Asianet Suvarna News Asianet Suvarna News

ಯುಟ್ಯೂಬರ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ ಡ್ರೋನ್ ಪ್ರತಾಪ್; 30 ಲಕ್ಷ ಕೊಡಲು ಸಾಧ್ಯವೇ?

ವಿಮಾನ ನಿಲ್ದಾಣದಲ್ಲಿ ನಿಂತುಕೊಂಡು ಯುಟ್ಯೂಬರ್‌ ವಿರುದ್ಧ ಕೇಸ್‌ ಹಾಕಲು ಪತ್ರ ಬರೆದು ಡ್ರೋನ್ ಪ್ರತಾಪ್. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್...

Drone Prathap files case against youtuber tv channels for Defamation case vcs
Author
First Published Jul 27, 2023, 4:41 PM IST

ತಾನೊಬ್ಬ ಯುವ ವಿಜ್ಞಾನಿ, ಸಾಕಷ್ಟು ಡ್ರೋನ್‌ಗಳನ್ನು ತಯಾರಿಸಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು inspiration speech ಕೊಟ್ಟು ವಿದೇಶ ಪ್ರಯಾಣ ಮಾಡಿ ವಿದ್ಯಾರ್ಥಿಗಳು ಪಾಠ ಮಾಡುತ್ತಿದ್ದ ಪ್ರತಾಪ್ ಸುಳ್ಳು ಹೇಳುತ್ತಿದ್ದಾರೆ ಹಾಗೆ ಹೀಗೆ ಎಂದು ಕೆಲವು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಅದಾದ ಮೇಲೆ ಪ್ರತಾಪ್ ವೃತ್ತಿಯಲ್ಲಿ ದೊಡ್ಡ ಮಟ್ಟಕ್ಕೆ ಹಸರು ಮಾಡಿಕೊಂಡು ಮುಂದೆ ಸಾಗುತ್ತಿದ್ದರು ಕೆಲವೊಂದು ಯುಟ್ಯೂಬ್ ಚಾನೆಲ್‌ಗಳು ಸುಮ್ಮನಿರಲಿಲ್ಲ ಹೀಗಾಗಿ ಅವರ ವಿರುದ್ಧ ಕೇಸ್ ಹಾಕುವುದಾಗಿ ಲೈವ್‌ ಬಂದು ಮಾತನಾಡಿದ್ದಾರೆ. 

'ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಕೆಲವು ಮಾಧ್ಯಮಗಳು ಹಾಗೂ ಯುಟ್ಯೂಬ್ ಚಾನೆಲ್ ಮಾಲೀಕರು ಮಾಡುತ್ತಿರುವುದಕ್ಕೆ ಬೇಸರವಿದೆ. ಇವನು ಸುಳ್ಳುಗಾರ ಫ್ರಾಡ್‌ ಫೇಕ್‌ ಅಂತ ಹೇಳಿದ್ದಾರೆ. ತಾಳ್ಮೆಗೂ ಒಂದು ಮಿತಿ ಇರುತ್ತದೆ. ಒಳ್ಳೆ ಮಾಧ್ಯಮಗಳು ಮತ್ತು ಯುಟ್ಯೂಬ್ ಚಾನೆಲ್‌ಗಳಿದೆ ಅವರ ಬಗ್ಗೆ ನಾನು ಮಾತನಾಡುತ್ತಿಲ್ಲ. ಆದರೆ ನನ್ನ ಬಗ್ಗೆ ಎಷ್ಟು ಅಂತ ಹೇಳುತ್ತೀರಾ? ಆ ಚಾನೆಲ್‌ಗಳು ಲೀಗಲ್ ಆಗಿ ಆಕ್ಷನ್ ತೆಗೆದುಕೊಳ್ಳುವುದಿಲ್ಲ ನಾನು ಏನಾದರೂ ಮಾಡಲೇ ಬೇಕು ಎಂದು ಯೋಚನೆ ಮಾಡಿರುವೆ. ಬರೀ ಮಾಧ್ಯಮಗಳೇ ಮಾನಹಾನಿ ಮಾಡುವ ಕೆಲಸ ಮಾಡುತ್ತಿದ್ದಾರೆ ದೇವರಾಣೆ ಮೋಸ ಮಾಡಿ ರಾಜ್ಯ ಹಾಳು ಮಾಡುತ್ತಿರುವ ಆಡಳಿತಗಾರನ್ನು ಪ್ರಶ್ನೆ ಮಾಡುವುದಿಲ್ಲ ಚೆನ್ನಾಗಿ ಓದಿಕೊಂಡು ಸಾಧನೆ ಮಾಡಲು ಏನೋ ಮಾಡಿಕೊಂಡು ಹೋಗುತ್ತಿರುವೆ ನನ್ನ ಮಾತ್ರ ಪ್ರಶ್ನೆ ಕೇಳುವುದು ನೀವು ಆದ್ರೂ ಇವತ್ತು ಉತ್ತರ ಕೊಡುವ ಪರಿಸ್ಥಿತಿ ಬಂದಿದೆ. ಇವ್ರು ಮುಂದೆ ಹೆಜ್ಜೆ ತೆಗೆದುಕೊಳ್ಳುವುದಿಲ್ಲ ಹೀಗಾಗಿ ನಾನು ಮುಂದೆ ಹೆಜ್ಜೆ ಇಡುತ್ತಿರುವೆ' ಎಂದು ಪ್ರತಾಪ್ ಲೈವ್‌ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಕ್ಯಾನ್ಸರ್‌ಗೆ ತಾಯಿ ಕಳೆದುಕೊಂಡೆ, ಡಿಪ್ರೆಶನ್‌ಗೆ ಜಾರಿ ಮಗು ಮಾಡಿಕೊಂಡೆ: 'ಕಿನ್ನರಿ' ನಟಿ ಜ್ಯೋತಿ ರೈ ಕಣ್ಣೀರು

'ಮೊದಲು ಇವತ್ತು _____ ಹೆಸರಿನ ಯುಟ್ಯೂಬರ್ ಮೇಲೆ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತಿರುವ ಸೆಕ್ಷನ್ 409 ಮತ್ತು ಸೆಕ್ಷನ್ 500 ಅಡಿಯಲ್ಲಿ. ಈ ವ್ಯಕ್ತಿಯಿಂದ ನಮ್ಮ ಕಂಪನಿಗೆ ಆಗಿರುವ ಲಾಸ್, ಇಲ್ಲ ಸಲ್ಲದ ಆರೋಪಗಳು, ನಮ್ಮ ಲೋಗೋ ಬಳಸುವುದು, ನನ್ನ ಫೋಟೋ ಬಳಸುವುದು, ನನ್ನನ್ನು ಕೆಟ್ಟದಾಗಿ ನಿಂದಿಸಿರುವುದು ಎಲ್ಲಾ ಮಾಡಿಕೊಂಡು ಹೋಗಿದ್ದಾರೆ. ಮೂರು ಕಾನೂನುಗಳ ಪ್ರಕಾರ ನನಗೆ 30 ಲಕ್ಷ ರೂಪಾಯಿ ಹಣವನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ನಾನು ಹೇಳುತ್ತಿರುವುದು ಸುಳ್ಳಾ ಅಥವಾ ನೀವು ಹಾಕುತ್ತಿರುವುದು ಸುಳ್ಳ ಅನ್ನೋದು ಕೋರ್ಟ್‌ ನಿರ್ಧರಿಸುತ್ತದೆ. ನನ್ನ ಬಗ್ಗೆ ಯಾರು ಏನೇ ಮಾತನಾಡಿದರೂ ವೈಯಕ್ತಿಕ ದ್ವೇಷ ಇಲ್ಲ ಆದರೆ ನನ್ನ ಸಂಸ್ಥೆಗೆ ಅವಮಾನವಾಗುತ್ತಿದೆ' ಎಂದು ಪ್ರತಾಪ್ ಹೇಳಿದ್ದಾರೆ. 

ಮೇಕಪ್‌ ಒಂದೇ ಜೀವನವಲ್ಲ; ಬಣ್ಣ ತಾರತಮ್ಯ ಮಾಡಿದವರಿಗೆ ಕ್ಲಾಸ್‌ ತೆಗೆದುಕೊಂಡ ಟಿಕ್‌ಟಾಕ್ ಧನುಶ್ರೀ!

'ತುಂಬಾ ದಿನಗಳಿಂದೆ ತಾಳ್ಮೆಯಿಂದ ಹೇಳಿಕೊಂಡು ಬರುತ್ತಿದ್ದೆ ಆದರೆ ಮುಂದೆ ಸುಮ್ಮನಿರಲು ಅಗಲ್ಲ. ರೈತರಿಗೆ ಸುಲಭವಾಗಬೇಕು ಎಂದು ಕೃಷಿಯಲ್ಲಿ ಕೆಲಸ ಮಾಡಲು ನನ್ನ ಡ್ರೋನ್ ಕೊಡುತ್ತಿರುವೆ ನೀವು ಅದನ್ನು ತಪ್ಪು ಎಂದು ಹೇಳಿ ಅದನ್ನೂ ಟ್ರೋಲ್ ಮಾಡುತ್ತಿದ್ದಿರಿ.  ರಾಜಕೀಯದವರಿಗೆ ಸಪೋರ್ಟ್ ಮಾಡಿ ಹಳ್ಳಿ ಹುಡುಗನನ್ನು ಅವಮಾನಿಸುತ್ತಿದ್ದೀರಿ. ಮುಂಬರುವ ದಿನಗಳಲ್ಲಿ ಮೂರ್ನಾಲ್ಕು ದಿನಗಳಲ್ಲಿ ನಾಲ್ಕು ಜನರಿಗೆ ನೋಟಿಸ್ ಹೋಗುತ್ತಿದೆ ನಿಮ್ಮ ಸಪೋರ್ಟ್‌ ಬೇಕು ನನಗೆ' ಎಂದಿದ್ದಾರೆ ಪ್ರತಾಪ್.

 

 
 
 
 
 
 
 
 
 
 
 
 
 
 
 

A post shared by Prathap N M (@droneprathap)

Follow Us:
Download App:
  • android
  • ios