ಮುಂಬೈ(ಜು.08): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ಬಳಿಕ ಮಧ್ಯ ಪ್ರದೇಶದ 20 ವರ್ಷದ ಕಾರ್ಮಿಕನೊಬ್ಬನಿಗೆ ನಿರಂತರ ಫೋನ್‌ ಕರೆಗಳು ಬರುತ್ತಿವೆಯಂತೆ. ಇದರಿಂದ ರೋಸಿಹೋದ ಆತ ಪೊಲೀಸರಿಗೆ ದೂರು ನೀಡಿದ್ದಾನೆ.

24 ಗಂಟೆಯಲ್ಲಿ 4.3 ಮಿಲಿಯನ್ ಲೈಕ್ಸ್ ಪಡೆದ 'ದಿಲ್ ಬೇಚಾರಾ'; ಸುಶಾಂತ್ ಖುಷಿ ಪಡಲಿದ್ದಾನೆ!

ಅಷ್ಟಕ್ಕೂ ಆತನಿಗೆ ಫೋನ್‌ ಕರೆಗಳು ಬರಲು ಕಾರಣವೆಂದರೆ, ಸುಶಾಂತ್‌ ಪ್ರೇಯಸಿ ಎನ್ನಲಾದ ಅಂಕಿತಾ ಲೋಖಂಡೆ ಹೆಸರಿನಲ್ಲಿ ರಚಿಸಿದ್ದ ಫೇಸ್‌ಬುಕ್‌ ಪೇಜ್‌. ಈ ಪೇಜ್‌ನಲ್ಲಿ ಕಾರ್ಮಿಕನ ಫೋನ್‌ ನಂಬರ್‌ ನಮೂದಾಗಿದೆ. ಅಂಕಿತಾ ಲೋಖಂಡೆ ಫೇಸ್‌ಬುಕ್‌ ಪೇಜ್‌ಗೆ 40 ಸಾವಿರ ಹಿಂಬಾಲಕರಿದ್ದು, ಇಂದೋರ್‌ನೊಂದಿಗೆ ನಟಿಗೆ ನಂಟಿದೆ.

ಬ್ಯಾಡ್ ಕಮೆಂಟ್ ಸುರಿಮಳೆ, ಸೋಶಿಯಲ್ ಮೀಡಿಯಾದಿಂದ ಕಾಲ್ಕಿತ್ತ ಆಲಿಯಾ ಅಮ್ಮ

ಸುಶಾಂತ್‌ ಆತ್ಮಹತ್ಯೆಯ ಬಳಿಕ ಅನೇಕರು ಫೋನ್‌ ಮಾಡಿ ಅಂಕಿತಾ ಮೇಲಿನ ತಮ್ಮ ಕೋಪವನ್ನು ತೋಡಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಪೇಜ್‌ನಲ್ಲಿ ಕಾರ್ಮಿಕನ ಫೋನ್‌ ನಂಬರ್‌ ಬಂದಿದ್ದು ಹೇಗೆ ಎಂಬ ಬಗ್ಗೆ ಪೊಲೀಸರೂ ತಲೆ ಕೆಡಿಸಿಕೊಂಡಿದ್ದಾರೆ.