Asianet Suvarna News Asianet Suvarna News

Mukhyamantri Drama: ಚಿಕ್ಕಮಗಳೂರಿನಲ್ಲಿ ಮತ್ತೊಮ್ಮೆ ಪ್ರದರ್ಶನ ಕಂಡ ಪ್ರಸಿದ್ಧ ಮುಖ್ಯಮಂತ್ರಿ ನಾಟಕ

ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ  780ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಮತ್ತೊಮ್ಮೆ ಪರದೆ ಮೇಲೆ ಮನೋಜ್ಞವಾಗಿ ಮೂಡಿಬಂದು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು.

kannada iconic drama mukhyamantri reaches another milestone in chikkamagaluru gow
Author
First Published Dec 12, 2022, 8:43 PM IST

ಚಿಕ್ಕಮಗಳೂರು (ಡಿ.12): ಇದುವರೆಗೂ 780ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಮತ್ತೊಮ್ಮೆ ಪರದೆ ಮೇಲೆ ಮನೋಜ್ಞವಾಗಿ ಮೂಡಿಬಂದು ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಯಿತು. ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಟಿ.ಎಸ್.ಲೋಹಿತಾಶ್ವ ನೆನಪಿನಲ್ಲಿ ಹಮ್ಮಿಕೊಂಡಿದ್ದ ಮುಖ್ಯಮಂತ್ರಿ ನಾಟಕ ಪ್ರದರ್ಶನ ರಾಜಕೀಯ ವಿದ್ಯಮಾನಗಳನ್ನು ತೆರೆದಿಟ್ಟು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ರಾಜಕೀಯ ಚದುರಂಗದಾಟದಲ್ಲಿ ಮುಖ್ಯಮಂತ್ರಿ ಹುದ್ದೆಗಿಟ್ಟಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡಬೇಕು ಎಂಬು ದನ್ನು ತೆರೆದಿಟ್ಟ ಇಡೀ ನಾಟಕದಲ್ಲಿ ಮುಖ್ಯಭೂಮಿಕೆಯಲ್ಲಿ ಮುಖ್ಯಮಂತ್ರಿ ಪಾತ್ರಧಾರಿಯಾಗಿ ಸಿನಿಮಾ ನಟ ಮುಖ್ಯಮಂತ್ರಿ ಚಂದ್ರು ನಟಿಸಿದರು. ಅವರ ನಿರರ್ಗಳ ಸಂಭಾಷಣೆ, ಚುಟುಕು ಹಾಸ್ಯ, ಗಂಭೀರ್ಯ, ವಾಕ್ಚಾತುರ್ಯ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ನಾಟಕದ ನಿರ್ದೇಶಕ ರಾಜಾರಾಂ ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ವಿಶೇಷವಾದ ನಾಟಕ. ದೇಶ ವಿದೇಶದಲ್ಲೂ ಪ್ರದರ್ಶನ ಕಂಡಿದೆ. ಎಲ್ಲಿ ಹೋದರೂ ಕನ್ನಡಿಗರ ಪ್ರೀತಿಯ ಬಾಂಧ್ಯವ್ಯ ನಮಗೆ ದೊರೆತಿದೆ. ಜಿಲ್ಲೆಯಲ್ಲಿ ಸಾಹಿತ್ಯಾತ್ಮಕ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜನೆ ಮಾಡುವ ಉತ್ಸುಕತೆ ಕಸಾಪ ಅಧ್ಯಕ್ಷರಿಗಿದ್ದಂತಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ನಾಟಕಕಾರ ಷೇಕ್ಸ್ಪಿಯರ್ ಹೇಳಿರುವಂತೆ ಈ ಪ್ರಪಂಚವೇ ಒಂದು ನಾಟಕ ರಂಗ. ನಾವೆಲ್ಲಾ ಪಾತ್ರಧಾರಿಗಳು ಎಂದರು. ಸಾಹಿತ್ಯ ಪ್ರಕಾರಗಳಲ್ಲಿ ನಾಟಕವೂ ಒಂದು. ಮುಖ್ಯಮಂತ್ರಿ ನಾಟಕ 700ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವುದು ಅದರ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ ಎಂದರು. ಕಸಾಪ ಅಧ್ಯಕ್ಷ ಸೂರಿ ಶ್ರೀನಿ ವಾಸ್, ವಕೀಲರಾದ ಎಸ್.ಎಸ್.ವೆಂಕಟೇಶ್ ಸೇರಿದಂತೆ ಅನೇಕರು ಇದ್ದರು.

1980ನೇ ಇಸವಿಯಿಂದಲೂ ಬಹು ಯಶಸ್ವಿಯಾಗಿ  ಹೌಸ್‌ ಫುಲ್ ಪ್ರದರ್ಶನಗಳನ್ನು ಕಾಣುವ ಈ ನಾಟಕದ ಹೆಚ್ಚಿನೆಲ್ಲಾ ಪಾತ್ರಧಾರಿಗಳು, ಈ 42 ವರ್ಷಗಳಲ್ಲಿ, ಬದಲಾವಣೆಗಳೊಂಡರೂ, ನಾಟಕದ ಕೇಂದ್ರಬಿಂದು,  'ಮುಖ್ಯಮಂತ್ರಿ'  ಪಾತ್ರಧಾರಿ ಮಾತ್ರ ಬದಲಾಗದೇ, ಈವರೆಗಿನ ಎಲ್ಲ ಪ್ರದರ್ಶನಗಳಲ್ಲೂ ಅವಿರತವಾಗಿ ನಟಿಸಿದ ಕೀರ್ತಿ 'ಖಾಯಂ' ಮುಖ್ಯಮಂತ್ರಿ ಚಂದ್ರು ಅವರಿಗೆ ಸಲ್ಲುತ್ತದೆ. ರಾಜಕೀಯದ ವಿಡಂಬನೆಯೇ (iconic Kannada play) ನಾಟಕದ ಜೀವಾಳ. ಹಾಗಾಗಿ, ಪ್ರೇಕ್ಷಕರು 'ಹೆಚ್ಚಿನ ನಿರೀಕ್ಷೆ' ಯಿಂದ ವೀಕ್ಷಿಸಲು ಕಾತರರಾಗಿರುತ್ತಾರೆ.  

'ಕಾಂತಾರ 2' ಮಾಡಲು ಧರ್ಮಸ್ಥಳ ಮಂಜುನಾಥೇಶ್ವರನ ಅನುಮತಿ ಬೇಕು

ನಾಟಕವು ಎರಡು ಪ್ರಮುಖ ಪಾತ್ರಧಾರಿಗಳನ್ನೇ ಅವಲಂಬಿಸಿರುವುದರಿಂದ, ಆ ಪಾತ್ರಧಾರಿಗಳ ನಟನಾ ಸಾಮರ್ಥ್ಯವೇ ಇಡೀ ನಾಟಕದ ಜೀವಾಳ. ಈ ನಿಟ್ಟಿನಲ್ಲಿ, ಮುಖ್ಯಮಂತ್ರಿ ಚಂದ್ರು ಹಾಗೂ ಮಂಜುನಾಥ ಹೆಗಡೆ ಅವರ ಅಭಿನಯ ಇಡೀ ಸಭಿಕರನ್ನು ಹಿಡಿದಿಟ್ಟಿತ್ತು. ಅದರಲ್ಲಿಯೂ ಮುಖ್ಯವಾಗಿ, ವಯಸ್ಸಿನಲ್ಲೂ ಸಮಕಾಲೀನರಾದ ಈರ್ವರೂ, ದಣಿವರಿಯದೇ ಸಂಭಾಷಣೆಗಳನ್ನು ಹೇಳುವ ಪರಿ ನೋಡುಗರನ್ನು  ಸೆಳೆದುಕೊಂಡಿತು. 

ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾರುಖ್: ಮುಖ ಮುಚ್ಚಿಕೊಂಡು ಬಂದಿದ್ದೇಕೆ?

ಅನುವಾದದ ಕೃತಿಯಾದದ್ದರಿಂದ, ನಾಟಕದ ಪಾತ್ರಧಾರಿಗಳ ಹೆಸರುಗಳು, ಸಾಮಾನ್ಯ ವೀಕ್ಷಕರಿಗೆ, ಸ್ವಲ್ಪ ’ಗಲಿಬಿಲಿ’ ಯನ್ನುಂಟುಮಾಡುತ್ತದೆ. ನಾಟಕವು ’ಗಂಭೀರ’ ಸ್ವರೂಪದಲ್ಲೇ ಸಾಗುವುದರಿಂದ, ’ಹಾಸ್ಯರೂಪ’ದ ಮನರಂಜನೆಯನ್ನು ನಿರೀಕ್ಷಿಸುವಂತಿಲ್ಲ. ರಾಜಕಾರಣಿಗಳ ’ಅಂದಿನ’ ಹಾಗೂ ’ಇಂದಿನ’ ಮನಸ್ಥಿತಿ ಒಂದೇ ಆದರೂ, ಕಾಲಕ್ಕೆ ತಕ್ಕಂತೆ, ಅವಕಾಶವಾದಿ ರಾಜಕಾರಣದ, ಇಂದಿನ, ವಿವಿಧ ಮಜಲುಗಳು ನಾಟಕದಲ್ಲಿ ಗೋಚರಿಸುವುದಿಲ್ಲ.

Follow Us:
Download App:
  • android
  • ios