ಆಗ ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ: ಈಗ ಕಚ್ಚಾಬಾದಮ್ ಹಾಡುಗಾರನ ಲೈಫ್‌ಸ್ಟೈಲ್ ಹೇಗಿದೆ ನೋಡಿ
- ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ ಮಾಡ್ತಿದ್ದ ಭುವನ್ ಬಡ್ಯಾಕರ್
- ಅದೃಷ್ಟವನ್ನೇ ಬದಲಿಸಿತು ಕಚ್ಚಬಾದಮ್ ಹಾಡು
- ಈಗ ಸೂಟ್‌ಬೂಟು ತೊಟ್ಟು ಡಾನ್ಸ್ ಮಾಡುವ ಭುವನ್
ಕಚ್ಚಾ ಬಾದಮ್ ಹಾಡು ಈಗ ಯಾರಿಗೆ ಗೊತ್ತಿಲ್ಲ ಹೇಳಿ ಇದರ ಬಗ್ಗೆ ಹೆಚ್ಚೇನು ಈಗ ಹೇಳ ಬೇಕಾಗಿಲ್ಲ. ಆದರೆ ಈ ಹಾಡು ಹಾಡಿದ ಭುವನ್ ಬಡ್ಯಾಕರ್ ಈಗ ತಾವೇ ಹಾಡಿದ ಕಚ್ಚಾ ಬಾದಮ್ ಹಾಡಿಗೆ ಇನ್ಸ್ಟಾಗ್ರಾಮ್ ರೀಲ್ ಒಂದಕ್ಕೆ ಡಾನ್ಸ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಭುವನ್ ಬಡ್ಯಾಕರ್ ಅವರಿಗೂ ತಾವು ಈ ಪಾಟಿ ಫೇಮಸ್ ಆಗ್ತಿನಿ ಎಂದು ಅವರು ಊಹೆಯೂ ಮಾಡಿರಲಾರರು ಅನ್ಸುತ್ತೆ. ಒಂದೇ ಒಂದು ಹಾಡು ಬೀದಿಯಲ್ಲಿ ಕಡ್ಲೆಕಾಯಿ ಮಾರಾಟ ಮಾಡುತ್ತಿದ್ದ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಗಳಿಸುವಂತೆ ಮಾಡಿದೆ. ಜೊತೆಗೆ ಈಗ ಭುವನ್ ಬಡ್ಯಾಕರ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದು ಇನ್ಸ್ಟಾಗ್ರಾಮ್‌ನಲ್ಲಿ ತಮ್ಮದೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಭುವನ್ ಬಡ್ಯಾಕರ್ ಅವರ ಕಚ್ಚಾಬಾದಾಮ್ ಹಾಡು ಸೃಷ್ಟಿ ಮಾಡಿದ ಹುಚ್ಚು ಅಷ್ಟಿಷ್ಟಲ್ಲ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್, ರೀಲ್ಸ್, ಮೋಜ್, ವಾಟ್ಸಾಪ್ ಎಲ್ಲಿ ನೋಡಿದರಲ್ಲಿ ಈ ಹಾಡಿನದ್ದೇ ಹವಾ ಕೇವಲ ಸಾಮಾನ್ಯ ಜನರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಈ ಇನ್ಸ್ಟಾಗ್ರಾಮ್( Instagram) ರೀಲ್‌ನಲ್ಲಿ ಭುವನ್ ಬಡ್ಯಾಕರ್ ತಮ್ಮದೇ ಆದ ವೈರಲ್ ಹಾಡು ಕಚಾ ಬದಮ್‌ಗೆ ನೃತ್ಯ ಮಾಡಿದ್ದಾರೆ. ನಟ ನೀಲ್ ಭಟ್ಟಾಚಾರ್ಯ ಅಪ್‌ಲೋಡ್ ಮಾಡಿದ ಈ ಇನ್ಸ್ಟಾಗ್ರಾಮ್ ರೀಲ್‌ನಲ್ಲಿ ಭುವನ್ ಬಡ್ಯಾಕರ್ ತಮ್ಮದೇ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಕಚ್ಚಾ ಬಾದಮ್ ಹಾಡು ಈ ವರ್ಷದ ಅತ್ಯಂತ ವೈರಲ್ ಹಾಡು ಆಗಿದ್ದು, ಎಲ್ಲರೂ ಈ ಆಕರ್ಷಕ ಟ್ಯೂನ್ ಮತ್ತು ಸಾಹಿತ್ಯಕ್ಕೆ ಮಾರು ಹೋಗಿದ್ದಾರೆ.
ಮೂರು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಭುವನ್ ಬಡ್ಯಾಕರ್ ಅವರು ಪ್ರಸಿದ್ಧ ಹುಕ್ ಸ್ಟೆಪ್ಸ್ ಮಾಡುತ್ತಿರುವ ಗುಂಪಿನೊಂದಿಗೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. 'ಈ ಹಾಡನ್ನು ಹಾಡಿದ ವ್ಯಕ್ತಿಯೊಂದಿಗೆ, ಈ ರತ್ನವನ್ನು ಬೆಂಬಲಿಸಿ... ಅವರನ್ನು ಭೇಟಿಯಾಗಲು ಸಂತೋಷವಾಗಿದೆ' ಎಂದು ಬರೆದು ನೀಲ್ ಭಟ್ಟಾಚಾರ್ಯ ಈ ವಿಡಿಯೋವನ್ನು ಫೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಒಂಭತ್ತು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, 86 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವೈರಲ್ ಹಾಡು ಕಚ್ಚಾಬಾದಾಮ್ ಗಾಯಕನಿಗೆ ಮೂರು ಲಕ್ಷ ನೀಡಿದ ಮ್ಯೂಸಿಕ್ ಕಂಪನಿ
ಬಾದಮ್ ಅಂಕಲ್ ಜೊತೆ, ಎಂದು Instagram ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 'ಯು ಆರ್ ಎ ಮ್ಯಾನ್ ವಿತ್ ಎ ಗೋಲ್ಡನ್ ಹಾರ್ಟ್' ಎಂದು ಮತ್ತೊಬ್ಬ ಬಳಕೆದಾರರು ಹೃದಯದ ಎಮೋಜಿಯೊಂದಿಗೆ ಕಾಮೆಂಟ್ ಮಾಡಿದ್ದಾರೆ. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ನಟಿ ದರ್ಶನಾ ಬಾನಿಕ್ (Darshana Banik) ಅವರು ಸಹ ಭುವನ್ ಬಡ್ಯಾಕರ್ ಜೊತೆಯಲ್ಲಿ ಡ್ಯಾನ್ಸ್ ಮಾಡಿರುವ ತಮ್ಮದೇ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇಲ್ಲೂ ಕೂಡ ವಿಡಿಯೋವನ್ನು ಐದು ಲಕ್ಷ ಜನ ವೀಕ್ಷಿಸಿದ್ದಾರೆ.
Kacha Badam : ಯುರೋಪ್ ಗೂ ತಲುಪಿದ ಕಚ್ಚಾ ಬದಾಮ್, ನಿಮಗೆ ಗೊತ್ತಿದೆಯೇ ಈ ಹಾಡಿನ ಅರ್ಥ?
ಒಟ್ಟಿನಲ್ಲಿ ಇದು ಡಿಜಿಟಲ್ ಯುಗವಾಗಿದ್ದು, ಸಾಮಾಜಿಕ ಜಾಲತಾಣದ ಪ್ರಭಾವ ಇದು ಎಂದರೆ ತಪ್ಪಾಗಲಾರದು. ಜೊತೆಗೆ ಅದೃಷ್ಟದ ಬಗ್ಗೆ ಹೇಳಲೇಬೇಕು. ಅದೃಷ್ಟ ಎಂಬುದು ಸಾಮಾನ್ಯರನ್ನು ಅಸಾಮಾನ್ಯರಾಗಿ ಶ್ರೀಮಂತನನ್ನು ಭಿಕ್ಷುಕನನ್ನಾಗಿ ಮಾಡಿದಂತಹ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿ ಇವೆ. ಆದರೂ ಭುವನ್ ಬಡ್ಯಾಕರ್ ತಮ್ಮ ಹಾಡನ್ನು ಮೊದಲ ಬಾರಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ವ್ಯಕ್ತಿಗೆ ಧನ್ಯವಾದ ಹೇಳಲೇಬೇಕು.