ಹ್ಯಾಪಿ ಫಾದರ್ಸ್ ಡೇ ಅಪ್ಪಾ, ಯೂ ಆರ್ ಫಾರ್ ಎವರ್ ಮೈ ಹೀರೋ; ವಿನೀಶ್ ತೂಗುದೀಪ

'ಅಪ್ಪಾ, ನೀವೂ ಯಾವತ್ತಿಗೂ ನನ್ನ ಹೀರೋ..' ಎಂದು ನಟ ದರ್ಶನ್ ಮಗ ವಿನೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು  'ಅಪ್ಪಂದಿರ ದಿನ'ದ ಅಂಗವಾಗಿ ತನ್ನ ಅಪ್ಪ ನಟ ದರ್ಶನ್ ಅವರಿಗೆ ವಿಶ್ ಮಾಡಿ ಮಗ ವಿನೀಶ್..

Happy Fathers day appa You are for ever my hero Says actor Darshan son vineesh toogudeepa srb

'ಅಪ್ಪಾ, ನೀವೂ ಯಾವತ್ತಿಗೂ ನನ್ನ ಹೀರೋ..' ಎಂದು ನಟ ದರ್ಶನ್ ಮಗ ವಿನೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂದು, 16 ಜೂನ್ 2026ರಂದು 'ಅಪ್ಪಂದಿರ ದಿನ'ದ ಅಂಗವಾಗಿ ತನ್ನ ಅಪ್ಪ ನಟ ದರ್ಶನ್ ಅವರಿಗೆ ವಿಶ್ ಮಾಡಿ ಮಗ ವಿನೀಶ್ ಪೋಸ್ಟ್ ಮಾಡಿದ್ದಾನೆ. 'ಹ್ಯಾಪಿ ಫಾದರ್ಸ್ ಡೇ ಅಪ್ಪಾ. ಮಿಸ್ ಯೂ ಅಂಡ್ ಲವ್ ಯೂ, ಯೂ ಆರ್ ಫಾರ್ ಎವರ್ ಮೈ ಹೀರೋ' ಎಂದು ವಿನೀಶ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ಪೋಸ್ಟ್‌ಗೆ ಸಹಜವಾಗಿಯೇ ಸಾಕಷ್ಟು ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. 

ಸದ್ಯ ದರ್ಶನ್ (Actor Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಹದಿನೇಳು ಆರೋಪಿಗಳು ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಒಂಬತ್ತು ದಿನಗಳ ವಿಚಾರಣೆ ನಡೆಯಲಿದ್ದು ಅದರಲ್ಲಿ ಈಗಾಗಲೇ ಐದು ದಿನಗಳನ್ನು ಕಳೆದಿದ್ದು, ಆರನೇ ದಿನದ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಎಲ್ಲ ಆರೋಪಿಗಳನ್ನೂ ಕೋರ್ಟ್‌ಗೆ ಹಾಜರು ಪಡಿಸಲಾಗುವುದು. ಆ ಬಳಿಕ ಆರೋಪ ಸಾಬೀತಾದರೆ ಕಾನೂನಿನ ಪ್ರಕಾರ ಮುಂದಿನ ಶಿಕ್ಷೆ ವಿಧಿಸಲಾಗುವುದು. ಇದು ಈ ಕೊಲೆ ಕೇಸಿಗೆ ಸಂಬಂಧಿಸಿದ ಸದ್ಯ ಹಾಗು ಮುಂದಿನ ನಡೆಯ ಮಾಹಿತಿ. 

ಮೆಟ್ಟು ಮೇಲ್ಗಡೆ ಇಟ್ಟು ಇಳೀರಿ, ಗಂಗಮ್ಮ ತಾಯಿಗ್ ಹಿಂಗೆಲ್ಲಾ ಮಾಡ್ಬಾರ್ದು; ಶಾಕ್ ಆಗಿದ್ರಂತೆ ಡಾ ರಾಜ್‌!

ಇನ್ನು, ರೇಣುಕಾ ಸ್ವಾಮಿ ಹತ್ಯೆ ಆರೋಪ ಎದುರಿಸುತ್ತಿರುವ ನಟಿ ಪವಿತ್ರಾ ಗೌಡ ಹಾಗು ನಟ ದರ್ಶನ್ ಸೇರಿದಂತೆ ಹದಿನೇಳು ಜನರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮೊದಲು ಐದು ದಿನಗಳ ಕಾಲ ವಿಚಾರಣೆ ನಡಸಲು ಹೇಳಿದ್ದ ನ್ಯಾಯಾಲಯ ಬಳಿಕ ಮತ್ತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಮುಂದುವರೆಸಿದ್ದು, ಬಳಿಕ ಅಗತ್ಯವಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎನ್ನಲಾಗಿದೆ.

ಹತ್ತು ಎಕರೆ ಬೇಕಾ, ಜನಕ್ಕೆ ಉಪಯೋಗ ಆಗುತ್ತೆ ಅಂದ್ರೆ ನಾನೇ ಕೊಡ್ತೀನಿ; ರಾಕಿಂಗ್ ಸ್ಟಾರ್ ಯಶ್! 

ನಟ ದರ್ಶನ್ ಮಗ ವಿನೀಶ್‌ಗೆ ಯಾವತ್ತೂ ಅಪ್ಪ ಎಂದರೆ ಅಚ್ಚುಮೆಚ್ಚು. ಅಪ್ಪ ದರ್ಶನ್‌ ಹಾಗು ಅಮ್ಮ ವಿಜಯಲಕ್ಷ್ಮೀ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬಂತಿದ್ದರೂ ದರ್ಶನ್‌ ಆಗಲೀ, ವಿನೀಶ್ ಆಗಲೀ ಯಾವತ್ತೂ ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲ. ಕಳೆದ ಮಾರ್ಚ್‌ನಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ರೇಂಜ್ ರೋವರ್  ಕಾರ್ ಕೊಂಡುಕೊಂಡಿದ್ದು, ಅದರಲ್ಲಿ ಅಪ್ಪ-ಅಮ್ಮನ ಜೊತೆ ವಿನೀಶ್ ಸುತ್ತಾಡಿಡದ್ದ.  ಆದರೆ, ಈಗ ವಿನೀಶ್‌ಗೆ ಫಾದರ್ ಡೇಯಂದು ತನ್ನ ಅಪ್ಪನಿಲ್ಲ ಕೊರಗು ಕಾಡುತ್ತಿದೆ. ಅದನ್ನು ಯಾರೇ ಆದರೂ ಗ್ರಹಿಸಬಹುದು. ಅದರಲ್ಲೂ ಅಪ್ಪಂದಿರ ದಿನದಂದು ವಿನೀಶ್ ಹಾಕಿರುವ ಪೋಸ್ಟ್ ಅದನ್ನೇ ಹೇಳುತ್ತಿದೆ. 

ಅಮ್ಮನಿಗೆ ಅಪ್ಪಂದಿರ ದಿನದ ಶುಭಾಶಯ ತಿಳಿಸಿದ ಪವಿತ್ರಾ ಗೌಡ ಮಗಳು

ಒಟ್ಟಿನಲ್ಲಿ, ನಟ ದರ್ಶನ್ ಬಾಳಿನಲ್ಲಿ ದೊಡ್ಡ ಬಿರುಗಾಳಿ ಬೀಸಿದೆ. ಕೊಲೆ ಆರೋಪದಲ್ಲಿ ಪೊಲೀಸ್ ವಿಚಾರಣೆ ಎದುರಿಸುವಂತಾಗಿದೆ. ಅದರಲ್ಲೂ ಮುಖ್ಯವಾಗಿ 19 ಆರೋಪಿಗಳಲ್ಲಿ ಎ2 ಆರೋಪಿ ಎನಿಸಿಕೊಂಡಿರುವ ನಟ ದರ್ಶನ್, ಈ ಆರೋಪ ಸಾಬೀತಾದರೆ ಜೈಲು ಕಂಬಿಯ ಹಿಂದೆ ಹೋಗಬೇಕಾಗುತ್ತದೆ. ಒಮ್ಮೆ ಹಾಗೇನಾದರೂ ಆದರೆ, ಏನೂ ತಪ್ಪು ಮಾಡದ ಮಗ ವಿನೀಶ್ ಬದುಕು ನೋವಿನಿಂದ ಕೂಡಿರುತ್ತದೆ. 

ಈ ಎರಡೇ ಸಂಗತಿಗಳು ನೀವೇನು ಎಂಬುದನ್ನು ಜಗತ್ತಿಗೆ ಹೇಳುತ್ತವೆ; ನಟ ದಳಪತಿ ವಿಜಯ್

ಹೀಗಾಗಿ ಸಹಜವಾಗಿಯೇ ನಾಗರೀಕ ಸಮಾಜ ಮಗನ ಬಗ್ಗೆ ಮರುಕ ಪಡುತ್ತಿದೆ. ಸದಯ ವಿನೀಶ್ ಬಾಳಿಗೆ ಅಪ್ಪ-ಅಮ್ಮ ಎರಡೂ ಆಗಿರುವ ವಿಜಯಲಕ್ಷ್ಮಿ, ದರ್ಶನ್ ಪರವಾಗಿ ಕಾನೂನು ಹೋರಾಟ ನಡೆಸಲು ಲಾಯರ್ ನೇಮಿಸಿದ್ದಾರೆ ಎನ್ನಲಾಗಿದೆ. ನಟ ದರ್ಶನ್ ನಿರಪರಾಧಿ ಎಂಬ ಪಟ್ಟದೊಂದಿಗೆ ಹಿಂದಿರುಗುತ್ತಾರಾ? ಸದ್ಯಕ್ಕೆ ಇದು ಉತ್ತರವಿಲ್ಲದ ಪ್ರಶ್ನೆ ಎನ್ನಬಹುದು.

Latest Videos
Follow Us:
Download App:
  • android
  • ios