Asianet Suvarna News Asianet Suvarna News

ಹಿಂದಿ​ಯಲ್ಲೂ ಶತ​ದಿ​ನೋ​ತ್ಸವ ಆಚ​ರಿ​ಸಿದ ಬ್ಲಾಕ್‌ಬಸ್ಟರ್‌ ‘ಕಾಂತಾ​ರ’

ನಟ, ನಿರ್ದೇ​ಶಕ ರಿಷಬ್‌ ಶೆಟ್ಟಿ ನಿರ್ದೇ​ಶ​ನದ ಬ್ಲಾಕ್‌​ಬ​ಸ್ಟರ್‌ ಚಲ​ನ​ಚಿತ್ರ ‘ಕಾಂತಾ​ರ’ ಹಿಂದಿ ಅವ​ತ​ರ​ಣಿ​ಕೆ​ಯಲ್ಲೂ 100 ದಿನ ಪೂರೈ​ಸಿದೆ. ಅ.14ರಂದು ಸಿನಿ​ಮಾದ ಹಿಂದಿ ಅವ​ತ​ರ​ಣಿ​ಕೆ​ಯನ್ನು ಚಿತ್ರ​ಮಂದಿ​ರ​ಗ​ಳಲ್ಲಿ ಬಿಡು​ಗಡೆ ಮಾಡ​ಲಾ​ಗಿತ್ತು. 

Hindi Dubbed Version Of Kantara Completes 100 Days In Theatres gvd
Author
First Published Jan 23, 2023, 8:41 AM IST

ಬೆಂಗ​ಳೂ​ರು (ಜ.23): ನಟ, ನಿರ್ದೇ​ಶಕ ರಿಷಬ್‌ ಶೆಟ್ಟಿ ನಿರ್ದೇ​ಶ​ನದ ಬ್ಲಾಕ್‌​ಬ​ಸ್ಟರ್‌ ಚಲ​ನ​ಚಿತ್ರ ‘ಕಾಂತಾ​ರ’ ಹಿಂದಿ ಅವ​ತ​ರ​ಣಿ​ಕೆ​ಯಲ್ಲೂ 100 ದಿನ ಪೂರೈ​ಸಿದೆ. ಅ.14ರಂದು ಸಿನಿ​ಮಾದ ಹಿಂದಿ ಅವ​ತ​ರ​ಣಿ​ಕೆ​ಯನ್ನು ಚಿತ್ರ​ಮಂದಿ​ರ​ಗ​ಳಲ್ಲಿ ಬಿಡು​ಗಡೆ ಮಾಡ​ಲಾ​ಗಿತ್ತು. ಈ ಕುರಿ​ತಾಗಿ ಟ್ವೀಟ​ರ್‌​ನಲ್ಲಿ ಸಂಭ್ರಮ ಹಂಚಿ​ಕೊಂಡಿ​ರುವ ನಿರ್ದೇ​ಶಕ ರಿಷಬ್‌ ಶೆಟ್ಟಿ, ಸಾಂಪ್ರಾ​ದಾ​ಯಿಕ ಜಾನ​ಪ​ದ​ವನ್ನು ಬಿಂಬಿ​ಸುವ ಸಿನಿಮಾ ‘ಕಾಂತಾ​ರ’ ಹಿಂದಿ ಭಾಷೆ​ಯಲ್ಲೂ 100 ದಿನ​ಗಳನ್ನು ಪೂರೈ​ಸಿದೆ. ಈ ವಿಷ​ಯ​ವನ್ನು ಹಂಚಿ​ಕೊ​ಳ್ಳಲು ಸಂಭ್ರ​ಮ​ವಾ​ಗು​ತ್ತಿದೆ. ಅಚಲ ಬೆಂಬ​ಲ​ಕ್ಕಾಗಿ ನಾವು ನಮ್ಮ ಪ್ರೇಕ್ಷ​ಕ​ರಿಗೆ ಕೃತ​ಜ್ಞ​ತೆಯನ್ನು ತಿಳಿ​ಸು​ತ್ತೇವೆ ಎಂದು ಹೇಳಿ​ದ್ದಾರೆ. ಮೊದ​ಲಿಗೆ ಕನ್ನಡ ಭಾಷೆ​ಯ​ಲ್ಲಷ್ಟೇ ಬಿಡು​ಗ​ಡೆ​ಯಾದ ಸಿನಿ​ಮಾಕ್ಕೆ ಭಾರಿ ಜನ​ಮ​ನ್ನಣೆ ದೊರೆತ ಹಿನ್ನೆ​ಲೆ​ಯಲ್ಲಿ ಉಳಿದ ಭಾಷೆ​ಗ​ಳಲ್ಲೂ ಸಿನಿ​ಮಾ​ವನ್ನು ಬಿಡು​ಗಡೆ ಮಾಡ​ಲಾ​ಗಿತ್ತು.
 


ಕಾಂತಾರ ಚಿತ್ರದಲ್ಲಿ ಯಾವುದೇ ಅಜೆಂಡಾಗಳಿಲ್ಲ: ‘ಕಾಂತಾರ ಸರಳ ಕಥೆ ಇರುವ ಚಿತ್ರ. ಇದರಲ್ಲಿ ಯಾವುದೇ ಅಜೆಂಡಾಗಳಿಲ್ಲ’ ಎಂದು ರಿಷಬ್‌ ಶೆಟ್ಟಿಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್‌, ‘ಸಿನಿಮಾದಲ್ಲಿ ಜಾನಪದ, ನಂಬಿಕೆ, ಸಂಸ್ಕೃತಿಯ ಅಂಶಗಳಿವೆ. ನನ್ನ ಬಾಲ್ಯದಿಂದ ನೋಡಿದ ಸಂಗತಿಗಳನ್ನೇ ಸಿನಿಮಾದಲ್ಲಿ ತಂದಿದ್ದೇನೆ. ಅದು ಬಿಟ್ಟು ಅಜೆಂಡಾಗಳೆಲ್ಲ ಏನೂ ಇಲ್ಲ. ಕಾಂತಾರ ಅಂತಲ್ಲ, ಯಾವುದೇ ಸಿನಿಮಾ ತಗೊಂಡರೂ 0.1 ಪರ್ಸೆಂಟ್‌ ಜನ ತಗಾದೆ ತೆಗೆಯುತ್ತಾರೆ. ಇಂಥವಕ್ಕೆಲ್ಲ ನಾನು ಸಿನಿಮಾ ಮೂಲಕವೇ ಉತ್ತರ ಕೊಡುತ್ತೇನೆ. 

ಜನ ನನ್ನ ಸಿನಿಮಾ ಇಷ್ಟ ಆಗಲಿಲ್ಲ ಅಂದರೂ ನಾನು ನನ್ನ ಕೆಲಸ ಮುಂದುವರಿಸುತ್ತಲೇ ಇರುತ್ತೇನೆ. ಇಂದು ರಾಜಕೀಯ ಎಲ್ಲಾ ಕಡೆ ಇದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ರಿಷಬ್‌ ಶೆಟ್ಟಿಹೇಳಿದ್ದಾರೆ. ‘ಕಾಂತಾರ ಆಸ್ಕರ್‌ಗೆ ಶಾರ್ಚ್‌ಲಿಸ್ಟ್‌ ಆದಮೇಲೆ ಮುಂಬರುವ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಾವು ಇವನ್ನು ದಾಟಿ ಮುಂದೆ ಹೋಗುತ್ತಿರಬೇಕು. ಯಾವುದೇ ಹೊರೆಯಿಲ್ಲದೇ ಸಿನಿಮಾ ಮಾಡಬೇಕು. ನಾನು ಒತ್ತಡವನ್ನು ಹೇರಿಕೊಂಡಿದ್ದರೆ ಕಾಂತಾರದಂಥಾ ಸಿನಿಮಾ ಮಾಡಲಾಗುತ್ತಿರಲಿಲ್ಲ’ ಎಂದೂ ರಿಷಬ್‌ ಹೇಳಿದ್ದಾರೆ.

Kantara; ಸಕ್ಸಸ್ ಬಳಿಕ ಹರಕೆ ತೀರಿಸಿದ ಚಿತ್ರತಂಡ; ರಿಷಬ್ ಮತ್ತು ತಂಡವನ್ನು ಅಪ್ಪಿಕೊಂಡ ದೈವ

ಆಸ್ಕರ್ ಅಂಗಳದಲ್ಲಿ ಕಾಂತಾರ: ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿಯ ಸ್ಪರ್ಧೆಯಲ್ಲಿ ಭಾಗವಹಿಸಲು  ಅರ್ಹತೆ ಪಡೆದಿದೆ. ಈ ಸುದ್ದಿಯನ್ನು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಕಾಂತಾರ ಆಸ್ಕರ್​ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

Follow Us:
Download App:
  • android
  • ios