Asianet Suvarna News Asianet Suvarna News

Gumi Gumi: ಮೆಟ್ರೋದಲ್ಲಿ ಪುಟಾಣಿ ಬಾಲೆಯ ಸಖತ್ ಡಾನ್ಸ್‌, ವಿಡಿಯೋ ವೈರಲ್

ಗುಮಿ ಗುಮಿ ಸಖತ್ ಟ್ರೆಂಡ್‌ಲ್ಲಿ ಇರುವ ಅರೇಬಿಕ್ ಸಾಂಗ್‌. ಹಾಗೆಯೇ ಇಲ್ಲೊಬ್ಬಳು ಪುಟಾಣಿ ಬಾಲಕಿ ಕೂಡ ಈ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. 

little girl dance gumi gumi song in metro, video goes viral akb
Author
Bangalore, First Published Aug 24, 2022, 4:17 PM IST

ಗುಮಿ ಗುಮಿ ಸಖತ್ ಟ್ರೆಂಡ್‌ಲ್ಲಿ ಇರುವ ಅರೇಬಿಕ್ ಸಾಂಗ್‌. ಈ ಹಾಡಿಗೆ ಹೆಜ್ಜೆ ಹಾಕದವರೆ ಇಲ್ಲ ಎಂದೆನಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿರುವ ಈ ಅರೇಬಿಕ್ ಸಾಹಿತ್ಯ ವೆಸ್ಟರ್ಸ್ ಮ್ಯೂಸಿಕ್‌ ಮಿಶ್ರಿತ ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿವರೆಗೆ ಪ್ರತಿಯೊಬ್ಬರೂ ಹೆಜ್ಜೆ ಹಾಕಿದ್ದಾರೆ. ಹಾಗೆಯೇ ಇಲ್ಲೊಬ್ಬಳು ಪುಟಾಣಿ ಬಾಲಕಿ ಕೂಡ ಈ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. 

ಸಮೀರ್‌ ಗೌರಂಗ್ ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಚಲಿಸುತ್ತಿರುವ ಮೆಟ್ರೋ ರೈಲಿನಲ್ಲಿ ಪುಟ್ಟ ಹುಡುಗಿ ಸಖತ್ ಆಗಿ ಡಾನ್ಸ್ ಮಾಡುತ್ತಿದ್ದರೆ ಹಿಂದೆ ನಿಂತಿದ್ದ ಹುಡುಗನೂ ಕೂಡ ಈಕೆಯೊಂದಿಗೆ ಹಿಂದೆ ನಿಂತುಕೊಂಡೆ ಹೆಜ್ಜೆ ಹಾಕುತ್ತಾನೆ. ಈ ಬಾಲಕಿಯ ಹೆಸರು ಸಮೀರಾ ಆಗಿದ್ದು, ಯಾವ ನಟಿ ನರ್ತಕರಿಗೂ ಕಡಿಮೆ ಇಲ್ಲದಂತೆ ಈಕೆ ಮುದ್ದಾಗಿ ಡಾನ್ಸ್ ಮಾಡುತ್ತಿದ್ದರೆ, ನೋಡುಗರಿಗೂ ಕುಣಿಯಬೇಕೆನಿಸುತ್ತದೆ. ಈ ವಿಡಿಯೋವನ್ನು ಮೂರು ಕೋಟಿಗೂ ಅಧಿಕ ಜನ ನೋಡಿದ್ದಾರೆ. ಅಲ್ಲದೇ ಎಂಟು ಸಾವಿರಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ. 

 

ಕೆಲವೊಂದು ಹಾಡುಗಳಿಗೆ ಭಾಷೆ ಅರ್ಥ ಯಾವುದು ಬೇಕಿರುವುದಿಲ್ಲ. ಅದಕ್ಕೆ ಸಂಯೋಜಿಸಿರುವ ಸಂಗೀತಾದ ಸೆಳೆತಕ್ಕೆ ಅದು ಎಲ್ಲರನ್ನು ನಿಂತಲ್ಲೇ ಕುಣಿಯುವಂತೆ ಮಾಡುತ್ತದೆ ಎನ್ನುವುದಕ್ಕೆ ಈ ಹಾಡು ಉತ್ತಮ ಉದಾಹರಣೆಯಾಗಿದೆ. ಜಗತ್ತಿನಾದ್ಯಂತ ಜನಸಾಮಾನ್ಯರಲ್ಲದೇ ಸಾಕಷ್ಟು ಸೆಲೆಬ್ರಿಟಿಗಳು ಈ ಗುಮಿ ಗುಮಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.  ಕೆಲ ದಿನಗಳ ಹಿಂದೆ ಶ್ರೀಲಂಕಾದ ಹಾಡು 'ಮನಿಕೆ ಮಗೆ ಹಿತೆ' ಇದೇ ರೀತಿ ಪ್ರಪಂಚದಾದ್ಯಂತ ವೈರಲ್ ಆಗಿದ್ದನ್ನು ನಾವು ನೋಡಿದ್ದೇವೆ. ಒಮ್ಮೆ ಹಾಡು ಟ್ರೆಂಡ್‌ ಆದರೆ ಎಲ್ಲರ ಫೋನ್‌ ವಾಟ್ಸಾಪ್ ಸ್ಟೇಟಸ್‌ ,ರಿಂಗ್‌ಟೋನ್‌ , ಫೇಸ್‌ಬುಕ್‌ ಸ್ಟೊರಿ ಹೀಗೆ ಎಲ್ಲಿ ನೋಡಿದರಲ್ಲಿ ಅದೇ ಹಾಡು.

 

ಅದೇ ರೀತಿ ಈಗ ಈ ಅರೇಬಿಯನ್‌ ಹಾಡು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಈ ಹಾಡಿಗೆ ನಿಂತಲ್ಲೇ ಜನ ಮಕ್ಕಳು ಕಿರಿಯರು ಹಿರಿಯರು ಎನ್ನದೇ ಹುಚ್ಚೆದು ಕುಣಿಯುತ್ತಿದ್ದಾರೆ. ಸಾಕಷ್ಟು ಜನ ಆ ಹಾಡನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ರೀಲ್ಸ್ ಮಾಡಿ ಹಾಕಿದ್ದಾರೆ. (Gomi Gomi dance challenge)  ಹೆಡ್ ಶೋಲ್ಡರ್ ನೀಸ್ ಮತ್ತು ಟೋಸ್ ಅಂತ ನಿಧಾನವಾಗಿ ಶುರುವಾಗುವ ಹಾಡು ಗೋಮಿ ಗೋಮಿ ಎಂಬಲ್ಲಿಗೆ ತಲುಪುವ ವೇಳೆ ಎಲ್ಲರೂ ಕುಣಿಯಲು ಶುರು ಮಾಡುತ್ತಾರೆ. ಈ ಹಾಡಿಗೆ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಮತ್ತು ಅವನೀತ್ ಕೌರ್‌ನಂತಹ ಸೆಲೆಬ್ರಿಟಿಗಳು ಸಹ ಹೆಜ್ಜೆ ಹಾಕಿದ್ದಾರೆ.

ಅರೆಬಿಯನ್‌ ಸಾಹಿತ್ಯವನ್ನು ಈ ಹಾಡು ಹೊಂದಿದ್ದು, ನಿಲ್ಲು ನಿಲ್ಲು ನಿಲ್ಲು ನಿಲ್ಲು ನಿನ್ನ ಸೌಂದರ್ಯವನ್ನು ಅವರಿಗೆ ತೋರಿಸು ಅನ್ನುವ ಅರ್ಥವನ್ನು ಈ ಸಾಲುಗಳು ಹೇಳುತ್ತಿವೆ. ಅರ್ಥ ಏನೇ ಇರಲಿ ಇದು ಎಲ್ಲರನ್ನು ಕುಣಿಯುವಂತೆ ಮಾಡುತ್ತಿರುವುದು ಸುಳ್ಳಲ್ಲ. ಯುನಿಕ್ಯೂ ವೈಬ್ ಎಂಬ ಯೂಟ್ಯೂಬ್‌ ಚಾನೆಲ್‌ನಿಂದ ಈ ಅರೇಬಿಯನ್ ಹಾಡು (arebian song) ಪೋಸ್ಟ್ ಆಗಿದೆ. ಲಕ್ಷಾಂತರ ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.

Follow Us:
Download App:
  • android
  • ios