ಬಾಲಿವುಡ್‌ನ ಖ್ಯಾತ ಹಾಡೊಂದಕ್ಕೆ ಜಪಾನಿ ಬೆಡಗಿಯರು ಸಖತ್ ಆಗಿ ಹೆಜ್ಜೆ ಹಾಕಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಬರೀ ಹಾಡಷ್ಟೇ ಅಲ್ಲ, ನಮ್ಮ ದೇಶದ ವೇಷ ಭೂಷಣವನ್ನು ಧರಿಸಿ ಅವರು ನರ್ತಿಸಿದ್ದಾರೆ.

ಬಾಲಿವುಡ್‌ ಸಾಂಗ್‌ಗಳು ಭಾರತ ಮಾತ್ರವಲ್ಲದೇ ಏಷ್ಯಾ ರಾಷ್ಟ್ರಗಳು ಸೇರಿದಂತೆ ಬಹುತೇಕ ಜಗತ್ತಿನಾದ್ಯಂತ ಸಾಕಷ್ಟು ಫೇಮಸ್ ಆಗಿರುವಂತಹ ಸಾಂಗ್‌ಗಳು. ಭಾರತೀಯ ಹಾಡುಗಳಿಗೆ ವಿದೇಶಿಯರು ಡಾನ್ಸ್ ಮಾಡಿದಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನಾವು ನೋಡಿದ್ದೇವೆ. ಅದೇ ರೀತಿ ಈಗ ಬಾಲಿವುಡ್‌ನ ಖ್ಯಾತ ಹಾಡೊಂದಕ್ಕೆ ಜಪಾನಿ ಬೆಡಗಿಯರು ಸಖತ್ ಆಗಿ ಹೆಜ್ಜೆ ಹಾಕಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಬರೀ ಹಾಡಷ್ಟೇ ಅಲ್ಲ, ನಮ್ಮ ದೇಶದ ವೇಷ ಭೂಷಣವನ್ನು ಧರಿಸಿ ಅವರು ನರ್ತಿಸಿದ್ದಾರೆ.

ಮಯೋ ಜಪಾನ್ ಹಾಗೂ ಬಾಲಿಕ್ಯೂ ಜೆಪಿ ( mayojapan and bollyque_jp) ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಐಶ್ವರ್ಯಾ ರೈ ನಟನೆಯ 1999 ತಾಲ್‌ ಸಿನಿಮಾದ ಕಹಾ ಆಗ್‌ ಲಗೇ ಲಗ್ ಜಾಯೇ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದು, ಅದು ನೆಟ್ಟಿಗರನ್ನು ಇನ್ನಿಲ್ಲದಂತೆ ಸೆಳೆಯುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ 1.28 ಲಕ್ಷ ಜನ ವೀಕ್ಷಿಸಿದ್ದಾರೆ. 

View post on Instagram

ಈ ಜಪಾನಿ ನೃತ್ಯಗಾರ್ತಿಯರು ತಮಗೆ ಭಾರತದ ಸಂಪ್ರದಾಯಿಕ ನೃತ್ಯಗಳಲ್ಲಿ ಒಂದಾದ ಒಡಿಸ್ಸಿ ಹಾಗೂ ಪಾಶ್ಚಿಮಾತ್ಯ ನೃತ್ಯ ಕಲೆಯಾದ ಬ್ಯಾಲೆಯೂ ತಮಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ. ಹಾಡಿಗೆ ತಕ್ಕಂತೆ ಈ ಇಬ್ಬರು ಹುಡುಗಿಯರು ಭಾರತೀಯ ಸಂಪ್ರದಾಯಿಕ ಉಡುಗೆಯನ್ನು ಧರಿಸಿ ಹೆಜ್ಜೆ ಹಾಕುತ್ತಿದ್ದಾರೆ. ಹಳದಿ ಬಣ್ಣದ ಅಂಬ್ರೆಲಾ ಕಟ್ ಸಲ್ವಾರ್ ಧರಿಸಿರುವ ಈ ಹುಡುಗಿಯರು ಯಾವ ಭಾರತೀಯರಿಗೂ ಕಡಿಮೆ ಇಲ್ಲದಂತೆ ಡಾನ್ಸ್‌ ಮಾಡಿದ್ದಾರೆ.

Gumi Gumi: ಮೆಟ್ರೋದಲ್ಲಿ ಪುಟಾಣಿ ಬಾಲೆಯ ಸಖತ್ ಡಾನ್ಸ್‌, ವಿಡಿಯೋ ವೈರಲ್

ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಡಾಗಿದ್ದು, ಈ ಹಾಡಿನೊಂದಿಗೆ ನೃತ್ಯ ಮಾಡುವ ಜೊತೆ ಭಾರತೀಯ ಈ ಧಿರಿಸಿನಲ್ಲಿ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಹಿಂದಿ ಹಾಡಿಗೆ ಡಾನ್ಸ್ ಮಾಡಿರುವುದಕ್ಕೆ ಧನ್ಯವಾದಗಳು ಎಂದು ಮತ್ತೊಬ್ಬರು ಧನ್ಯವಾದ ತಿಳಿಸಿದ್ದಾರೆ. ಭಾರತೀಯ ಹಾಗೂ ಹಿಂದಿ ಹಾಡುಗಳಿಗೆ ನೃತ್ಯ ಮಾಡುತ್ತಿರುವುದನ್ನು ನೋಡಲು ಖುಷಿಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮಯೋ ಅವರ ಇನ್ಸ್ಟಾಗ್ರಾಮ್ ಪೇಜ್‌ ನೋಡಿದರೆ ಅವರು ಬಾಲಿವುಡ್‌ನ ಇನ್ನೂ ಹಲವು ಹಾಡುಗಳಿಗೆ ಈಗಾಗಲೇ ಡಾನ್ಸ್ ಮಾಡಿದ್ದಾರೆ. ಕೋಕಾ ಕೋಲಾ, ಜಿ ಹುಜೂರ್, ಶಂಶೇರಾ ಹಾಗೂ ಡಿಂಗ್ಡಾಗ್ ಮುಂತಾದ ಸಿನಿಮಾಗಳ ಹಾಡುಗಳಿಗೆ ಅವರು ನೃತ್ಯ ಮಾಡಿದ್ದಾರೆ. 

ಸೂಪರ್‌ ಹಿಟ್‌ ಹಾಡಿಗೆ ಚಾಹಲ್ ಪತ್ನಿಯ ಭರ್ಜರಿ ಡಾನ್ಸ್, ವೈರಲ್‌ ಆದ ವಿಡಿಯೋ!