ಬೆಂಗಳೂರು (ಆ. 14): ‘ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗಲಿ’ ಎಂದು ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಣಧೀರ ಪಡೆ ಆ.14 ಮತ್ತು 15 ರಂದು ಬೆಳಗ್ಗೆ 10 ಕ್ಕೆ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ‘ಉಪವಾಸ ಸತ್ಯಾಗ್ರಹ ಮತ್ತು ಅ ಹೋರಾತ್ರಿ ಧರಣಿ’ ಹಮ್ಮಿಕೊಂಡಿದೆ.

ಕನ್ನಡಿಗರಿಗೆ ಗುಡ್ ನ್ಯೂಸ್ : ಉದ್ಯೋಗ ಮೀಸಲಿಗೆ ಸಿಎಂ ಸ್ಪಂದನೆ

ಇಲ್ಲಿನ ಉದ್ಯೋಗಗಳು ಸ್ಥಳೀಯರಿಗೆ ಸಿಗಬೇಕು. ಬಹುರಾಷ್ಟ್ರೀಯ ಕಂಪನಿ, ಬ್ಯಾಂಕ್ ಮತ್ತಿತರ ಉದ್ಯಮಗಳು ಕನ್ನಡಿಗರಿಗೆ ಕೆಲಸ ಕೊಡಲು ಹಿಂದೇಟು ಹಾಕುತ್ತಿವೆ. ಈ ಕುರಿತು ಹಿಂದೆ ಸಾಕಷ್ಟು ಬಾರಿ ಮನವಿ, ಅಭಿಯಾನ ಮಾಡಿದರೂ ಸರ್ಕಾರಗಳು ಭರವಸೆ ನೀಡಿ ಸುಮ್ಮನಾಗಿವೆ. ಹೀಗಾಗಿ ಪ್ರಸ್ತುತ ಧರಣಿ ಹಮ್ಮಿಕೊಳ್ಳಲಾಗಿದೆ.

ಕನ್ನಡಿಗರ ಉದ್ಯೋಗ : ಸರೋಜಿನಿ ಮಹಿಷಿ ವರದಿ ಶಿಫಾರಸುಗಳೇನು?

ನಟ ಉಪೇಂದ್ರ, ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ.ಸಿದ್ಧರಾಮಯ್ಯ, ಹೋರಾಟಗಾರರಾದ ವಾಟಾಳ್ ನಾಗರಾಜ್, ಕರವೇ ನಾರಾಯಣ ಹಾಗೂ ವಿವಿಧ ಗಣ್ಯರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.