ಎದೆಗೆ ಗುಂಡಿಟ್ಟು ಉದ್ಯಮಿ ಸಿಜೆ ರಾಯ್ ದುರಂತ ಅಂತ್ಯ, ಸಾವಿನ ಹಿಂದೆ ಹಲವು ಅನುಮಾನ ಮೂಡಿಸಿದೆ. ಅತೀ ಶ್ರೀಮಂತ ಉದ್ಯಮಿಗೆ ಸವಾಲುಗಳು, ಆರೋಪಗಳು ಮೊದಲಲ್ಲ, ಐಟಿ ದಾಳಿಯೂ ಹೊಸದಲ್ಲ. ಆದರೆ ದಿಢೀರ್ ಗುಂಡು ಹಾರಿಸಿ ಅಂತ್ಯಕಂಡಿರುವ ಹಿಂದೆ ಅನುಮಾನ ಬಲವಾಗುತ್ತಿದೆ. 

ಬೆಂಗಳೂರು (ಸೆ.30) ಬೆಂಗಳೂರಿನ ಶ್ರೀಮಂತ ಉದ್ಯಮಿ, ದೇಶ ವಿದೇಶಗಳಲ್ಲಿ ರಿಯಲ್ ಎಸ್ಟೇಟ್ ಮೂಲಕ ಜನಪ್ರಿಯರಾಗಿರುವ ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ದುರಂತ ಅಂತ್ಯಕಂಡಿದ್ದಾರೆ. ಇಂದು ಬೆಂಗಳೂರಿನ ಲ್ಯಾಂಗ್‌ಫೋರ್ಡ್‌ನಲ್ಲಿರುವ ಕಚೇರಿಯಲ್ಲಿ ಎದೆಗೆ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳು ಕಾನ್ಫಿಡೆಂಟ್ ಗ್ರೂಪ್ ಮೇಲೆ ದಾಳಿ ಮಾಡಿದ್ದರು. ಕಾನ್ಫಿಡೆಂಟ್ ಗ್ರೂಪ್ ಕಚೇರಿಗಳು, ಸೆಜಿ ರಾಯ್ ಫಾರ್ಮ್ ಹೌಸ್ ಸೇರಿದಂತೆ ಹಲೆವೆಡೆ ದಾಳಿಯಾಗಿತ್ತು. ಇದರ ನಡುವೆ ಅಧಿಕಾರಿಗಳ ಶೋಧ ಕಾರ್ಯದ ನಡುವೆ ಕಚೇರಿಗೆ ಆಗಮಿಸಿದ ಸೆಜೆ ರಾಯ್ ವಿಚಾರಣೆ ಮಾಡಿದ್ದಾರೆ. ಕೆಲ ದಾಖಲೆ ತರಲು ಕೋಣೆಯೊಳಗೆ ಹೋದ ಸೆಜೆ ರಾಯ್ ಎದೆಗೆ ಗುಂಡು ಹಾರಿಸಿ ದುರಂತ ಅಂತ್ಯಕಂಡಿದ್ದಾರೆ.

ಒಂದು ಗಂಟೆ ವಿಚಾರಣೆ ಎದುರಿಸಿದ್ದ ಸಿಜೆ ರಾಯ್

ಸಿಜೆ ರಾಯ್ ಲ್ಯಾಂಗ್‌ಫೋರ್ಡ್‌ನಲ್ಲಿ ಐಟಿ ಅಧಿಕಾರಿಗಳ ಮುಂದೆ ಸತತ ಒಂದು ಗಂಟೆ ವಿಚಾರಣೆ ಎದುರಿಸಿದ್ದರು. ವ್ಯಾವಹಾರಗಳ ಕುರಿತು ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ಐಟಿ ಅಧಿಕಾರಿಗಳು ಕೇಳಿದ ಹಲವು ದಾಖಲೆಗಳನ್ನು ಸಿಜೆ ರಾಯ್ ನೀಡಿದ್ದಾರೆ. ಈ ವೇಳೆ ಕೆಲ ಪ್ರಶ್ನೆಗಳಿಗೆ ನೀಡಿದ್ದ ಉತ್ತರಕ್ಕೆ ಪೂರಕ ದಾಖಲೆಗಳ ಬಗ್ಗೆ ಐಟಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಈ ದಾಖಲೆ ತರುವುದಾಗಿ ಹೇಳಿ ಕೋಣೆಯೊಳಕ್ಕೆ ಹೋದ ಸೆಜೆ ರಾಯ್, ತಮ್ಮ ರಿವಾಲ್ವರ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ತಕ್ಷಣವೇ ಕಚೇರಿ ಸಿಬ್ಬಂದಿಗಳು ಸಿಜೆ ರಾಯ್ ಅವರನ್ನು HSR ಲೇಔಟ್ ನ ನಾರಾಯಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆ ತಲುಪುವ ಮುನ್ನ ಸಿಜೆ ರಾಯ್ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತೇದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ.

ಕಳೆದ ಹಲವು ದಿನಗಳಿಂದ ಐಟಿ ದಾಳಿ ನಡೆದಿತ್ತು. ದಾಳಿ ನಡೆಸಿದ ಐಟಿ ಅಧಿಕಾರಿಗಳು ಪ್ರೊಹಿಬಿಟರಿ ಆರ್ಡರ್ ಹೊರಡಿಸಲಾಗಿತ್ತು. ಹಲವು ಸವಾಲುಗಳನ್ನು ಮೆಟ್ಟಿ ನಿಂತ ಸೆಜೆ ರಾಯ್ ಇದೀಗ ಐಟಿ ದಾಳಿಗೆ ಬೆದರಿ ದುರಂತ ಅಂತ್ಯಕಂಡಿದ್ದಾರೆ. ಈ ಸಾವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದಂಡೆ ಸಿಜೆ ರಾಯ್ ಅವರ ವ್ಯವಹಾರ ಹಾಗೂ ಹಣದ ಟ್ರಾನ್ಸಾಕ್ಷನ್ ಮೇಲೆ ಹಲವು ಅನುಮಾನಗಳಿದ್ದರೆ, ಇದೇ ರೀತಿ ಆರೋಪಗಳು, ಸವಾಲುಗಳು ಹಿಂದೆಯೂ ಎದುರಿಸಿದ್ದರು. ಹೀಗಾಗಿ ಈ ಬಾರಿ ದುರಂತ ಅಂತ್ಯಕಾಣಲು ಕಾರಣವೇನು ಅನ್ನೋದು ಭಾರಿ ಚರ್ಚೆಯಾಗುತ್ತಿದೆ.

ಸಿಜೆ ರಾಯ್ ದುರಂತ ಅಂತ್ಯ ಮಾಹಿತಿ ಸಿಗುತ್ತಿದ್ದಂತೆ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ, ಅಂತಸ್ತು ಮಾಡಿರುವ ಸಿಜೆ ರಾಯ್ ದುರಂತ ಅಂತ್ಯಕಂಡಿದ್ದಾರೆ. ಕಾಫಿ ಡೇ ಮಾಲೀಕ ಸಿದ್ಧಾರ್ಥ್ ವಿಜೆ ದುರಂತ ಸಾವು ಕೂಡ ಇದೇ ವೇಳೆ ಚರ್ಚೆಯಾಗುತ್ತಿದೆ.