ಅಖಂಡ ಭಾರತ ಧ್ಯೇಯವನ್ನು ಉಳಿಸುವಲ್ಲಿ ಆರ್ಎಸ್ಎಸ್ ಕೊಡುಗೆ ಶ್ಲಾಘಿಸಿದ ಶಂಕರ್ ಮಹದೇವನ್!
ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಗ್ಪುರದಲ್ಲಿ ವಿಜಯದಶಮಿ ಹಬ್ಬವನ್ನು ಆಯೋಜಿಸಿದೆ. 1925ರಲ್ಲಿ ವಿಜಯದಶಮಿಯಂದು ಆರ್‌ಎಸ್‌ಎಸ್ ಸ್ಥಾಪನೆಯಾಯಿತು. ಅದಕ್ಕಾಗಿಯೇ ಪ್ರತಿ ವರ್ಷ ಆರ್‌ಎಸ್‌ಎಸ್ ತನ್ನ ಸಂಸ್ಥಾಪನಾ ದಿನವನ್ನು ದಸರಾದಂದು ಆಚರಿಸುತ್ತದೆ. ಈ ಬಾರಿ ಆರೆಸ್ಸೆಸ್ ಸಂಸ್ಥಾಪನಾ ದಿನಕ್ಕೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಶಂಕರ್ ಮಹದೇವನ್ ಮುಖ್ಯ ಅತಿಥಿಯಾಗಿದ್ದರು.
ನಾಗ್ಪುರ (ಅ.24): ದೇಶದ ಪ್ರಖ್ಯಾತ ಗಾಯಕ, ಸಂಯೋಜಕ ಶಂಕರ್ ಮಹಾದೇವನ್ ಮಂಗಳವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಾಷ್ಟ್ರಕ್ಕೆ, ಅದರ ಸಂಸ್ಕೃತಿ, ಸಂಪ್ರದಾಯಗಳು ಮತ್ತು 'ಅಖಂಡ ಭಾರತ'ದ ಸಿದ್ಧಾಂತದ ಸಂರಕ್ಷಣೆಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಪ್ರತಿ ವರ್ಷ ವಿಜಯದಶಮಿಯಂದು ಆರೆಸ್ಸೆಸ್ ತನ್ನ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತದೆ. 1925ರಲ್ಲಿ ವಿಜಯದಶಮಿಯ ದಿನದಂದೇ ಆರೆಸ್ಸೆಸ್ ಸ್ಥಾಪನೆಯಾಗಿತ್ತು. ಅದರ ನೆನಪಿಗಾಗಿ ವಿಜಯದಶಮಿಯ ದಿನ ಆರೆಸ್ಸೆಸ್ ಕೇಂದ್ರ ಕಚೇರಿ ನಾಗ್ಪರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಂಜೆಯ ವೇಳೆಗೆ ಗಣವೇಷದಲ್ಲಿ ಸ್ವಯಂಸೇವಕರ ಆಕರ್ಷಕ ರೂಟ್‌ಮಾರ್ಚ್ ನಡೆಯುತ್ತದೆ. ಈ ಬಾರಿಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಂಕರ್ ಮಹದೇವನ್, 'ಅಖಂಡ ಭಾರತದ ಬಗ್ಗೆ ನಾನೇನು ಹೇಳಲಿ? ನಾನು ನಿಮಗೆ ಮಾತ್ರ ಈ ವಿಚಾರದಲ್ಲಿ ವಂದಿಸುತ್ತೇನೆ. 'ನಮ್ಮ ಸಂಪ್ರದಾಯಗಳು, ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಆರ್ಎಸ್ಎಸ್ ಕೊಡುಗೆ ಎಲ್ಲರಿಗಿಂತ ದೊಡ್ಡದಾಗಿದೆ. ಆರೆಸ್ಸೆಸ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಹ್ವಾನ ಬಂದ ನಂತರ, ಅನೇಕ ಜನರಿಂದ ಮೆಚ್ಚುಗೆಯ ಕರೆಗಳು ಬಂದವು. ಇಂಥ ಕಾರ್ಯಕ್ರಮ್ಮೆ ಆಹ್ವಾನ ಪಡೆಯುವುದು ದೊಡ್ಡ ಗೌರವ ಎಂದಿದ್ದರು ಎಂದು ಶಂಕರ್ ಮಹದೇವ್ ತಿಳಿಸಿದ್ದಾರೆ.
ಮುಂಬೈನಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗಿನ ಭೇಟಿಯನ್ನು ಶಂಕರ್ ಮಹದೇವನ್ ನೆನಪಿಸಿಕೊಂಡರು, ಇದು ಒಂದು ಸಾರ್ಥಕ ಅನುಭವವಾಗಿತ್ತು. ಅವರ ಆತ್ಮೀಯ ಆಹ್ವಾನಕ್ಕೆ ಕೃತಜ್ಞತೆ ಸಲ್ಲಿಸಿದರು. 'ನಾನು ಅದೃಷ್ಟವಂತ. ಆಮಂತ್ರಣವು ವೈಯಕ್ತಿಕವಾಗಿತ್ತು, ತುಂಬಾ ಆತ್ಮೀಯವಾಗಿ ಸೇವೆ ಸಲ್ಲಿಸಲಾಯಿತು' ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಸಂಸ್ಥಾಪಕ ಡಾ.ಕೆ.ಬಿ.ಹೆಡಗೇವಾರ್ ಅವರ ಸ್ಮಾರಕವಾದ ಹೆಡಗೇವಾರ್ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿದ ಅವರು, ಸಂಘದ ದಸರಾ ಕಾರ್ಯಕ್ರಮ ಮತ್ತು ಅದನ್ನು ಆಯೋಜಿಸಿರುವ ರೀತಿಯನ್ನು ಅಪಾರವಾಗಿ ಶ್ಲಾಘಿಸಿದರು. ಮಹದೇವನ್ ಅವರು ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಕಾರ್ಯಗಳ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ಜನರಿಗೆ ಮನವಿ ಮಾಡಿದರು.
'ಪ್ರತಿಯೊಂದು ರಾಗಕ್ಕೂ ಸಂಗೀತದ ಧ್ವನಿಯ ಹಿನ್ನಲೆ ಇರುತ್ತದೆ. ಅದೇ ರೀತಿ ಆರ್‌ಎಸ್‌ಎಸ್, ಸಂಘ ಪರಿವಾರ ಮೌನವಾಗಿ ಭಾರತದ ಬೆನ್ನಿಗೆ ನಿಂತಿದೆ. ಭಾರತವು ಒಂದು ಗೀತೆಯಾಗಿದ್ದರೆ, ಆರ್‌ಎಸ್‌ಎಸ್ ಅದನ್ನು ಮೌನವಾಗಿ ಮತ್ತು ಬಲವಾಗಿ ಬೆಂಬಲಿಸುವ ಸರಿಗಮ ಎಂದು ಶಂಕರ್ ಮಹಾದೇವನ್ ಅವರು ಆರೆಸ್ಸೆಸ್ ಹಾಗೂ ಭಾರತದ ಮಿಳಿತವನ್ನು ಸಂಗೀತದ ಜ್ಞಾನದೊಂದಿಗೆ ಹೋಲಿಸಿದರು. ನನಗೆ ಇದೊಂದು ಜೀವಮಾನದ ಅವಕಾಶ. ಹಾಗೇನಾದರೂ ಈ ವೇದಿಕೆಯಿಂದ ನಾನೇನಾದರೂ ತಪ್ಪು ಮಾತನಾಡಿದರೆ ದಯವಿಟ್ಟು ಕ್ಷಮಿಸಿ ಎಂದು ಹೇಳಿದರು.
ತಮ್ಮ ಜನಪ್ರಿಯ ಗೀತೆಗಳ ಸಂಕ್ಷಿಪ್ತ ಸಾಲುಗಳನ್ನು ಹಾಡಿದ ಶಂಕರ್ ಮಹಾದೇವನ್ ಅವರು ಕಮರ್ಷಿಯಲ್ ಸಂಗೀತದಲ್ಲೂ ಭಾರತೀಯ ಸಂಸ್ಕೃತಿಯ ಪ್ರಭಾವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ ಬಗ್ಗೆ ಮಾತನಾಡಿದರು. 'ಮಾರ್ಚಿಂಗ್ ಬ್ಯಾಂಡ್ ಕೂಡ ವಿವಿಧ ರಾಗಗಳನ್ನು ಆಧರಿಸಿದೆ ಎಂದು ಮುಖ್ಯಸ್ಥ ಮೋಹನ್ ಭಾಗವತ್ ನನಗೆ ತಿಳಿಸಿದರು. ಮುಂದೆ ಅವಕಾಶ ಸಿಕ್ಕಾಗಲೆಲ್ಲಾ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ' ಎಂದು ಹೇಳಿದರು.
ಇಸ್ರೇಲ್ - ಹಮಾಸ್ ರೀತಿ ಭಾರತದಲ್ಲಿ ಕೋಮು ವಿಚಾರವಾಗಿ ಯುದ್ಧ ನಡೆದಿಲ್ಲ: ಮೋಹನ್ ಭಾಗವತ್
'ಪ್ರತಿಯೊಂದು ಜೀವಿಯ ಶಾಂತಿಗಾಗಿ ಪ್ರಾರ್ಥಿಸುವ ದೇಶ ನಮ್ಮದು. ಮುಂದಿನ ಪೀಳಿಗೆಗೆ ಇದರ ಬಗ್ಗೆ ಅರ್ಥಮಾಡಿಕೊಳ್ಳಬೇಕು ಮತ್ತು ಅರಿತುಕೊಳ್ಳಬೇಕು' ಎಂದು ಅವರು ಹೇಳುತ್ತಾರೆ. ಪ್ರತಿಯೊಬ್ಬ ಪ್ರಜೆಯೂ, ನನ್ನಂತಹ ಸಂಗೀತಗಾರ ಸೇರಿದಂತೆ ಯಾವುದೇ ವೃತ್ತಿಯಾಗಿರಲಿ, ದೇಶದ ಬಗ್ಗೆ ಕೆಲವು ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ನೀವು ದೇಶಕ್ಕೆ ಸ್ವಲ್ಪ ಗೌರವ ಮತ್ತು ನಿಷ್ಠೆಯನ್ನು ತೋರಿಸಬೇಕು ಮತ್ತು ನಿಮ್ಮ ಕೆಲಸದ ಮೂಲಕ ಬದಲಾವಣೆಯನ್ನು ತರಬೇಕು' ಎಂದು ಆರ್‌ಎಸ್‌ಎಸ್ ಸಭೆಯನ್ನುದ್ದೇಶಿಸಿ ಮಹದೇವನ್ ಹೇಳಿದ್ದಾರೆ.
RSS ಕಥೆಗೆ ರಾಜಮೌಳಿ ಡೈರೆಕ್ಟರ್..ಇದು ನಿಜಾನ ? ಮೌಳಿ ಚಿತ್ರದಲ್ಲಿ ದೈವ ಭಕ್ತಿ, ಧರ್ಮ ಪರಿಪಾಲನೆ..!