ನವದೆಹಲಿ (ಜ. 06): ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮತ್ತೆ ರಣಾಂಗಣವಾಗಿದೆ. ಬೆತ್ತ, ಹಾಕಿ ಸ್ಟಿಕ್ ಮತ್ತು ಮಾರಕಾಸ್ತ್ರಗಳನ್ನು ಹಿಡಿದಿದ್ದ ಗುಂಪೊಂದು ವಿವಿ ಆವರಣದೊಳಗೆ ಭಾನುವಾರ ಸಂಜೆ ಏಕಾಏಕಿ ನುಗ್ಗಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದೆ.

JNU ಹಿಂಸಾಚಾರ: ವೈರಲ್ ಆಯ್ತು ಆನಂದ್ ಮಹೀಂದ್ರಾ ಟ್ವೀಟ್!

ಹಾಸ್ಟೆಲ್‌ಗಳ ಮೇಲೆ ಕಲ್ಲೆಸೆದು ಪೀಠೋಪಕರಣಗಳನ್ನು ಧ್ವಂಸಗೊಳಿಸಿದೆ.  ಈ ಘಟನೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಎಡಪಂಥೀ ಯ ಬೆಂಬಲಿತ ಆಯಿಶಿ ಘೋಷ್ ಸೇರಿ ಹಲವಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಗಾಯಗಳಾಗಿವೆ. ಹಾಗೆಯೇ ಎಬಿವಿಪಿ ಬೆಂಬಲಿತ 25 ವಿದ್ಯಾರ್ಥಿಗಳಿಗೂ ಗಾಯಗಳಾಗಿವೆ. ಜತೆಗೆ ನಮ್ಮ ಸಂಘಟನೆಗೆ ಸೇರಿದ 11 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆಂದು ಎಬಿವಿಪಿ ಆರೋಪಿಸಿದೆ. 

ಗಾಯಾಳುಗಳನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ, ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ವಿವಿ ಮನವಿಯಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಘಟನೆ ಖಂಡಿಸಿ ಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ದ್ದಾರೆ. ಆಪ್‌ನ ಕೇಜ್ರಿವಾಲ್, ಡಿಎಂಕೆ ಸ್ಟ್ಯಾಲಿನ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ನಾಯಕರು ಹಲ್ಲೆಯನ್ನು ಖಂಡಿಸಿದ್ದಾರೆ. ಘಟನೆ ಬಗ್ಗೆ ಗೃಹಸಚಿವ ಅಮಿತ್ ಶಾ ವರದಿ ಕೇಳಿದ್ದಾರೆ. 

JNU ಹಿಂಸಾಚಾರದ ಹಿಂದೆ ABVP ಕೈವಾಡ? ಶುರುವಾಯ್ತು ರಾಜಕೀಯ ಆಟ

ಈ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ನಟಿ ಟ್ವಿಂಕಲ್ ಖನ್ನಾ ಈ ಘಟನೆಯನ್ನು ಖಂಡಿಸಿದ್ದಾರೆ.  ಭಾರತದಲ್ಲಿ ವಿದ್ಯಾರ್ಥಿಗಳಿಗಿಂತ ಹೆಚ್ಚಾಗಿ ಹಸುಗಳಿಗೆ ರಕ್ಷಣೆ ಇದೆ. ಜನರ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವೇ ಇಲ್ಲ. ಇನ್ನಷ್ಟು ಪ್ರತಿಭಟನೆಗಳಾಗುತ್ತವೆ. ಜನ ರಸ್ತೆಗಿಳಿಯುತ್ತಾರೆ. ಈ ಹೆಡ್‌ಲೈನ್ ಅದನ್ನೇ ಹೇಳುತ್ತೆ ಎಂದು ಪತ್ರಿಕೆಯೊಂದರ ಸುದ್ದಿಯನ್ನು ಶೇರ್ ಮಾಡಿಕೊಂಡಿದ್ದಾರೆ.