Asianet Suvarna News Asianet Suvarna News

ರಸ್ತೆಯಲ್ಲಿ ಫುಲ್ ಬಾಟಲ್ 'ಎಣ್ಣೆ' ಸಿಕ್ಕರೆ ಜನರ ರಿಯಾಕ್ಷನ್ ಹೇಗಿರುತ್ತೆ... ನೋಡಿ ಈ ವೈರಲ್ ವೀಡಿಯೋ

. ಕುಡುಕರ ಈ ಎಣ್ಣೆ ಮೇಲಿನ ವ್ಯಾಮೋಹವನ್ನೇ ಇರಿಸಿಕೊಂಡು ಯುವಕರ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು, ಆ ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತಿದೆ. 

how people react if full bottle alcohol found in middle of the road watch funny viral video akb
Author
First Published Sep 10, 2023, 5:24 PM IST

ಒಮ್ಮೆ ಕುಡಿತಕ್ಕೆ ದಾಸರಾದವರು ಅದು ಎಲ್ಲಿ ಸಿಕ್ಕರೂ ಅದರ ಹಿಂದೆಯೇ ಹೋಗಲು ನೋಡುತ್ತಾರೆ. ರಸ್ತೆಯಲ್ಲಿ ಮನೆಯಲ್ಲಿ ಸಮಾರಂಭಗಳಲ್ಲಿ ಎಲ್ಲೇ ಇರಲಿ, ಎಣ್ಣೆ ಪಾರ್ಟಿ ಇದೆ ಎಂದಾದರೆ ಫುಲ್ ರೆಡಿ ಆಗಿ ಸ್ಟಡಿ ಆಗ್ತಾರೆ ನಮ್ ಕುಡುಕರು. ಕುಡುಕರ ಈ ಎಣ್ಣೆ ಮೇಲಿನ ವ್ಯಾಮೋಹವನ್ನೇ ಇರಿಸಿಕೊಂಡು ಯುವಕರ ತಂಡವೊಂದು ಸಾರ್ವಜನಿಕ ಸ್ಥಳದಲ್ಲಿ ಪ್ರಯೋಗಕ್ಕೆ ಮುಂದಾಗಿದ್ದು, ಆ ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತಿದೆ. 

ಸಾರ್ವಜನಿಕ ಸ್ಥಳಗಳಲ್ಲಿ ಹಣ ಏನಾದರೂ ಸಿಕ್ಕರೆ ಜನ ಅದನ್ನೆತಿ ಪಾಕೇಟ್‌ಗೆ ಹಾಕಿಕೊಂಡು  ಯಾರಿಗೂ ಕಾಣದಂತೆ ಅಲ್ಲಿಂದ ಎಸ್ಕೇಪ್ ಆಗುವುದನ್ನು ನೀವು ನೋಡಿರಬಹುದು. ಹಣ ಕಂಡರೆ ಯಾರು ಸುಮ್ಮನೇ ಹೋಗ್ತಾರೆ ಹೇಳಿ ಸಹಜವಾಗಿಯೇ ಎತ್ತಿಕೊಂಡು ಹೋಗ್ತಾರೆ. ಆದರೆ ಫುಲ್ ಬಾಟಲ್ ಮದ್ಯ ರಸ್ತೆ ಬದಿ ಬಿದ್ದು ಸಿಕ್ಕರೆ ಜನ ಏನ್ ಮಾಡ್ಬಹುದು ಅನ್ನೋದನ್ನ ನೋಡೋದಕ್ಕೆ ಯುವಕರ ತಂಡ ಈ ಪ್ರಯೋಗ ಮಾಡಿದ್ದು, ಫ್ರಿಯಾಗಿ ಸಿಕ್ಕ ಎಣ್ಣೆ ಬಾಟಲ್ ನೋಡಿದ ಒಬ್ಬರೂ ಕೂಡ ಅದನ್ನು ತೆಗೆದುಕೊಳ್ಳದೇ ಸೀದಾ ಮುಂದೆ ಹೋಗಲು ಸಿದ್ದರಿಲ್ಲ, ಒಬ್ಬರಾದ ಮೇಲೊಬ್ಬರಂತೆ ಹೆಲ್ಮೆಟ್ (Helmet) ಧರಿಸಿ ಬಂದು ಈ ಮದ್ಯದ ಬಾಟಲ್‌ನ್ನು ಹೊತ್ತೊಯ್ಯಲು ನೋಡಿ ಬೇಸ್ತು ಬಿದ್ದಿದ್ದಾರೆ. 

ಇನ್ಸ್ಟಾಗ್ರಾಮ್‌ನಲ್ಲಿ (Instagram) ಹರ್ಷಸಾಯಿ  ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ.. ವೀಡಿಯೋದಲ್ಲಿ ಕಾಣಿಸುವಂತೆ ಫುಲ್ ಬಾಟಲ್ ಮದ್ಯಕ್ಕೆ ಬಳ್ಳಿಯೊಂದನ್ನು ಕಟ್ಟಲಾಗಿದೆ. ದಾರಿಯಲ್ಲಿ ನಡೆದು ಹೋಗುತ್ತಿರುವವರೆಲ್ಲಾ ಈ ರಸ್ತೆಯಲ್ಲಿ ಬಿದ್ದಿದ್ದ ಮದ್ಯದ ಬಾಟಲ್‌ನ್ನು ಮೇಲೆತ್ತಿಕೊಂಡು ಹೋಗಲು ಪ್ರಯತ್ನ ಮಾಡುತ್ತಾರೆ. ಒಬ್ಬರಾದ ಮೇಲೆ ಒಬ್ಬರಂತೆ ಬಂದು ಮದ್ಯದ ಬಾಟಲ್ ತೆಗೆದುಕೊಂಡು ಹೋಗಲು ನೋಡುತ್ತಾರೆ. ಹೀಗೆ ಬಂದವರು ಮದ್ಯದ ಬಾಟಲ್‌ಗೆ ಕೈ ಹಾಕುತ್ತಿದ್ದಂತೆ ದೂರದಲ್ಲೆಲ್ಲೋ ಈ ಬಾಟಲ್‌ಗೆ ಕಟ್ಟಿದ್ದ ಹಗ್ಗವನ್ನು ಹಿಡಿದು ನಿಂತುವರು ಒಮ್ಮೆಲೆ ಅದನ್ನು ಬಗ್ಗಿದವರ ಕೈಗೆ ಸಿಗದಂತೆ ಎಳೆದು ಬಿಡುತ್ತಾರೆ. ಆದರೆ ಇದ್ಯಾವುದರ ಅರಿವು ಇರದ ಮದಿರೆ ಪ್ರೇಮಿಗಳು ಮಾತ್ರ ಒಮ್ಮೆಲೆ ಬಿದ್ದಿದ್ದ ಬಾಟಲ್‌ನಲ್ಲಿ ಚಾಲನೆ ಕಂಡು ಶಾಕ್ ಆಗಿ ಗಲಿಬಿಲಿಗೆ ಒಳಗಾಗುತ್ತಾರೆ. 

ಬ್ಯಾಚುಲರ್‌ ಬಾಯ್ಸ್‌ ಹುಚ್ಚಾಟ: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಂಕಟ: ವೀಡಿಯೋ

ಕುಡುಕರ ಮದ್ಯದ (drink) ಮೇಲಿನ ಮೋಹವನ್ನೇ ಈ ಕಂಟೆಂಟ್ ಕ್ರಿಯೇಟರ್ ವೀಡಿಯೋಗೆ ಸರಕಾಗಿಸಿದ್ದು, ಸಾವಿರಾರು ಜನ ಈ ವೀಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಕೇರಳದಲ್ಲಿ (Kerala) ಸೆರೆ ಹಿಡಿದಿರಬಹುದಾದ ದೃಶ್ಯದಂತೆ ಕಾಣುತ್ತಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಬಂದು ಈ ಫುಲ್ ಬಾಟಲ್‌ ಮದ್ಯಕ್ಕೆ ಕೈ ಹಾಕಲು ಹೋಗಿ ಪೇಚಿಗೆ ಸಿಲುಕುತ್ತಿರುವ ದೃಶ್ಯ ನೋಡಲು ಮಜಾವಾಗಿದೆ. ಮದ್ಯದ ಬಾಟಲ್‌ಗೆ ಕೈ ಹಾಕಿದವರೆಲ್ಲರೂ ಅದು ಕೈ  ಜಾರುತ್ತಿದ್ದಂತೆ ನಿರಾಸೆಯಿಂದ ನೋಡುತ್ತಿರುವ ದೃಶ್ಯಗಳು ನೋಡುಗರ ಮೊಗದಲ್ಲಿ ನಗೆಯುಕ್ಕಿಸುತ್ತಿದೆ.

ಈ ವೀಡಿಯೋವನ್ನು ಮದ್ಯ ನಿಷೇಧಕ್ಕೊಳಗಾಗಿರುವ ಕೇರಳದಲ್ಲಿ ಚಿತ್ರಿಸಿದಂತೆ ಕಾಣುತ್ತಿದ್ದು, ಬಹುತೇಕ ಲುಂಗಿ ಪಂಚೆ ಧರಿಸಿದವರೇ ವೀಡಿಯೋದಲ್ಲಿ ಸೆರೆ ಆಗಿದ್ದಾರೆ. ವೀಡಿಯೋ ನೋಡಿದವರು ತಮಾಷೆಯಾಗಿ ಕಾಮೆಂಟ್ ಮಾಡಿದ್ದು, ಎಣ್ಣೆಗಿರುವ ಪವರ್ ಇದು ಇದು ಎಲ್ಲರನ್ನು ನೆಲಕ್ಕೆ ಬಾಗಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿರುವುದಂತು ಸುಳ್ಳಲ್ಲ. 

ಲಾರಿಯಿಂದ ಬಿದ್ದ ಮದಿರೆಗಾಗಿ ಮುಗಿಬಿದ್ದ ಜನ... ವಿಡಿಯೋ ವೈರಲ್

 

Follow Us:
Download App:
  • android
  • ios