ಸುಶಾಂತ್ ಸಿಂಗ್ ಅಭಿನಯದ 'ದಿಲ್ ಬೇಚಾರಾ' ಟ್ರೈಲರ್‌ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗುತ್ತಿದೆ. ಸೋಮವಾರ ಬಿಡುಗಡೆಯಾದ ಟ್ರೈಲರ್‌ 24 ಗಂಟೆಯೊಳಗೆ ಯೂಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 

ಧೂಳೆಬ್ಬಿಸುತ್ತಿದೆ ಸುಶಾಂತ್ ಕೊನೆ ಚಿತ್ರ  'ದಿಲ್ ಬೇಚಾರ'ದ ಟ್ರೇಲರ್ 

24 ಗಂಟೆಗಳಲ್ಲಿ 4.3 ಮಿಲಿಯನ್ ಅಂದರೆ 40 ಲಕ್ಷ 30 ಸಾವಿರ ಲೈಕ್ಸ್ ಪಡೆದುಕೊಂಡಿದೆ. ಹಾಲಿವುಡ್‌ನ ಟ್ರೈಲರ್‌ಗಳಾದ ಅ ಅವೆಂಜರ್ಸ್‌ನ ಇನ್‌ಫಿನಿಟಿ ವಾರ್ ಮತ್ತು ಎಂಡ್‌ಗೇಮ್‌ ರೆಕಾರ್ಡ್ ಬ್ರೇಕ್ ಮಾಡಿದೆ.  ಆವೆಂಜರ್ಸ್‌ ಎಂಡ್ ಗೇಮ್‌ 3.2 ಮಿಲಿಯನ್ ಮತ್ತು ಇನ್‌ಫಿನಿಟಿ 2.9 ಮಿಲಿಯನ್ ಲೈಕ್ಸ್ ಪಡೆದುಕೊಂಡಿತ್ತು.

2014ರಲ್ಲಿ ತೆರೆ ಕಂಡ ಹಾಲಿವುಡ್‌ ರೋಮ್ಯಾಂಟಿಕ್ ಡ್ರಾಮ ಸಿನಿಮಾ 'The fault in our stars' ರಿಮೇಕ್‌ ಆಗಿದ್ದು ಸುಶಾಂತ್‌ಗೆ ಜೋಡಿಯಾಗಿ ಸಂಜನಾ ಸಂಘ್ವಿ ಕಾಣಿಸಿಕೊಂಡಿದ್ದಾರೆ.  ಚಿತ್ರದಲ್ಲಿ ಸೇಫ್‌ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ.  ರೆಹಮಾನ್‌ ಸಂಗೀತಾ ಅಮಿತಾಭ್ ಭಟ್ಟಾಚಾರ್ಯ  ಸಾಹಿತ್ಯದಲ್ಲಿ ಮೂಡಿರುವ ಹಾಡುಗಳು ಹಿಟ್ ಆಗುವುದರಲ್ಲಿ ಅನುಮಾನವಿಲ್ಲ ಎನ್ನುತ್ತಿದೆ ಬಾಲಿವುಡ್. ಡಿಸ್ನಿ-ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಜುಲೈ 24ರಂದು ಸಿನಿಮಾ ತೆರೆ ಕಾಣಲಿದೆ.

 

ಟ್ರೈಲರ್ ವೀಕ್ಷಿಸದ ಅಭಿಮಾನಿಗಳು ಸುಶಾಂತ್ ಇದಿದ್ದರೆ ಖುಷಿ ಪಡುತ್ತಿದ್ದ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಒಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಣೆಯಾದ ಬಾಲಿವುಡ್‌ ಸಿನಿಮಾ ಇದಾಗಬೇಕೆಂದು ಅಭಿಮಾನಿಗಳು ಆಶಿಸಿದ್ದಾರೆ.