ರಾಜ್-ವಿಷ್ಣು ಅಭಿಮಾನಿಗಳ 'ಫ್ಯಾನ್ ವಾರ್'ಗೆ 'ಗಂಧದ ಗುಡಿ'ಯ ವಿಷ್ಣುವರ್ಧನ್ ಖಳನಾಯಕ ಪಾತ್ರವೇ ಮೂಲ ಕಾರಣ. ರಾಜ್ ಅಭಿಮಾನಿಗಳಿಗೆ ವಿಷ್ಣುವಿನ ಖಳಪಾತ್ರ ಜೀರ್ಣವಾಗಲಿಲ್ಲ. ವಿಷ್ಣುವಿನ ಎಳೆಯ ವಯಸ್ಸು, ಅಭಿಮಾನಿಗಳ ಮನಸ್ಥಿತಿ ಅರಿಯದಿರುವುದು ಸಮಸ್ಯೆ ಹೆಚ್ಚಿಸಿತು. ನಟರಿಬ್ಬರ ಮಧ್ಯೆ ವೈಷಮ್ಯವಿರಲಿಲ್ಲ, ಅಭಿಮಾನಿಗಳ ತಪ್ಪು ತಿಳುವಳಿಕೆಯೇ ಕಂದಕ ಸೃಷ್ಟಿಸಿತು.
ಡಾ ರಾಜ್‌ಕುಮಾರ್ (Dr Rajkumar) ಹಾಗೂ ವಿಷ್ಣುವರ್ಧನ್ (Vishnuvardhan) ಅಭಿಮಾನಿಗಳ ಮಧ್ಯೆ 'ಫ್ಯಾನ್ಸ್ ವಾರ್' ಇತ್ತು ಎಂಬುದು ಅಂದು ಹಾಗೂ ಇಂದು ಬಹುತೇಕ ಎಲ್ಲರೂ ಅರಿತಿರುವ ಸಂಗತಿ. ಆದರೆ, ಇದನ್ನು ಕೆಲವರು ತಪ್ಪಾಗಿ 'ಸ್ಟಾರ್ ವಾರ್' ಎಂದು ಕರೆಯುತ್ತಾರೆ. ಸತ್ಯ ಸಂಗತಿ ಏನೆಂದರೆ, ನಟರಾದ ಡಾ ರಾಜ್ ಹಾಗೂ ವಿಷ್ಣು ಮಧ್ಯೆ ಸ್ಟಾರ್ ವಾರ್ ಇರಲೇ ಇಲ್ಲ.
ಆದರೆ, ಅವರಿಬ್ಬರ ಅಭಿಮಾನಿಗಳ ಮಧ್ಯೆ ವಾರ್ ಇತ್ತು. ಅದಕ್ಕೆ ಯಾರೂ ಸಾಕ್ಷಿ ಕೊಡಬೇಕಾದ ಅಗತ್ಯವಿಲ್ಲ. ಅದು ಇತಿಹಾಸದಲ್ಲಿ ಹಲವು ಬಾರಿ ದಾಖಲಾಗಿದೆ, ಹಲವರಿಗೆ ಅದು ಗೊತ್ತೇ ಇದೆ. ಹೊಡೆದಾಟ-ಬಡಿದಾಟಗಳೂ ಅಂದು ನಡೆದಿದ್ದು ಹಲವರಿಗೆ ಗೊತ್ತಿರುವ ಸಂಗತಿಯೇ ಅಗಿದೆ.
ಆದರೆ, ಡಾ ರಾಜ್‌ಕುಮಾರ್ ಹಾಗೂ ಡಾ ವಿಷ್ಣುವರ್ಧನ್ ಅಭಿಮಾನಿಗಳ ಮಧ್ಯೆ ನಡೆದ ಮನಸ್ತಾಪಗಳಿಗೆ, ಹೊಡೆದಾಟಗಳಿಗೆ ಅದೊಂದೇ ಮೂಲ ಕಾರಣ, ಮಿಕ್ಕವೆಲ್ಲವೂ ಉಪ-ಕಾರಣಗಳು ಅಷ್ಟೇ. ಹಲವರಿಗೆ ಈ ಬಗ್ಗೆ ತಪ್ಪು ಕಲ್ಪನೆಗಳು ಇವೆ. ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಬ್ಬರೂ ಪರಸ್ಪರ ಒಬ್ಬರನ್ನೊಬ್ಬರೂ ಎಂದಿಗೂ ದ್ವೇಷಿಸುತ್ತಿರಲಿಲ್ಲ.
ಡಾ ರಾಜ್ ಜೊತೆ ವಿಷ್ಣು ಹೋಲಿಕೆ ಸರಿಯಲ್ಲ; ಆ ದೊಡ್ಡ ತಪ್ಪು ಯಾರಿಂದ ಯಾಕೆ ನಡೆದಿದ್ದು?
ಆದರೆ, ಅವರಿಬ್ಬರಿಗೂ ತಮ್ಮತಮ್ಮ ಅಭಿಮಾನಿಗಳನ್ನು ಕಡೆಗಣಿಸಲೂ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, 'ಅಭಿಮಾನಿಗಳೇ ಅವರಿಗೆ ದೇವರು'. ದೇವರನ್ನು ಯಾರಾದರೂ ಎಂದಾದರೂ ಬಿಟ್ಟುಕೊಡಲು ಆಗುವುದೇ? ಅವರಿಬ್ಬರ ಮಧ್ಯೆ ಕಂದಕ ಸೃಷ್ಟಿಯಾಗಿದ್ದು ಅದೇ ಕಾರಣಕ್ಕೆ ಅಷ್ಟೇ.
ಈಗ ಮೂಲ ಕಾರಣಕ್ಕೆ ಬಂದರೆ, ಡಾ ರಾಜ್‌ಕುಮಾರ್ ಅವರು 1952 ರಲ್ಲಿ ಬೇಡರ ಕಣ್ಣಪ್ಪ ಮೂಲಕ ದೊಡ್ಡ ಮಟ್ಟದಲ್ಲಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ವಿಷ್ಣುವರ್ಧನ್ ಅವರು 1975 ರಲ್ಲಿ 'ನಾಗರಹಾವು' ಮೂಲಕ ಸ್ಟಾರ್ ನಟ ಆದರು. ಅಲ್ಲಿಗೆ 23 ವರ್ಷಗಳ ಅಂತರವಿತ್ತು. ಅದರೆ, ಡಾ ರಾಜ್‌ಕುಮಾರ್ ಅವರೊಂದಿಗೆ ಮತ್ತೊಬ್ಬ ಸ್ಟಾರ್ ನಟ ಕೂಡ ಕನ್ನಡದಲ್ಲಿ ಉದಯಿಸಿದ್ದು ಹಲವರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗಿತ್ತು. ಅದು ವಿರೋಧವಾಗಿ ರೂಪುಗೊಳ್ಳಲು ಅದಕ್ಕೊಂದು ನಿಖರ ಕಾರಣ, ಸರಿಯಾದ ನೆಪ ಬೇಕಿತ್ತು.
ನನ್ನ ಮೂಗು-ಮುಖದ ಬಗ್ಗೆ ಕಾಮೆಂಟ್ ಮಾಡ್ತಾರೆ; ತೀರಾ ಮನಸ್ಸಿಗೆ ತಗೊಂಡ್ರೆ ಬಿಟ್ಟು ಓಡಿ ಹೋಗ್ಬೇಕು ಅಷ್ಟೇ!
ಅದು ಸಾಧ್ಯವಾಗಿದ್ದು 'ಗಂಧದ ಗುಡಿ' ಚಿತ್ರದ ಮೂಲಕ ಎನ್ನುವುದು ಸತ್ಯ. ಡಾ ರಾಜ್‌ಕುಮಾರ್ ಅಭಿನಯದ 'ಗಂಧದ ಗುಡಿ' ಚಿತ್ರದಲ್ಲಿ ಡಾ ರಾಜ್ ಎದುರು ಖಳನಾಯಕ ಪಾತ್ರದಲ್ಲಿ ನಟ ವಿಷ್ಣುವರ್ಧನ್ ಅಭಿನಯಿಸಿದರು. ಅಷ್ಟರಲ್ಲೇ ಡಾ ರಾಜ್‌ಕುಮಾರ್ ಅವರಿಗೆ, ಹೀರೋ ಪಟ್ಟ, ಸ್ಟಾರ್ ಪಟ್ಟ ದಕ್ಕಿತ್ತು. ಡಾ ರಾಜ್‌ಕುಮಾರ್ ಅವರನ್ನು ಅವರ ಅಭಿಮಾನಿಗಳು ದೇವರೆಂದು ಪೂಜಿಸತೊಡಗಿದ್ದರು.
ಆದರೆ, ವಿಷ್ಣುವರ್ಧನ್ ಆಗಷ್ಟೇ ಚಿತ್ರರಂಗದಲ್ಲಿ ಮಿಂಚತೊಡಗಿದ್ದರು. ಹೀಗಾಗಿ ಅವರಿಗೆ ಡಾ ರಾಜ್‌ಕುಮಾರ್ ಅವರಷ್ಟು ಅಭಿಮಾನಿಗಳು ಇರಲಿಲ್ಲ. ಅದೇ ಸಮಯದಲ್ಲಿ ವಿಷ್ಣು ಅವರು ಅಭಿಮಾನಿಗಳಿಗೆ ದೇವರಾಗಿದ್ದ ಡಾ ರಾಜ್ ಎದುರು ವಿಲನ್ ಆಗಿ ಅಬ್ಬರಿಸಿಬಿಟ್ಟರು. ಸಾಲದು ಎಂಬಂತೆ, ಅದೊಂದು 'ಗನ್-ಗುಂಡು' ವಿವಾದ ಸಹ ಆಗಿಬಿಟ್ಟಿತು.
ಡಾ ರಾಜ್‌ಕುಮಾರ್ ಅಭಿಮಾನಿಗಳು ಅಂದಿನಿಂದ ನಟ ವಿಷ್ಣುವರ್ಧನ್ ಅವರನ್ನು ತುಂಬಾನೇ ದ್ವೇಷಿಸತೊಡಗಿದರು. ಅದು ಎಷ್ಟರಮಟ್ಟಿಗೆ ಸಮಸ್ಯೆ ತಂದೊಡ್ಡಿತು ಎಂದರೆ, ನಟ ವಿಷ್ಣುವರ್ಧನ್ ಕನ್ನಡನಾಡಿನಲ್ಲಿ ಇರೋದು, ಕನ್ನಡ ಚಿತ್ರಗಳಲ್ಲಿ ನಟಿಸೋದು ಬಹುತೇಕ ಕಷ್ಟವಾಗತೊಡಗಿತು. ಕೊನೆಗೆ ನಟ ವಿಷ್ಣುವರ್ಧನ್ ಅವರು ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ಬಿಟ್ಟು ಬೇರೆ ಭಾಷೆಗಳಲ್ಲಿ ನಟಿಸುವಂತಾಯಿತು.
ಮಲಯಾಳಂ ಚಿತ್ರರಂಗದ ಒಳಗಿನ 'ಹೂರಣ'ದ ಗುಟ್ಟನ್ನೇ ಬಿಚ್ಚಿಟ್ಟ ಕನ್ನಡ ನಟಿ ಸುಶ್ಮಿತಾ ಭಟ್..!
ಆದರೆ, ಕಾಲ ಕಳೆದಂತೆ ನಟ ವಿಷ್ಣು ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದರು. ಇಲ್ಲಿ ಸಿನಿಮಾ ಮಾಡಿ, ತಮ್ಮದೇ ಆದ ನಾಯಕನ ಇಮೇಜನ್ನು ಮತ್ತೆ ಪಡೆದರು. ಆದರೆ, ನಟ ವಿಷ್ಣುವರ್ಧನ್ ಸಿನಿಮಾ ಹಾಗೂ ನಿಜ ಜೀವನದ ಎಲ್ಲಾ ಸಮಸ್ಯೆಗಳಿಗೆ 'ಗಂಧದ ಗುಡಿ' ಚಿತ್ರದಲ್ಲಿ ಮಾಡಿದ ಅದೊಂದೇ ಪಾತ್ರ ಕಾರಣವಾಯಿತು. ಈ ಮಾತನ್ನು ಆ ಕಾಲದ ಬಹುತೇಕ ಎಲ್ಲರೂ ಹೇಳುತ್ತಾರೆ.
ಹಾಗಿದ್ರೆ ನಟ ವಿಷ್ಣುವರ್ಧನ್ ಎಡವಿದ್ದೆಲ್ಲಿ? ಯಾಕೆ ಡಾ ರಾಜ್‌ಕುಮಾರ್ ಎದುರು ವಿಲನ್ ಪಾತ್ರ ಮಾಡಿ ತಪ್ಪು ಮಾಡಿಬಿಟ್ಟರು? ಅದಕ್ಕೆ ಕಾರಣ, ಅಂದು ನಟ ವಿಷ್ಣುವರ್ಧನ್ ಅವರು ತುಂಬಾ ಎಳಸು. ಅವರಿಗಾಗ ಕೇವಲ 25-26ರ ವಯಸ್ಸು. ಪುಟ್ಟಣ್ಣ ಕಣಗಾಲ್ ಸೇರಿದಂತೆ ಕೆಲವರು ನಟ ವಿಷ್ಣುವರ್ಧನ್ ಅವರಿಗೆ ಡಾ ರಾಜ್ ಎದುರು ವಿಲನ್ ಪಾತ್ರ ಮಾಡೋದು ಬೇಡ ಎಂದು ಎಚ್ಚರಿಸಿದ್ದರು.
ಆದರೆ, ಅದೆಲ್ಲಾ ಅರ್ಥವಾಗುವಷ್ಟು ಮೆಚ್ಯುರಿಟಿ ಅಂದು ನಟ ವಿಷ್ಣುವರ್ಧನ್ ಅವರಿಗೆ ಇರಲೇ ಇಲ್ಲ. ಮೇಲಾಗಿ, ಅವರಿಗೆ ಸಿನಿಮಾ ಮೇಲಿನ ಪ್ರೀತಿ ಜಾಸ್ತ ಇತ್ತು, ಪಾತ್ರಗಳ ಆಯ್ಕೆ ಬಗ್ಗೆ ಅಷ್ಟು ನಿಖರವಾದ ಜ್ಞಾನ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ, ವಿಷ್ಣು ಅವರಿಗೆ ಅಭಿಮಾನಿಗಳ 'ಮೆಂಟಾಲಿಟಿ' ಹೇಗಿರುತ್ತದೆ ಎಂಬ ಬಗ್ಗೆ ಸ್ವಲ್ಪವೂ ಜ್ಞಾನ ಇರಲೇ ಇಲ್ಲ.
ನಟರು ಬಂದು ಸಂಭಾಷಣೆ ಹೇಳಿ ಅಭಿನಯಿಸಿ ಹೋಗ್ತಾರೆ, ಅದ್ರಲ್ಲಿ ಕಷ್ಟ ಏನಿದೆ ಅಂದ್ಕೊಂಡಿದ್ದೆ: ಕಾರ್ತಿಕ್ ಗೌಡ!
ಅಭಿಮಾನಿಗಳು ಎಂದರೆ ಅವರು ಭಾವನಾತ್ಮಕ ಜೀವಗಳು, ಅವರೆಲ್ಲ ರಿಯಾಲಿಟಿಗಿಂತ ಪಾತ್ರಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಜೊತೆಗೆ, ಯಾವುದೇ ನಟರ ಫ್ಯಾನ್ಸ್‌ಗಳಿಗೆ ಸಿನಿಮಾದಲ್ಲಿ ಮಾಡುವ ಪಾತ್ರ ಬೇರೆ, ವ್ಯಕ್ತಿ-ವ್ಯಕ್ತಿತ್ವ ಬೇರೆ ಎಂಬ ಬೇಸಿಕ್ ಜ್ಞಾನ ಸಹ ಇರೋದಿಲ್ಲ. ಆ ಜ್ಞಾನ ಇದ್ದರೆ ಅವರು ಎಲ್ಲ ನಟನಟಿಯರ ಸಿನಿಮಾಗಳನ್ನು ನೋಡುತ್ತಾರೆ, ಎಲ್ಲರನ್ನೂ ಪ್ರೀತಿಸುತ್ತಾರೆ, ಗೌರವಿಸುತ್ತಾರೆ.
ಆದರೆ, ವ್ಯಕ್ತಿ-ವ್ಯಕ್ತಿತ್ವದ ಜ್ಞಾನ ಇಲ್ಲದೇ ಕೇವಲ ಪಾತ್ರಗಳ ಮೂಲಕವಷ್ಟೇ ಸಿನಿಮಾ ಹಾಗು ಜಗತ್ತನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುವ ನಟರ ಅಭಿಮಾನಿಗಳು ತಮ್ಮ 'ಆರಾಧ್ಯ ದೈವ' ಆಗಿರುವ ನಟನನ್ನು ಬಿಟ್ಟು ಉಳಿದವರನ್ನು ದ್ವೇಷಿಸತೊಡಗುತ್ತಾರೆ. ಡಾ ರಾಜ್-ವಿಷ್ಣು ವಿಷಯದಲ್ಲಿ ಆಗಿದ್ದು ಅದೇ.
ಅಭಿಮಾನಿಗಳ ಅಪ್ರಬುದ್ಧತೆ, ವ್ಯಕ್ತಿ-ನೈಜತೆಗಲ್ಲದೇ ಭಾವನೆಗಳಿಗೆ ಮಾತ್ರ ಕೊಡುವ ಬೆಲೆ, ಈ ಬಗ್ಗೆ ಅಂದು ಅರಿವು ಇರದ ನಟ ವಿಷ್ಣುವರ್ಧನ್ ಅವರು, ಡಾ ರಾಜ್‌ಕುಮಾರ್ ಅವರು ಹೀರೋ ಆಗಿದ್ದ ಗಂಧದ ಗುಡಿ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ಬಹುದೊಡ್ಡ ತಪ್ಪು ಮಾಡಿಬಿಟ್ಟರು. ಅದು ಅವರನ್ನು ಸಾಯುವವರೆಗೂ ಇನ್ನಿಲ್ಲದಂತೆ ಕಾಡಿತು. ಅದನ್ನು ಸ್ವತಃ ನಟ ವಿಷ್ಣುವರ್ಧನ್ ಆಮೇಲೆ ಅರಿತು ಕೆಲವು ಕಡೆಗಳಲ್ಲಿ ಹೇಳಿಕೊಂಡಿದ್ದರು.
ಡಾ ರಾಜ್‌ಕುಮಾರ್‌ಗೇ ಎರಡು ದೊಡ್ಡ ಕಂಡೀಷನ್ ಹಾಕಿದ್ದ ಅಂಬರೀಷ್; ಅಣ್ಣಾವ್ರು ಮಾಡಿದ್ದೇನು?
ಅದು ಸತ್ಯವೂ ಆಗಿತ್ತು. ಏಕೆಂದರೆ, ಇಂದೂ ಕೂಡ ನಾಯಕನ ಪಾತ್ರವನ್ನು ಆಯ್ಕೆ ಮಾಡಿಕೊಂಡವರು ಹೀರೋ ಆಗಿಯೂ, ವಿಲನ್ ಪಾತ್ರ ಮಾಡಿದವರು ವಿಲನ್ ಆಗಿಯೂ ಗುರುತಿಸಿಕೊಳ್ಳುತ್ತಾರೆ. ಆದರೆ, ಕೆಲವರು ಮಾತ್ರ ಎಲ್ಲಾ ತರದ ಪಾತ್ರ ಮಾಡಿ ಕಲಾವಿದರು ಎನ್ನಿಸಿಕೊಳ್ಳುತ್ತಾರೆ. ಅವರಿಗೆ ಹೀರೋ ಅಥವಾ ವಿಲನ್ ಯಾವುದೇ ಇಮೇಜ್ ಅಂಟಿಕೊಳ್ಳುವುದಿಲ್ಲ.
ಈ ಕಾರಣಕ್ಕೇ, ಇದೊಂದೇ ಕಾರಣಕ್ಕೆ ಅಂದಿನಿಂದ ಜೀವನದ ಕೊನೆಯವರೆಗೂ ನಟ ವಿಷ್ಣುವರ್ಧನ್ ತುಂಬಾ ನೋವು, ಅವಮಾನ ಅನುಭವಿಸಬೇಕಾಯ್ತು. 'ಪ್ರಾಣ ಸ್ನೇಹಿತ' ಆಗಿ ನಟ ರೆಬೆಲ್ ಸ್ಟಾರ್ ಅಂಬರೀಷ್ ಅವರು ನಟ ವಿಷ್ಣುವರ್ಧನ್ ಜೊತೆ ನಿಲ್ಲದಿದ್ದರೆ ಬಹುಶಃ ಡಾ ರಾಜ್‌ಕುಮಾರ್ ಅಭಿಮಾನಿಗಳು ವಿಷ್ಣು ಅವರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಕಷ್ಟಕ್ಕೆ ಗುರಿಪಡಿಸುತ್ತಿದ್ದರು.
ಜಗತ್ತಿನ ಯಾವ ದೇಶವೂ ಭಾರತಕ್ಕೆ ಸಮವಲ್ಲ; ರಾಜಮೌಳಿ ಈ ಮಾತನ್ನು ಹೇಳಿದ್ದೆಲ್ಲಿ..?
ಈ ಮಾತನ್ನು ಬಹಳಷ್ಟು ಜನರು ಹೇಳುತ್ತಾರೆ. ಆದರೆ, ಈ ಘಟನೆಗಳಿಗೆ ಡಾ ರಾಜ್‌ಕುಮಾರ್ ಆಗಲೀ ಅಥವಾ ವಿಷ್ಣುವರ್ಧನ್ ಅವರಾಗಲೀ ಕಾರಣವೇ ಅಲ್ಲ. 'ಒಬ್ಬರನ್ನು ಪ್ರೀತಿಸಿದರೆ ಇನ್ನೊಬ್ಬರನ್ನು ದ್ವೇಷಿಸಬೇಕು' ಎಂಬ ಅಭಿಮಾನಿಗಳ ಅತಿರೇಕದ ಭಾವನೆಯೇ ಕಾರಣ. ಅಂದು ಮಾತ್ರ ಅಲ್ಲ, ಇಂದೂ ಕೂಡ ಸ್ಟಾರ್ ಟನರ ಅಭಿಮಾನಿಗಳು ಹಾಗೇ ಇದ್ದಾರೆ. ಅವರು ಬದಲಾದರೆ ಯಾವುದೇ ನಟರುಗಳಿಗೂ ಸಮಸ್ಯೆ ಇರಲ್ಲ, ಇಲ್ಲವಾದರೆ ಸಮಸ್ಯೆ ತಪ್ಪಿದ್ದಲ್ಲ..!


