ಸೂಪರ್ ಹಿಟ್ ಹಾಡಿಗೆ ಚಾಹಲ್ ಪತ್ನಿಯ ಭರ್ಜರಿ ಡಾನ್ಸ್, ವೈರಲ್ ಆದ ವಿಡಿಯೋ!
ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮ ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತೆಲುಗು ಚಿತ್ರದ ಹಿಟ್ ಹಾಡಿಗೆ ಡಾನ್ಸ್ ಮಾಡಿದ್ದು, ಅವರ ನೃತ್ಯಕ್ಕೆ ಅಭಿಮಾನಿಗಳು ಫಿದಾ ಅಗಿದ್ದಾರೆ.
ಬೆಂಗಳೂರು (ಆ.9): ಸಾಮಾಜಿಕ ಮಾಧ್ಯಮ ವೇದಿಕೆಯಾದ ಇನ್ಸ್‌ಟಾಗ್ರಾಮ್‌ನಲ್ಲಿ ನೀವು ಧನಶ್ರಿ ವರ್ಮ ಅವರನ್ನು ಫಾಲೋ ಮಾಡುತ್ತಿದ್ದರೆ, ನಿಮಗೆ ಬೋರ್ ಆಗಲು ಸಾಧ್ಯವೇ ಇಲ್ಲ. ನಿಯಮಿತವಾಗಿ ಹೊಸ ಹೊಸ ಡಾನ್ಸ್ ವಿಡಿಯೋಗಳನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಇರುತ್ತಾರೆ. ಆಗಸ್ಟ್ 7 ರಂದು ಯಜುವೇಂದ್ರ ಚಾಹಲ್ ಪತ್ನಿ ಇನ್ಸ್‌ಟಾಗ್ರಾಮ್‌ನಲ್ಲಿ ಹೊಸ ಡಾನ್ಸ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ತೆಲುಗಿನ ಸೂಪರ್‌ಹಿಟ್ ಗೀತೆ ರಾ ರಾ ರೆಡಿ ಹಾಡಿಗೆ ಸಖತ್ ಆಗಿ ಡಾನ್ಸ್ ಮಾಡಿದ್ದಾರೆ. ನು ಮಾಚರ್ಲಾ ನಿಯೋಜಕವರ್ಗಂ ಚಿತ್ರ ಐ ಆಮ್ ರೆಡಿ ಗೀತೆ ಇದಾಗಿದೆ, ಈ ಹಾಡಿನಲ್ಲಿ ನಿತಿನ್ ಮತ್ತು ಅಂಜಲಿ ಡಾನ್ಸ್ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಆಂಧ್ರದಲ್ಲಿ ಸೂಪರ್‌ಹಿಟ್ ಗೀತೆ ಎನಿಸಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಧನಶ್ರೀ ಅವರು, ಡಾನ್ಸ್ ಪಾರ್ಟ್‌ನರ್ ಜೊತೆ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಅವರು ಅದ್ಬುತವಾಗಿ ಪ್ರದರ್ಶನ ನೀಡಿದ್ದು, ವಿಡಿಯೋ ನೋಡುವ ವೇಳೆ ಅವರ ಡಾನ್ಸ್ ಮೂವ್‌ಗಳಿಗೆ ನೀವು ಖಂಡಿತವಾಗಿ ಅಚ್ಚರಿ ಪಡ್ತೀರಾ. ಇನ್ಸ್‌ಟಾಗ್ರಾಮ್‌ನ ಈ ವಿಡಿಯೋಗೆ ಈಗಾಗಲೇ 2 ಮಿಲಿಯನ್ ವೀವ್ಸ್‌ಗಳು ಸಿಕ್ಕಿವೆ. "ಆಲ್ವೇಸ್ ಬೋರ್ನ್ ರೆಡಿ..! ರಾ ರಾ ರೆಡಿ, ಐ ಆಮ್ ರೆಡಿ. ನಿಮ್ಮ ಶಕ್ತಿಯು ಯಾವಾಗಲೂ ಪರಿಮಾಣವನ್ನು ಹೇಳುತ್ತದೆ, ನೀವು ಮಾತನಾಡುವ ಮೊದಲು ಅದು ನಿಮ್ಮನ್ನು ಪರಿಚಯಿಸುತ್ತದೆ. ಎಂದು ವಿಡಿಯೋ ಪೋಸ್ಟ್ ಮಾಡುವ ವೇಳೆ ಬರೆದುಕೊಂಡಿದ್ದಾರೆ.
ಧನಶ್ರೀ ವರ್ಮ ಅವರ ಅಭಿಮಾನಿಗಳು ಹಾಗೂ ಫಾಲೋವರ್‌ಗಳು ಈ ನೃತ್ಯದ ವಿಡಿಯೋವನ್ನು ಸಖತ್ ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಅದ್ಭುತ, ಸೂಪರ್ ಹಾಗೂ ಅತ್ಯಾಕರ್ಷಕ ಎನ್ನುವ ಪದಗಳಲ್ಲಿ ಅವರ ನೃತ್ಯವನ್ನು ವರ್ಣನೆ ಮಾಡಿದ್ದಾರೆ. ಈ ವಿಡಿಯೋಗೆ ಈಗಾಗಲೇ 4.30 ಲಕ್ಷ ಲೈಕ್ಸ್‌ಗಳು ಬಂದಿವೆ.
ಆಗಸ್ಟ್ 12ಕ್ಕೆ ಚಿತ್ರ ರಿಲೀಸ್: ಈ ಹಿಂದೆ ಧನಶ್ರೀ ಇಂಗ್ಲೆಂಡ್‌ನಲ್ಲಿದ್ದ ತಮ್ಮ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಕ್ಲಿಪ್‌ನಲ್ಲಿ, ಅವರು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಚಿತ್ರದ ಕಾಜೋಲ್‌ನ ಮೇರೆ ಖ್ವಾಬೊನ್ ಮೇಗೆ ನೃತ್ಯ ಮಾಡುತ್ತಿದ್ದರು. ಮಾಚರ್ಲಾ ನಿಯೋಜಕವರ್ಗಂ ಚಿತ್ರವು ಆಗಸ್ಟ್ 12 ರಂದು ಬಿಡುಗಡೆಯಾಗುತ್ತಿದೆ. ಧನಶ್ರೀ ಅವರು ಇನ್ಸ್‌ಟಾಗ್ರಾಮ್‌ನಲ್ಲಿ ಐದು ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.
ಧನಶ್ರೀ ವರ್ಮ ಜೊತೆ ಸಪ್ತಪದಿ ತುಳಿದ ಯಜುವೇಂದ್ರ ಚಹಾಲ್!
ಕೂದಲಿನ ಆರೈಕೆ ಬಗ್ಗೆಯೂ ಧನಶ್ರಿ ಮಾತು: ಯುಜುವೇಂದ್ರ ಚಹಾಲ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ಬೌಲಿಂಗ್‌ನ ಮ್ಯಾಜಿಕ್ ಆಡಿದರೆ, ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ನೃತ್ಯದಿಂದ ಜನರ ಹೃದಯವನ್ನು ಗೆಲ್ಲುತ್ತಿದ್ದಾರೆ. ದಂತವೈದ್ಯೆಯಾಗಿರುವ ಧನಶ್ರೀ ವರ್ಮ, ಅವರು ಡಾನ್ಸ್ ಮಾಡುವ ವೇಳೆ ಹೆಚ್ಚಾಗಿ ಗಮನಸೆಳೆಯುವುದು ಅವರ ಉದ್ದನೆಯ ಕೂದಲು. ಇತ್ತೀಚೆಗೆ ಅವರು ತಾವು ಕೂದಲಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೇನೆ ಎನ್ನುವ ಬಗ್ಗೆಯೂ ಮಾತನಾಡಿದ್ದರು.
ಕಾಶ್ಮೀರದ ಚುಮು-ಚುಮು ಚಳಿಯಲ್ಲಿ ಯುಜುವೇಂದ್ರ ಚೆಹಲ್-ಧನಶ್ರೀ ವರ್ಮಾ ಫಸ್ಟ್ ಆನಿವರ್ಸರಿ..!
ಪ್ರತಿ ಬಾರಿ ಅವರ ಡಾನ್ಸ್ ವಿಡಿಯೋ ಪೋಸ್ಟ್ ಆದಾಗಲೆಲ್ಲಾ, ನಿಮ್ಮ ಕೂದಲಿನ ರಕ್ಷಣೆ ಹೇಗೆ ಮಾಡಿಕೊಳ್ಳುತ್ತೀರಿ ಎನ್ನುವ ಒಂದಾದರೂ ಪ್ರಶ್ನೆ ಬಂದಿರುತ್ತದೆ. ಇದನ್ನು ಅವರು ಒಂದು ವಿಡಿಯೋ ಮೂಲಕ ಹೇಳಿದ್ದು, ತೀರಾ ಕಡಿಮೆ ವೆಚ್ಚದಲ್ಲಿ ಕೂದಲನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ವಿವರಿಸಿದ್ದಾರೆ. ತೆಂಗಿನಎಣ್ಣೆಯನ್ನು ನಿಯಮಿತವಾಗಿ ಕೂದಲಿಗೆ ಹಚ್ಚಿ, ಅಂದಾಜು 10 ನಿಮಿಷಗಳ ಕಾಲಸ ಮಸಾಜ್ ಮಾಡಿಕೊಳ್ಳಬೇಕು ಎಂದು ಹೇಳುತ್ತಾರೆ. ಆದರೆ, ಜನರು ಹೆಚ್ಚಾಗಿ ಬ್ಯುಸಿ ಆಗಿರುವ ಕಾರಣ, 10 ದಿನಗಳಿಗೊಮ್ಮೆ ಮಸಾಜ್ ಮಾಡಿಕೊಂಡರೆ ಸಾಕು ಎನ್ನುತ್ತಾರೆ. ಇದಿಲ್ಲವಾದರೆ, ಕೂದಲಿಗೆ ಈರುಳ್ಳಿಯ ರಸವನ್ನು ಹಚ್ಚಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನು ಹಚ್ಚುವ ವಿಧಾನವನ್ನು ಹಂಚಿಕೊಂಡ ಅವರು, ಈರುಳ್ಳಿ ಎಲ್ಲರ ಮನೆಯಲ್ಲೂ ಇರುವುದರಿಂದ ಇದರ ರಸವೂ ಸುಲಭವಾಗಿ ದೊರೆಯುತ್ತದೆ. ಹತ್ತಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ರಸವನ್ನು ಅನ್ವಯಿಸಿ. ಒಂದು ಗಂಟೆ ಬಿಟ್ಟು ನಂತರ ಶಾಂಪೂವಿನಿಂದ ತೊಳೆಯಿರಿ. ಕೊನೆಯದಾಗಿ ಕಂಡೀಷನರ್ ಹಚ್ಚಿ ತೊಳೆಯಿರಿ ಎನ್ನುತ್ತಾರೆ.