಿ ಕಾಣಿಸಿದೆ. ಯಶ್ ಅವರ ಬಗ್ಗೆ ಮಾತನಾಡಿದ ನಟಿ, ಅವರು ಸ್ವಲ್ಪ ರಿಸರ್ವ್ಡ್ ಸ್ವಭಾವದವರು ಎಂದಿದ್ದಾರೆ. ಅಗತ್ಯವಿದ್ದಷ್ಟು ಮಾತ್ರ ಮಾತನಾಡುವ ಯಶ್, ಹೊರಗೆ ಗಂಭೀರವಾಗಿ ಕಾಣಿಸಿಕೊಂಡರೂ ಸೆಟ್‌ನಲ್ಲಿ ತಮ್ಮದೇ ಆದ ಹಾಸ್ಯಮಯ ಕ್ಷಣಗಳನ್ನು ಸೃಷ್ಟಿಸುತ್ತಾರೆ ಎಂದು ಶ್ರೀನಿಧಿ ತಿಳಿಸಿದ್ದಾರೆ.

ಇನ್ನು ನಾನಿ ವಿಚಾರಕ್ಕೆ ಬಂದರೆ ಕಥೆಯೇ ಬೇರೆ! ನಾನಿ ತುಂಬಾ ಮುಕ್ತವಾಗಿ ಮಾತನಾಡುವ ವ್ಯಕ್ತಿ ಎಂದು ಶ್ರೀನಿಧಿ ಹೇಳಿದ್ದಾರೆ. ಸೆಟ್‌ನಲ್ಲಿ ಜೋಕ್ಸ್ ಮಾಡುತ್ತಾ, ಸಹನಟರನ್ನು ಕಾಲೆಳೆಯುತ್ತಾ ಎಲ್ಲರನ್ನೂ ನಗಿಸುತ್ತಿರುತ್ತಾರೆ. ಅವರ ಈ ಗುಣ ತಮ್ಮ ಸ್ವಭಾವಕ್ಕೂ ಹತ್ತಿರವಾಗಿದೆ ಎಂದು ಶ್ರೀನಿಧಿ ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೆ ಅಂತಿಮವಾಗಿ ಯಶ್ ಅಥವಾ ನಾನಿ... ಶ್ರೀನಿಧಿಯನ್ನು ಹೆಚ್ಚು ನಗಿಸುವವರು ಯಾರು? ಈ ಪ್ರಶ್ನೆಗೆ ನಟಿ ಯಾವುದೇ ಗೊಂದಲವಿಲ್ಲದೆ ನಾನಿ ಅವರ ಹೆಸರನ್ನೇ ಹೇಳಿದ್ದಾರೆ. ನಗಿಸುವ ವಿಚಾರದಲ್ಲಿ ಯಶ್‌ಗಿಂತ ನಾನಿಯೇ ಬೆಸ್ಟ್ ಎಂದು ಶ್ರೀನಿಧಿ ಶೆಟ್ಟಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಶ್ರೀನಿಧಿಯ ಈ ಉತ್ತರ ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ‘ಕೆಜಿಎಫ್’ ಜೋಡಿಯಾದ ಯಶ್-ಶ್ರೀನಿಧಿ ಬಗ್ಗೆ ಅಭಿಮಾನಿಗಳಿಗೆ ಈಗಾಗಲೇ ವಿಶೇಷ ಅಭಿಮಾನವಿದೆ. ಹೀಗಿರುವಾಗ, ಯಶ್‌ಗಿಂತ ನಾನಿಯೇ ಹೆಚ್ಚು ನಗಿಸುತ್ತಾರೆ ಎಂಬ ಶ್ರೀನಿಧಿಯ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಸಹಜವೇ! ಆದರೆ, ಇದು ಕೇವಲ ನಗಿಸುವುದಕ್ಕೆ ಸಂಬಂಧಪಟ್ಟ ಮಾತು ಎಂಬುದನ್ನು ಯಾರಾದರೂ ಹೇಗೆ ಮರೆಯಲು ಸಾರ್ಧಯ?!