ಬೆಳಗಾವಿ (ಜ. 07):  ಗಡಿ ವಿವಾದ ಒಂದಲ್ಲಾ ಒಂದು ಕಿರಿಕ್ ಮಾಡುತ್ತಲೇ ಇರುತ್ತದೆ. ಕೊಲ್ಹಾಪುರದಲ್ಲಿ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಗೆ ಶಿವಸೇನೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪೋಸ್ಟರ್ ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿತ್ತು. ಈಗ ಹಿಂದಿಯ 'ತಾನಾಜಿ' ಚಿತ್ರದ ರಿಲೀಸ್ ಗೆ ಕರ್ನಾಟಕದಲ್ಲಿ ಸಮಸ್ಯೆ ಎದುರಾಗಿದೆ. 

ರಾಕಿಭಾಯ್ ಬರ್ತಡೇಗೆ ಅಭಿಮಾನಿಗಳಿಂದ ಸಮಾಜ ಸೇವೆ; ಫೋಟೋಗಳೇ ಎಲ್ಲಾ ಹೇಳ್ತವೆ!

ಜನವರಿ-10 ರಂದು ಅಜಯ್ ದೇವಗನ್ ನಟನೆಯ 'ತಾನಾಜಿ' ಕರ್ನಾಟಕದಲ್ಲಿ ಚಿತ್ರ ರಿಲೀಸ್ ಆಗಲು ಬಿಡುವುದಿಲ್ಲ. ಫಿಲ್ಮ್ ಚೇಂಬರ್ ಮುಂದೆ ಪ್ರತಿಭಟನೆ ಮಾಡುವುದಾಗಿ ಕರ್ನಾಟಕ ನವ ನಿರ್ಮಾಣ ಸೇನೆ ಎಚ್ಚರಿಕೆ ನೀಡಿವೆ.  

ಒಬ್ಬಳೇ ಓಡಾಡೋದನ್ನು ಕಲಿಯೋಕೆ ಸೋಲೋ ಟ್ರಿಪ್ ಹೋದ್ರಂತೆ ಅನುಪಮಾ ಗೌಡ!

'ತಾನಾಜಿ' ಚಿತ್ರ ಕರ್ನಾಟಕದಲ್ಲಿ 200 ಥಿಯೇಟರ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಇದನ್ನ ವಿರೋಧಿಸಿ ಇಂದು ಫಿಲ್ಮಂ ಚೇಂಬರ್ ಗೆ ನವ ನಿರ್ಮಾಣ ಸೇನೆ ಮನವಿ ಮಾಡಿದೆ.  ತಾನಾಜಿ ರಿಲೀಸ್ ಆದ್ರೆ ಹೋರಾಟ ಮಾಡಲಾಗುತ್ತೆ ಅಂತ ಎಚ್ಚರಿಕೆ ನೀಡಿವೆ. 

ಮನವಿ ಸ್ವೀಕರಿಸಿದ ವಾಣಿಜ್ಯ ಮಂಡಳಿ  ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಜೊತೆ ಮಾತುಕತೆ ನಡೆಸುತ್ತೇವೆ ಎಂದು ಸ್ಪಷ್ಟನೆ ನೀಡಿದೆ.  ಹೋರಾಟಗಾರರಿಗೆ  ರಕ್ಷಿತ್ ಶೆಟ್ಟಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.