ಬ್ಯಾಚುಲರ್‌ ಬಾಯ್ಸ್‌ ಹುಚ್ಚಾಟ: ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಸಂಕಟ: ವೀಡಿಯೋ

ಕುಡುಕ ಗೆಳೆಯರ ಗುಂಪೊಂದು ಕಂಠಪೂರ್ತಿ ಕುಡಿದು ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಬಾಲ್ಕನಿ ಪಕ್ಕದಲ್ಲಿರುವ ಸನ್‌ಶೆಡ್ ಮೇಲೆ ಪಾರ್ಟಿ ಮಾಡಲು ಮುಂದಾಗಿದ್ದು, ಇದರಿಂದ  ಅಪಾರ್ಟ್‌ಮೆಂಟ್ ನಿವಾಸಿಗಳು ಆತಂಕಕ್ಕೀಡಾದ ಘಟನೆ ನಡೆದಿದೆ.

A terrifying video of two drunk men creating a ruckus at a Noida housing society has gone viral on social media akb

ಮದಿರೆಯ ಅಮಲೇ ಅಂತದ್ದು, ಒಮ್ಮೆ ಒಳಗೆ ಸೇರಿದರೆ ಮತ್ತೆ ಅದು ತನಗೆ ಹೇಗೆ ಬೇಕೋ ಹಾಗೆ ಆಡಿಸುತ್ತೆ. ಅದೇ ರೀತಿ ಇಲ್ಲೊಂದು ಕುಡುಕ ಗೆಳೆಯರ ಗುಂಪೊಂದು ಕಂಠಪೂರ್ತಿ ಕುಡಿದು ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಬಾಲ್ಕನಿ ಪಕ್ಕದಲ್ಲಿರುವ ಸನ್‌ಶೆಡ್ ಮೇಲೆ ಪಾರ್ಟಿ ಮಾಡಲು ಮುಂದಾಗಿದ್ದು, ಇದರಿಂದ  ಅಪಾರ್ಟ್‌ಮೆಂಟ್ ನಿವಾಸಿಗಳು ಆತಂಕಕ್ಕೀಡಾದ ಘಟನೆ ನಡೆದಿದೆ.

ರಾಷ್ಟ್ರ ರಾಜಧಾನಿಗೆ ಸಮೀಪದ ಗ್ರೇಟರ್ ನೋಯ್ಡಾದಲ್ಲಿ (Greater Noida) ಈ ಘಟನೆ ನಡೆದಿದ್ದು, ಇದರ ವೀಡಿಯೋ  ಈಗ ಸಾಮಾಜಿಕ ಜಾಲತಾಣದಲ್ಲಿ (social Media)ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಬಾಲ್ಕನಿ ಸಮೀಪದಲ್ಲೇ ಇರುವ ಸಿಮೆಂಟ್ ಸ್ಲಾಬ್‌ಗೆ ಇಳಿದ ಕುಡುಕರು ಅಲ್ಲಿ ಪಾರ್ಟಿ ಮಾಡಲು ನೋಡಿದ್ದಾರೆ. ಅಲ್ಲಿ ಜೋರಾಗಿ ಬೊಬ್ಬೆ ಹೊಡೆಯುತ್ತ ಕುಳಿತಿದ್ದಾರೆ . ಸನ್‌ಶೆಡ್‌ ಮೇಲೆ ಕುಳಿತು ಪಾರ್ಟಿ ಮಾಡಲು ಮುಂದಾದ ಈ ಯುವಕರ ಕಿತಾಪತಿಯಿಂದ ಅಲ್ಲಿ ಗೊಂದಲದ ವಾತಾವರಣ ಉಂಟಾಗಿದ್ದು, ನಂತರ ಇನ್ನಿಬ್ಬರು ಯುವಕರು ಬಂದು ಈ ಕುಡುಕರನ್ನು ಅಲ್ಲಿಂದ ಏಳಿಸಿ ಬಾಲ್ಕನಿಗೆ ಇಳಿಸಿ ರಕ್ಷಣೆ ಮಾಡಿದ್ದಾರೆ. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದ್ದಂತಾಗಿದೆ.  ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ.

ಕುಡುಕ ಪತಿಯ ಜಗಳದಿಂದ ಬೇಸತ್ತ ಪತ್ನಿ: ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಕೊಲೆನೇ ಮಾಡಿದ್ಳು!

ಕುಡಿತದ ಚಟವೇ ಅಂತದ್ದು,  ಒಮ್ಮೆ ಮದ್ಯ ದೇಹ ಸೇರಿದ ಮೇಲೆ ಆಟ ಯಾವುದೂ ನಿಮ್ಮದಲ್ಲ, ಮನಸ್ಸು ಮರ್ಕಟನಂತೆ ಆಡಲು ಶುರು ಮಾಡುತ್ತದೆ. ಕೆಲವರಿಗಂತೂ ಎಂದೂ ಇರದ ಧೈರ್ಯ ಕುಡಿದಾಗ ಬರುವುದು. ಕುಡಿದ ಮತ್ತಿನಲ್ಲಿ ಇಲ್ಲದ ಸಾಹಸ ಮಾಡಲು ಹೋಗಿ ಕೆಲವರು  ಜೀವವನ್ನೇ ಕಳೆದುಕೊಂಡಿದ್ದಾರೆ. ಕೆಲವರು ಕಂಠಪೂರ್ತಿ ಕುಡಿದು ಅಪಾರ್ಟ್‌ಮೆಂಟ್‌ ಟೆರೇಸ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದು ಇದೆ. ಅದೇ ರೀತಿ ಇಲ್ಲಿ ಎಣ್ಣೆ ಹೊಟ್ಟೆ ಸೇರಿದ ಮೇಲೆ ಈ ಕುಡುಕರಿಗೆ ಆಕಾಶದಲ್ಲಿ ತೇಲಾಡುವ ಮನಸ್ಸಾಗಿದೆ. ಹೊಸದಂದು ರೀತಿಯ ಪಾರ್ಟಿ ಮಾಡುವ ಆಸೆಯಾಗಿದೆ.  ಹೀಗಾಗಿ ಈ ಯುವಕರು ಬಾಲ್ಕನಿ ಸಮೀಪದ ಸನ್‌ಶೆಡ್‌ನ್ನು(Sunshade) ಆಯ್ಕೆ ಮಾಡಿದ್ದು, ಯಾರು ನೋಡದೇ ಇದ್ದಿದ್ದರೆ ಕೆಳಗೆ ಬಿದ್ದು ಪರಲೋಕ ಸೇರ್ತಿದ್ದಿದ್ದಂತು ಗ್ಯಾರಂಟಿ, ಆದರೆ ಈ ಕುಡುಕರ ಅದೃಷ್ಟ ಚೆನ್ನಾಗಿತ್ತು ಹೀಗಾಗಿ  ಯಾರೋ ಬಂದು ಇವರನ್ನು ಕಾಪಾಡಿದ್ದಾರೆ.

ಹೀಗೆ ಕುಡಿದು ಸಾಹಸ ಮಾಡಲು ಹೊರಟವರು ಬ್ಯಾಚುಲರ್‌ಗಳು ಎಂದು ತಿಳಿದು ಬಂದಿದ್ದು, ಇವರ ಬಗ್ಗೆ  ಅಪಾರ್ಟ್‌ಮೆಂಟ್ (Apartment) ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಮಕ್ಕಳು ಕುಟುಂಬವಿರುವ ಈ  ಅಪಾರ್ಟ್‌ಮೆಂಟ್‌ನಲ್ಲಿ ಇಂತಹ ನಡವಳಿಕೆಗಳು ಸರಿ ಕಾಣುತ್ತಿಲ್ಲ. ಇದೇನು ಸ್ಟಂಟಾ ಅಥವಾ  ಆತ್ಮಹತ್ಯೆ ಯತ್ನವ ಎಂದು ತಿಳಿಯುತ್ತಿಲ್ಲ ಎಂದು  ಅಪಾರ್ಟ್‌ಮೆಂಟ್ ನಿವಾಸಿಯಾದ ಮೃತ್ಯುಂಜಯ್ ಎಂಬುವವರು ಯುವಕರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತನ್ನ ಮೇಲೆ ಶರಾಬು ಎರಚಿದ ಅಭಿಮಾನಿಯತ್ತ ಮೈಕ್ ಎಸೆದ ಗಾಯಕಿ: ವೈರಲ್ ವೀಡಿಯೋ

ಅಲ್ಲದೇ ಈ ಬ್ಯಾಚುಲರ್‌ ಬಾಯ್ಸ್ (Bachelors)ಈ ರೀತಿ ಮಾಡ್ತಿರೋದು ಇದೇನು ಮೊದಲಲ್ಲ, ಈ ಹಿಂದೆಯೂ ಈ ಯುವಕರು ಕುಡಿದು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ದೂರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವೀಡಿಯೋ ಪರಿಶೀಲಿಸಿದ್ದು, ವೀಡಿಯೋದಲ್ಲಿರುವ ಯುವಕರಿಗಾಗಿ ಹುಡುಕಾಟ ನಡೆಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ನೋಯ್ಡಾ ಹೌಸಿಂಗ್ ಸೊಸೈಟಿಯಲ್ಲಿ (Housing socity) ಹೊಡೆದಾಟದ ವಿಡಿಯೋವೊಂದು ವೈರಲ್ ಆಗಿತ್ತು. ನಂತರ ಇಬ್ಬರನ್ನು ಬಂಧಿಸಲಾಗಿತ್ತು. ಗ್ರೇಟರ್ ನೋಯ್ಡಾ ಪಶ್ಚಿಮದಲ್ಲಿರುವ ಫ್ಲೋರಾ ಹೆರಿಟೇಜ್ ಹೌಸಿಂಗ್ ಸೊಸೈಟಿಯಲ್ಲಿ ಕಳೆದ ತಿಂಗಳು ಈ ಘಟನೆ ನಡೆದಿತ್ತು. ಅಪಾರ್ಟ್‌ಮೆಂಟ್‌ನಲ್ಲಿ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದ್ದು, ನಂತರ ಹೊಡೆದಾಟ ಶುರುವಾಗಿತ್ತು. ಸುದ್ದಿ ತಿಳಿದು  ಪೊಲೀಸರು ಸ್ಥಳಕ್ಕೆ ತಲುಪಿದಾಗ, ಕೆಲವರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದರು, ನಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದರು.

 

Latest Videos
Follow Us:
Download App:
  • android
  • ios