ಕಚ್ಚಾ ಬಾದಮ್‌ ಬಳಿಕ ಮತ್ತೊಂದು ಹಾಡಿನೊಂದಿಗೆ ಬಂದ ಬಡ್ಯಾಕರ್... ನೀವೂ ಕೇಳಿ

  • ಕಚ್ಚಾ ಬಾದಮ್‌ ಗಾಯಕನಿಂದ ಮತ್ತೊಂದು ಹಾಡು
  • ಅಮರ್ ನೋಟುನ್ ಗರಿ ಎಂದು ಹಾಡಿದ ಭುವನ್ ಬಡ್ಯಾಕರ್
  • ಕಚ್ಚಾ ಬಾದಮ್‌ ಹಾಡಿನಿಂದ ಸಖತ್ ಫೇಮಸ್ ಆಗಿದ್ದ ಭುವನ್
Kacha Badam Singer Bhuban Badyakar Records New Song akb

ನವದೆಹಲಿ(ಮಾ.7): ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿರುವ 'ಕಚ್ಚಾ ಬದಮ್' ಗಾಯಕ ಭುವನ್ ಬಡ್ಯಾಕರ್ ಅವರು 'ಅಮರ್ ನೋಟುನ್ ಗರಿ' (ನನ್ನ ಹೊಸ ಕಾರು) ಎಂಬ ಮತ್ತೊಂದು ಹಾಡನ್ನು ಹೊರ ತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಈ ಹಾಡಿನ ವೀಡಿಯೊದಲ್ಲಿ, ಬಡ್ಯಾಕರ್ ಅವರು ಹೊಸ ಟ್ರ್ಯಾಕ್‌ಗೆ ಹಾಡುವುದನ್ನು ಕೇಳಬಹುದು. ಈ ವೇಳೆ ಅವರನ್ನು ಜನರು ಗುಂಪಿನಿಂದ ಸುತ್ತುವರೆದಿದ್ದಾರೆ. ಅವನ ಅಪಘಾತದ ನಂತರ ಕಚಾ ಬಾದಮ್ ಕಾಕು ಹೊಸ ಹಾಡು ಎಂದು ಬರೆದು ಈ ವಿಡಿಯೋವನ್ನು  ಟ್ವಿಟರ್‌ನಲ್ಲಿ  ಪೋಸ್ಟ್‌ ಮಾಡಲಾಗಿದೆ.

ಕಚ್ಚಾ ಬಾದಮ್ ಹಾಡಿನ ಮೂಲಕ ಸಖತ್ ಹವಾ ಕ್ರಿಯೇಟ್ ಮಾಡಿದ ಭುವನ್ ಬಡ್ಯಾಕರ್ ಇತ್ತೀಚೆಗೆ ಹೊಸ ಸೆಕೆಂಡ್‌ ಹ್ಯಾಂಡ್‌ ಕಾರೊಂದನ್ನು ತೆಗೆದಿದ್ದು, ಅದರ ಚಾಲನೆಯ ತರಬೇತಿ ಪಡೆಯುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಗಾಯಗೊಂಡಿದ್ದರು. ಬಳಿಕ ಅವರನ್ನು ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾನು ಬಳಸಿದ ಕಾರನ್ನು ಖರೀದಿಸಿದೆ ಮತ್ತು ಅದನ್ನು ಓಡಿಸಲು ಪ್ರಯತ್ನಿಸುತ್ತಿದ್ದೆ. ಇದು ಒಂದು ಅಪಘಾತಕ್ಕೆ ಕಾರಣವಾಯಿತು. ಇದರಿಂದ ನಾನು ಗಾಯಗೊಂಡಿದ್ದೆ ಆದರೆ ನಾನು ಈಗ ಚೆನ್ನಾಗಿದ್ದೇನೆ. ಹಾಗಾಗಿ, ನನ್ನ ಹೊಸ ಕಾರಿಗೆ ಹೊಸ ಹಾಡನ್ನು ರೆಕಾರ್ಡ್ ಮಾಡಲು ನಿರ್ಧರಿಸಿದ್ದೇನೆ ಎಂದು ಬಡ್ಯಾಕರ್ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಭುವನ್ ಬಡ್ಯಾಕರ್ ಅವರ 'ಕಚ್ಚಾ ಬಾದಮ್' ಹಾಡು ವೈರಲ್ ಆದ ನಂತರ ರಾತ್ರೋರಾತ್ರಿ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. 

 

ಆಗ ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ: ಈಗ ಕಚ್ಚಾಬಾದಮ್‌ ಹಾಡುಗಾರನ ಲೈಫ್‌ಸ್ಟೈಲ್‌ ಹೇಗಿದೆ ನೋಡಿ

ಹೀಗೆ ಫೇಮಸ್ ಆಗುವುದಕ್ಕೂ ಮೊದಲು ಭುವನ್‌ ಬಡ್ಯಾಕರ್‌ ಬೀರ್ಭುಮ್ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದರು. ಈ ವೇಳೆ ಗ್ರಾಹಕರನ್ನು ಆಕರ್ಷಿಸಲು ಅವರು ಕಚ್ಚಾ ಬಾದಮ್‌ ಹಾಡನ್ನು ಹಾಡುತ್ತಿದ್ದರು. ಆದರೆ ಈ ಹಾಡಿನ ಟ್ಯೂನ್‌ನಿಂದ ಆಕರ್ಷಿತರಾದ ಯಾರೋ ಒಬ್ಬರು ಇವರು ಹಾಡುತ್ತಿರುವುದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಹಾಡು ಸಾಕಷ್ಟು ವೈರಲ್ ಆಗಿತ್ತು. ಜೊತೆಗೆ ಇದರ ರೀಮಿಕ್ಸ್ ಅನ್ನು ಮಾಡಲಾಯಿತು. ನಂತರ ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಯಿತು. ಈ ವಿಡಿಯೋವನ್ನು  50 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

Kacha Badam ಕಡ್ಲೆಕಾಯಿ ವ್ಯಾಪಾರಿ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ!
 

ಕೆಲದಿನಗಳ ಹಿಂದೆ ಗಾಯಕ ಭುವನ್ ಬಡ್ಯಾಕರ್‌ (Bhuban Badyakar) ಅವರನ್ನು ಸಂಗೀತಾ ಸಂಸ್ಥೆಯೊಂದು ಗುರುತಿಸಿ ಮೂರು ಲಕ್ಷ ನಗದು ಹಣವನ್ನು ನೀಡಿದೆ. ಕಚ್ಚಾ ಬಾದಾಮ್‌ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ, ಯಾರ ಮೊಬೈಲ್‌ ವಾಟ್ಸಾಪ್‌ ಸ್ಟೇಟಸ್‌, ಫೇಸ್ಬುಕ್‌ ಸ್ಟೋರಿ, ಯೂಟ್ಯೂಬ್‌  ಹೀಗೆ ಸಾಮಾಜಿಕ ಜಾಲತಾಣದ ಯಾವ ಮೂಲೆ ಮೂಲೆಯೂ ಸೇರಿದಂತೆ ಎಲ್ಲಿ ನೋಡಿದರಲ್ಲಿ ಕಚ್ಚಾ ಬಾದಾಮ್ ಹಾಡಿನದ್ದೇ ಗುನುಗು. ಅಷ್ಟೊಂದು ಫೇಮಸ್‌ ಆಗಿದ್ದ ಪಶ್ಚಿಮ ಬಂಗಾಳದ ಕಡಲೆಕಾಯಿ ಮಾರಾಟಗಾರನ ಈ ಹಾಡು ಯುವ ಸಮೂಹದಲ್ಲಿ ಬಿರುಗಾಳಿ ಎಬ್ಬಿಸಿ ಎಲ್ಲರ ಮೆಚ್ಚಿನ ಹಾಡಾಗಿ ಪ್ರತಿಯೊಬ್ಬರು ಇದನ್ನು ಗುನುಗುವಂತಾಗಿತ್ತು. 

ಆದರೆ ಈ ಹಾಡನ್ನು ಬಳಸಿಕೊಂಡು ಸಂಗೀತಾ ಕಂಪನಿಗಳು ಅದಕ್ಕೆ ಹಲವು ರಿಮಿಕ್ಸ್‌ ಮಾಡಿ ಕೋಟ್ಯಾಂತರ ದುಡ್ಡು ಮಾಡಿದ್ದರು. ಆದರೆ ಮೂಲ ಗಾಯಕ ಭುವನ್‌ ಬಡ್ಯಾಕರ್ ಅವರಿಗೆ ಮಾತ್ರ ಇದರಿಂದ ನಯಾಪೈಸೆಯೂ ಸಿಕ್ಕಿರಲಿಲ್ಲ. ಅವರು ಕಡಲೆಕಾಯಿ ಮಾರುತ್ತಲೇ ಇರಬೇಕಾಯಿತು. ಆದರೆ ಈಗ ಗೋಧೂಳಿಬೆಲೆ ಎಂಬ ಸಂಗೀತಾ ಸಂಸ್ಥೆಯೊಂದು ಕಚ್ಚಾ ಬಾದಾಮ್‌ನ ಮೂಲ ಹಾಡುಗಾರನನ್ನು ಗುರುತಿಸಿ ಅವರಿಗೆ ಬಹುಮಾನ ನೀಡಿದೆ. .

Latest Videos
Follow Us:
Download App:
  • android
  • ios