Asianet Suvarna News Asianet Suvarna News

ಇಶಾ ಅಂಬಾನಿಯಿಂದ ಐಷಾರಾಮಿ ಮನೆ ಖರೀದಿ ಮಾಡಿದ ಕೆಲವೇ ದಿನದಲ್ಲಿ ಬೇರ್ಪಟ್ಟ ಪ್ರಖ್ಯಾತ ಜೋಡಿ!

ಕಳೆದ ತಿಂಗಳಷ್ಟೇ ಹಾಲಿವುಡ್‌ನ ಪ್ರಖ್ಯಾತ ಜೋಡಿ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿಯವರ ಲಾಸ್‌ ಏಂಜಲಿಸ್‌ನಲ್ಲಿರುವ ಆಸ್ತಿಯನ್ನು ಬರೋಬ್ಬರಿ 508 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
 

Jennifer Lopez Ben Affleck split They Bought Isha Ambani Los Angeles property Rs 508 crore san
Author
First Published May 18, 2024, 6:07 PM IST

ಲಾಸ್‌ ಏಂಜಲಿಸ್‌ (ಮೇ.18): ಹಾಲಿವುಡ್‌ನ ಪ್ರಖ್ಯಾತ ಜೋಡಿ ತಾವು ಬೇರ್ಪಟ್ಟಿದ್ದಾಗಿ ಘೋಷಣೆ ಮಾಡುವ ಸಿದ್ದತೆಯಲ್ಲಿದೆ. ಅಚ್ಚರಿಯೇನೆಂದರೆ, ಕೆಲವು ದಿನಗಳ ಹಿಂದೆಯಷ್ಟೇ ಈ ಜೋಡಿ ಮುಖೇಶ್ ಅಂಬಾನಿಯವರ ಪುತ್ರಿ ಇಶಾ ಅಂಬಾನಿಯವರ ಲಾಸ್‌ ಏಂಜಲಿಸ್‌ ಆಸ್ತಿಯನ್ನು ಬರೋಬ್ಬರಿ 508 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈ ಸಂಭ್ರಮ ಮರೆಯಾಗುವ ಮುನ್ನವೇ ಈ ಜೋಡಿ ಬೇರ್ಪಡುವುದಾಗಿ ಘೋಷಣೆ ಮಾಡಿದೆ. ಹೌದು, ಪ್ರಖ್ಯಾತ ನಟಿ ಹಾಗೂ ಗಾಯಕಿ ಜೆನಿಫರ್‌ ಲೋಪಜ್‌ ಹಾಗೂ ನಟ ನಿರ್ದೇಶಕ ಬೆನ್‌ ಅಫ್ಲೆಕ್ ಬೇರೆ ಬೇರೆ ಆಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ತಾರಾ ಜೋಡಿಯ ನಡುವಿನ ವಿವಾಹಿಕ ಸಂಬಂಧದ ಸಮಸ್ಯೆ ಉಲ್ಭಣಗೊಂಡಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಹಾಗಂತ ಈವರೆಗೂ ಅವರು ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆಯಲು ಮುಂದಾಗಿಲ್ಲ. ತಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ನ ಮೊರೆ ಹೋಗಿದ್ದು, ಇದೂ ಕೂಡ ವರ್ಕ್‌ಔಟ್‌ ಆಗುತ್ತಿಲ್ಲ ಎನ್ನಲಾಗಿದೆ.

ಇಬ್ಬರ ನಡುವೆ ಮೇಲ್ನೋಟಕ್ಕಿಂತ ದೊಡ್ಡ ಸಮಸ್ಯೆ ಖಂಡಿತಾ ಇದೆ ಎಂದು ಆಪ್ತ ಮೂಲವೊಂದು ಇನ್‌ ಟಚ್‌ ವೀಕ್ಲಿಗೆ ಬಹಿರಂಗಪಡಿಸಿದೆ. ಜೆನಿಫರ್‌ ಲೋಪಜ್‌ ತಮ್ಮ ಸಂಗೀತ ಕ್ಷೇತ್ರದಲ್ಲಿ ಹೆಚ್ಚಿನ ಸಮಯ ಕಳೆಯಲು ಆರಂಭಿಸಿದ ಬಳಿಕ ಇವರ ನಡುವೆ ಸಮಸ್ಯೆ ಆರಂಭವಾಗಿದೆ ಎಂದು ವರದಿಯಾಗಿದೆ. ತಾರಾ ಜೋಡಿಯ ಆಪ್ತರು ಹೇಳುವ ಪ್ರಕಾರ, ಕೆಲವು ತಿಂಗಳ ಹಿಂದೆ ಜೆನ್ನಿಫರ್ ಲೋಪೆಜ್ ಸಂಗೀತ ಪ್ರವಾಸಕ್ಕೆ ತಯಾರಿ ಆರಂಭಿಸಿದಾಗ ದಂಪತಿಗಳ ನಡುವೆ ಸಮಸ್ಯೆಗಳು ಪ್ರಾರಂಭವಾದವು.

ಇತ್ತೀಚೆಗಷ್ಟೇ ಇವರಿಬ್ಬರೂ ಹೊಸ ಮನೆ ಖರೀದಿಸಿದ್ದಾರೆ ಎಂದು ಸುದ್ದಿಯಾಗಿದೆ. ಮುಕೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರ ಸುಮಾರು 500 ಕೋಟಿ ಮೌಲ್ಯದ ಬಂಗಲೆಯನ್ನು ಈ ಜೋಡಿ ಖರೀದಿ ಮಾಡಿದ್ದಾರೆ.  ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ, ಇಶಾ ಅಂಬಾನಿ ಈ ಆಸ್ತಿಯನ್ನು ಅಂದಾಜು 508 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಅದೇ ಸಮಯದಲ್ಲಿ, ಅವರ ಆಪ್ತ ವಲಯಗಳನ್ನು ಉಲ್ಲೇಖಿಸಿ ಈ ವಿಷಯವನ್ನು ಸ್ಪಷ್ಟಪಡಿಸಿದ ಸ್ಟಾರ್ ದಂಪತಿಗಳ ನಿಕಟ ವ್ಯಕ್ತಿ, ಇಬ್ಬರ ಪ್ರಸ್ತುತ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. "ಜೆನ್ನಿಫರ್ ಲೋಪೆಜ್ ಬೆನ್ ಅನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಮತ್ತು ಅವನು ಅವಳನ್ನು ಬದಲಾಯಿಸಲು ಸಾಧ್ಯವಿಲ್ಲ." ಅವರಿಬ್ಬರೂ ಬೇರ್ಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಂಬಾನಿ ಮಗಳಂದ್ರೆ ಏನು ಸುಮ್ನೇನಾ; ಇಶಾ ಅಂಬಾನಿ ಬಳಿಯಿದೆ 165 ಕೋಟಿ ನೆಕ್ಲೇಸ್, 450 ಕೋಟಿ ಮನೆ!

ಲಾಸ್‌ ಏಂಜಲಿಸ್‌ನ ಬ್ರೇವರಿ ಹಿಲ್ಸ್‌ನಲ್ಲಿರುವ ಬಂಗಲೆ ಇದಾಗಿದೆ. 5.2 ಎಕರೆ ವಿಸ್ತೀರ್ಣ ಹೊಂದಿರುವ ಈ ಆಸ್ತಿಯಲ್ಲಿ ಐಷಾರಾಮಿ ಬಂಗಲೆಯಿದ್ದು 12 ಬೆಡ್‌ರೂಮ್‌ಗಳು, 24 ಬಾತ್‌ರೂಮ್‌ಗಳು, ಜಿಮ್‌, ಸಲೂನ್‌, ಸ್ಪಾ ಹಹಾಗೂ 155 ಫೀಟ್‌ನ ಸ್ವಿಮ್ಮಿಂಗ್‌ ಫೂಲ್‌ ಕೂಡ ಇದೆ. ಔಟ್‌ಡೋರ್‌ ಎಂಟರ್‌ಟೇನ್‌ಮೆಂಟ್‌ ಪೆವಿಲಿಯನ್‌ ಕೂಡ ಈ ಬಂಗಲೆಯಲ್ಲಿತ್ತು.

ಮೆಟ್‌ ಗಾಲಾದಲ್ಲಿ ಇಶಾ ಅಂಬಾನಿ ಧರಿಸಿದ ಈ ಬಟ್ಟೆ ತಯಾರಿಸೋಕೆ ಬರೋಬ್ಬರಿ 10 ಸಾವಿರ ಗಂಟೆ ಬೇಕಾಯ್ತಂತೆ!

Latest Videos
Follow Us:
Download App:
  • android
  • ios