ಕನ್ನಡದ ನಟಿ ರಚಿತಾ ರಾಮ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ರಾತ್ರಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್‌ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಈ ವೇಳೆ ಓರ್ವ ಅಭಿಮಾನಿ ಅವರ ಕೆನ್ನೆ ಗಿಂಡಿ ಸುದ್ದಿಯಾಗಿದ್ದಾನೆ.

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ವಿಂಪಲ್‌ ಕ್ವೀನ್‌ ರಚಿತಾ ರಾಮ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ‌, ತಮ್ಮ ಆರ್‌ಆರ್‌ ನಗರ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ರಾತ್ರಿ 12 ಗಂಟೆಗೆ ಅಭಿಮಾನಿಗಳ ಜೊತೆ ಕೇಕ್‌ ಕತ್ತರಿಸಿ ಸಂಭ್ರಮಿಸಿದರು.

ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್

ತಮ್ಮ ನೆಚ್ಚಿನ ನಟಿಯ ಬರ್ತ್‌ಡೇ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಅವರ ಮನೆಯತ್ತ ಜಮಾಯಿಸಿದ್ದರು. ಈ ವೇಳೆ ರಚಿತಾ ರಾಮ್‌ ಪ್ರತಿಯೊಬ್ಬರ ಶುಭಾಯಶಗಳನ್ನು ಪ್ರೀತಿಯಿಂದ ಖುಷಿ ಖುಷಿಯಾಗಿ ಸ್ವೀಕರಿಸಿದರು. ಜೊತೆಗೆ ತಮಗೆ ಶುಭ ಹಾರೈಸಲು ಬಂದ ಪ್ರತಿ ಅಭಿಮಾನಿಗಳಿಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡಿದರು. ಈ ವೇಳೆ ಓರ್ವ ಅಭಿಮಾನಿ ಅವರ ಹತ್ತಿರಕ್ಕೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿ ವಾಪಸ್‌ ಹೋಗುವಾಗ ಪ್ರೀತಿಯಿಂದ ಅವರ ಕೆನ್ನೆಯನ್ನ ಗಿಂಡಿದ್ದಾನೆ.

ಆಗ ರಚಿತಾ ರಾಮ್‌ ಒಂದು ಕ್ಷಣ ಶಾಕ್‌ ಆಗಿದ್ದಾರೆ. ಕೊನೆಗೆ ತುಸು ಕೋಪದಲ್ಲಿ ನಕ್ಕು ʼಯಾರೋ ಇವನುʼ ಅನ್ನೋ ರೀತಿಯಲ್ಲಿ ಸುಮ್ಮನಾಗಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. ವಿಡಿಯೋ ನೋಡಿದ ರಚಿತಾ ಅಭಿಮಾನಿಗಳು.. ಕೋಪದಲ್ಲೂ ನಮ್ಮ ಡಿಂಪಲ್ಲು ತುಂಬಾ ಮುದ್ದಾಗಿ ಕಾಣ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಜೊತೆಗೆ ಆ ವಿಡಿಯೋ ನೋಡಿ ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

ಅಭಿಮಾನಿಗಳಿಗೆ ರಚಿತಾ ರಾಮ್‌ ವಿಶೇಷ ಕರೆ

ಅಭಿಮಾನಿಗಳ ಅಭಿಮಾನಕ್ಕೆ ಕಣ್ಣೀರಾದ ನಟಿ.. ಇಷ್ಟೊಂದು ಅಭಿಮಾನಿಗಳು ಬಂದಿದ್ದೀರಾ. ನಿಮ್ಮೆಲ್ಲರಿಗೂ ಧನ್ಯವಾದಗಳು. ನೀವೆಲ್ಲರೂ ಕೂಗೋದು ನಮ್ಮ ಕುಟುಂಬದ ಪರವಾಗಿ ನಿಮಗಾಗಿ ನಾನು ಕೂಗ್ತೀನಿ. ಎಲ್ಲರೂ ಒಳ್ಳಯದನ್ನೇ ಮಾಡಿ. ಯಾರು ಯಾರಿಗೂ ಕೆಟ್ಟದನ್ನ ಮಾಡಬೇಡಿ. ಇರೋದು ಒಂದು ಜೀವನ ಚೆನ್ನಾಗಿ ಎಂಜಯ್ ಮಾಡಿ. ಒಳ್ಳೇತನದಲ್ಲಿ‌ ದುಡ್ಡು ಮಾಡಿ, ಕೈಲಾದ ಸಹಾಯ ಮಾಡಿ. ಒಳ್ಳೆಯ ದಾರಿಯಲ್ಲಿ ದುಡ್ಡು ಸಂಪಾದಿಸಿ, ಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದರು.

ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಚಿತಾ ರಾಮ್, ನಟ ದರ್ಶನ್ ಅವರನ್ನು ನೆನಪಿಸಿಕೊಂಡು ವೇದಿಕೆಯಲ್ಲಿ ಭಾವುಕರಾಗಿದ್ದಾರೆ. ಜನ್ಮದಿನದ ಅಂಗವಾಗಿ ದರ್ಶನ್ ಅವರ ಆಶೀರ್ವಾದ ಪಡೆಯಲು ಜೈಲಿಗೆ ತೆರಳಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ. ನನ್ನ ಹುಟ್ಟುಹಬ್ಬದ ಅಂಗವಾಗಿ ದರ್ಶನ್ ಅವರ ಆಶೀರ್ವಾದ ಪಡೆಯಲು ನಾನು ಹೋಗಿದ್ದೆ. ಆದರೆ ವಾರಕ್ಕೆ ಕೇವಲ ಎರಡು ಭೇಟಿಗಳಿಗೆ ಮಾತ್ರ ಅವಕಾಶವಿದ್ದು, ಕುಟುಂಬದವರು ಭೇಟಿಯಾಗಬೇಕಿದ್ದ ಕಾರಣ ಮುಖಾಮುಖಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಸುಮಾರು ಎರಡೂವರೆ ಗಂಟೆ ಕಾದು ವಾಪಸ್ ಬಂದೆ. ಅವರ ಆಶೀರ್ವಾದ ಸದಾ ನನ್ನ ಮೇಲಿದೆ, ಮುಂದಿನ ದಿನಗಳಲ್ಲಿ ಖಂಡಿತ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.

1992ರ ಅಕ್ಟೋಬರ್​ 3ರಂದು ಜನಿಸಿರುವ ರಚಿತಾ ರಾಮ್‌ಗೆ 33 ವರ್ಷ. ಈ ಬಾರಿಯ ಹುಟ್ಟಹಬ್ಬ ಆಚರಣೆಯನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುವುದಾಗಿ ರಚಿತಾ ರಾಮ್‌ ಸೋಶಿಯಲ್‌ ಮೀಡಿಯಾದಲ್ಲಿ ತಿಳಿಸಿದ್ದರು. ಅಂತೆಯೇ ನೂರಾರು ಅಭಿಮಾನಿಗಳು ಅವರ ಮನೆಯತ್ತ ಆಗಮಿಸಿದ್ದರು.

View post on Instagram