ಭಾರತದ ಖ್ಯಾತ ಗಾಯಕ ಶಂಕರ್ ಮಹದೇವನ್, ಜಾಕೀರ್ ಹುಸೈನ್‌ಗೆ ಗ್ರ್ಯಾಮಿ ಪ್ರಶಸ್ತಿ ಗರಿ
ಭಾರತದ ಖ್ಯಾತ ಗಾಯಕ ಶಂಕರ್ ಮಹದೇವನ್ ಹಾಗೂ ಜಾಕೀರ್ ಹುಸೈನ್ ಇಬ್ಬರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ, ಶಂಕರ್ ಮಹದೇವನ್ ಅವವರ ಶಕ್ತಿ ಫ್ಯೂಶನ್ ಬ್ಯಾಂಡ್‌ಗೆ ಅತ್ಯುತ್ತಮ ಜಾಗತಿಕ ಸಂಗೀತಾ ಅಲ್ಬಂ ಪ್ರಶಸ್ತಿ ಲಭಿಸಿದ್ದು, ತಮ್ಮ ಇತ್ತೀಚಿನ ಮ್ಯೂಸಿಕ್ ಅಲ್ಬಂ ದಿಸ್ ಮುಮೆಂಟ್‌ಗೆ ಈ ಪ್ರಶಸ್ತಿ ಲಭಿಸಿದೆ.
ಭಾರತದ ಖ್ಯಾತ ಗಾಯಕ ಶಂಕರ್ ಮಹದೇವನ್ ಹಾಗೂ ಜಾಕೀರ್ ಹುಸೈನ್ ಇಬ್ಬರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ, ಶಂಕರ್ ಮಹದೇವನ್ ಅವವರ ಶಕ್ತಿ ಫ್ಯೂಶನ್ ಬ್ಯಾಂಡ್‌ಗೆ ಅತ್ಯುತ್ತಮ ಜಾಗತಿಕ ಸಂಗೀತಾ ಅಲ್ಬಂ ಪ್ರಶಸ್ತಿ ಲಭಿಸಿದ್ದು, ತಮ್ಮ ಇತ್ತೀಚಿನ ಮ್ಯೂಸಿಕ್ ಅಲ್ಬಂ ದಿಸ್ ಮುಮೆಂಟ್‌ಗೆ ಈ ಪ್ರಶಸ್ತಿ ಲಭಿಸಿದೆ.
ಗ್ರ್ಯಾಮಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶಂಕರ್ ಮಹದೇವನ್ ಹಾಗೂ ಬ್ಯಾಂಡ್‌ನ ಇನ್ನೊಬ್ಬ ಸದಸ್ಯರಾದ ರಾಜಗೋಪಾಲನ್ ಅವರು ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅಭಿನಂದನೆಗಳು ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಮ್ ವಿಜೇತರಿಗೆ ದಿಸ್ ಮುಮೆಂಟ್ ಶಕ್ತಿ, ಎಂದು ಬರೆದು ಗ್ರ್ಯಾಮಿ ಹ್ಯಾಶ್‌ಟ್ಯಾಗ್ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮಹದೇವನ್, ಧನ್ಯವಾದ ಹುಡುಗರೇ. ದೇವರು, ಕುಟುಂಬ, ಸ್ನೇಹಿತರು ಮತ್ತು ಭಾರತಕ್ಕೆ ನನ್ನ ಧನ್ಯವಾದಗಳು. ಭಾರತವೇ, ನಾವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಕೊನೆಯದಾಗಿ ನಾನು ನನ್ನ ಪತ್ನಿಗೆ ನಾನು ಈ ಪ್ರಶಸ್ತಿಯನ್ನು ಅರ್ಪಿಸಲು ಬಯಸುತ್ತೇನೆ. ನನ್ನ ಸಂಗೀತದ ಪ್ರತಿಯೊಂದು ಟಿಪ್ಪಣಿಯೂ ಆಕೆಗೆ ಅರ್ಪಣೆ ಎಂದು ಶಂಕರ್ ಮಹದೇವನ್ ಹೇಳಿದ್ದಾರೆ. ಇವರ ಮಾತಿಗೆ ಅಲ್ಲಿ ಸೇರಿದ್ದ ಜನ ಸೀಳೆ ಹೊಡೆದು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
'ದೇವರ ಆಶೀರ್ವಾದ ಈಕೆ' ಶಾಲ್ಮಲಿ ಹಾಡನ್ನು ಮೆಚ್ಚಿ ಶಂಕರ್ ಮಹದೇವನ್ ಪೋಸ್ಟ್
ಕಳೆದ ವರ್ಷ ಜೂನ್ 30 ರಂದು ಬಿಡುಗಡೆಯಾದ 'ದಿಸ್ ಮೂಮೆಂಟ್' ಆಲ್ಬಂನಲ್ಲಿ ಜಾನ್ ಮೆಕ್‌ಲಾಫ್ಲಿನ್ (ಗಿಟಾರ್ ಸಿಂಥ್), ಜಾಕಿರ್ ಹುಸೇನ್ (ತಬಲಾ), ಶಂಕರ್ ಮಹದೇವನ್ (ಗಾಯನ), ವಿ ಸೆಲ್ವಗಣೇಶ್ (ತಾಳವಾದ್ಯ ), ಮತ್ತು ಗಣೇಶ್ ರಾಜಗೋಪಾಲನ್ (ಪಿಟೀಲು ) ಸಂಯೋಜನೆಯಲ್ಲಿ ಒಟ್ಟು ಎಂಟು ಹಾಡುಗಳನ್ನು ರಚಿಸಲಾಗಿದೆ. ಇವರೊಂದಿಗೆ ಅವರು ಸುಸಾನಾ ಬಾಕಾ, ಬೊಕಾಂಟೆ, ಬರ್ನಾ ಬಾಯ್ ಮತ್ತು ಡೇವಿಡೊ ಅವರಂತಹ ಇತರ ಕಲಾವಿದರು ಕೂಡ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಇದರ ಜೊತೆಗೆ ಗ್ರಾಮಿ ಪ್ರಶಸ್ತಿ ಗಳಿಸಿದ ಮತ್ತೊಬ್ಬ ಭಾರತೀಯ ಜಾಕಿರ್ ಹುಸೇನ್ ಅವರಿಗೆ ಬೆಲಾ ಫ್ಲೆಕ್ ಮತ್ತು ಎಡ್ಗರ್ ಮೆಯೆರ್ ಅವರೊಂದಿಗೆ ಜೊತೆಯಾಗಿ ನಿರ್ಮಿಸಿದ 'ಪಾಷ್ಟೋ' ಗೆ ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ. ಇದರಲ್ಲಿ ರಾಕೇಶ್ ಚೌರಾಸಿಯಾ ಅವರು ಕೊಳಲು ನುಡಿಸಿದ್ದರು. ಹುಸೇನ್ ಅವರಿಗೆ ಮೂರು ಪ್ರಶಸ್ತಿ ಬಂದಿದ್ದರೆ, ರಾಕೇಶ್ ಚೌರಾಸಿಯಾ ಅವರಿಗೆ ಎರಡು ಪ್ರಶಸ್ತಿಗಳು ಲಭಿಸಿವೆ.
ಅಖಂಡ ಭಾರತ ಧ್ಯೇಯವನ್ನು ಉಳಿಸುವಲ್ಲಿ ಆರ್‌ಎಸ್ಎಸ್ ಕೊಡುಗೆ ಶ್ಲಾಘಿಸಿದ ಶಂಕರ್ ಮಹದೇವನ್!
66ನೇ ವರ್ಷದ ಈ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭವೂ ಅಮೆರಿಕಾದ ಲಾಸ್ ಎಂಜಲೀಸ್‌ನಲ್ಲಿ ಅದ್ದೂರಿಯಾಗಿ ನಡೆಯಿತು.