ಸಾವಿಗೆ ಶರಣಾಗಿರುವ ಉದ್ಯಮಿ ಸಿಜೆ ರಾಯ್ ಅವರು ಮನರಂಜನಾ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದರು. ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದರು. ಬಿಗ್ ಬಾಸ್ ಕನ್ನಡ 11ಗೆ ರೂ. 50 ಲಕ್ಷ ಹಣ ಕೊಟ್ಟಿದ್ದರು, ಸ್ಟಾರ್ ಸುವರ್ಣದ 'ಸ್ಟಾರ್ ಸಿಂಗರ್' ರಿಯಾಲಿಟಿ ಶೋದ ಪ್ರಾಯೋಜಕರಲ್ಲಿ ಕೂಡ ಒಬ್ಬರಾಗಿದ್ದರು.

ಕಾನ್ಫಿಡೆಂಟ್ ಗ್ರೂಫ್ (Confident Group) ಸಂಸ್ಥೆಯ ಚೇರ್ಮನ್ ಸಿಜೆ ರಾಯ್ (CJ Roy) ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಇದೀಗ ಎಲ್ಲಾ ಕಡೆ ವೈರಲ್ ಆಗ್ತಿದೆ. ಇದ್ದಕ್ಕಿದ್ದಂತೆ ಬಂದ ಈ ಸುದ್ದಿ ಇಡೀ ಕರ್ನಾಟಕವನ್ನು ಬೆಚ್ಚಿ ಬೀಳಿಸಿದೆ. ಅವರು ಸಾಕಷ್ಟು ದೊಡ್ಡ ಉದ್ಯಮಿಯಾಗಿದ್ದರು. ಜೊತೆಗೆ, ಕನ್ನಡ ಬಿಗ್ ಬಾಸ್ ಶೋಗೆ ರೂ. 50 ಲಕ್ಷ ಕೊಟ್ಟು ಆಗ ಸಖತ್ ಸುದ್ದಿಯಾಗಿದ್ದರು. ಅವರು ಕಾನ್ಫಿಡೆಂಟ್ ಗ್ರೂಫ್ ಸಂಸ್ಥೆಯನ್ನು ಮುನ್ನಡೆಸುವ ಜೊತೆಗೆ ಬಹಳಷ್ಟು ಸಾಮಾಜಿಕ ಕೆಲಸ ಹಾಗೂ ಸಿನಿಮಾ-ಮನರಂಜನಾ ಕ್ಷೇತ್ರಕ್ಕೆ ಕೊಡುಗೆ ಕೂಡ ನೀಡಿದ್ದಾರೆ.

ಉದ್ಯಮಿ ಸಿಜೆ ರಾಯ್ ಅವರು ಕನ್ನಡ, ಮಲಯಾಳಂ ಸೇರಿದಂತೆ ಒಟ್ಟೂ 11 ಸಿನಿಮಾಗಳ ನಿರ್ಮಾಪಕರು ಕೂಡ ಆಗಿದ್ದರು. ಕ್ಯಾಸನೋವಾ (2012), ಲೇಡಿಸ್ ಅಂಡ್ ಜೆಂಟಲ್‌ಮ್ಯಾನ್ (2013), ಮೈ ಹೂ ಮೋಸಾ (2022) ಹಾಗೂ ಐಡೆಂಟಿಟಿ (2025) ಮಲಯಾಳಂ ಸಿನಿಮಾಗಳನ್ನು ಅವರು ನಿರ್ಮಿಸಿದ್ದರು. ಕಳೆದ ಸೀಸನ್ ಅಂದರೆ, ಬಿಗ್ ಬಾಸ್ ಕನ್ನಡ 11ಗೆ ರೂ. 50 ಲಕ್ಷ ಹಣ ಕೊಟ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿದ್ದರು. ಜತೆಗೆ, ಸ್ಟಾರ್ ಸುವರ್ಣದ 'ಸ್ಟಾರ್ ಸಿಂಗರ್' ರಿಯಾಲಿಟಿ ಶೋದ ಪ್ರಾಯೋಜಕರಲ್ಲಿ ಕೂಡ ಒಬ್ಬರಾಗಿದ್ದರು.

ಅವರ ಸಂಸ್ಥೆಯ ಮೇಲೆ ಇತ್ತೀಚೆಗೆ ಪದೇಪದೇ ಐಟಿ ದಾಳಿ (IT Raid) ಆಗುತ್ತಿತ್ತು. ಈ ಕಾರಣಕ್ಕೆ ಉದ್ಯಮಿ ಸೆಜೆ ರಾಯ್ ಅವರು ಬೇಸರಪಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಲೆಗೆ ಗುಂಡಿಕ್ಕಿಕೊಂಡು ಅವರ ಆನೇಪಾಳ್ಯದ ಮನೆಯಲ್ಲಿ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆ. ಆದಾಯಕ್ಕೂ ಮೀರಿದ ಗಳಿಕೆ ಕಾರಣಕ್ಕೆ ಸಿಜೆ ರಾಯ್ ಅವರ ಮೇಲೆ ಇತ್ತೀಚೆಗೆ ಬಹಳಷ್ಟು ಬಾರಿ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು.

ಇಂದು ಕೂಡ ಅವರ ಆದಾಯಕ್ಕೆ ಮೀರಿದ ಗಳಿಕೆ ಲೆಕ್ಕಾಚಾರದಲ್ಲಿ ಐಟಿ ಇಲಾಖೆ ತಪಾಸಣೆ ನಡೆಸುತ್ತಿದ್ದಾಗ ಅವರು ಐಟಿ ದಾಳಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿ ದಾಳಿ ನಡೆಯುತ್ತಿದ್ದು, ತಪಾಸಣೆ ಹಂತದಲ್ಲಿ ಅವರು ಐಟಿ ಇಲಾಖೆಯ ಕಾರ್ಯಕ್ಕೆ ಬೇಸರಿಸಿಕೊಂಡು ಸಿಜೆ ರಾಯ್ ಅವರು ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇದೀಗ ಸಿಜೆ ರಾಯ್ ಅವರ ಸಾವಿನ ತನಿಖೆ ಪ್ರಗತಿಯಲ್ಲಿದೆ.