ಬಾರ್ಬಿ ಡಾಲ್ ರೀತಿ ಮೇಕಪ್ ಮಾಡಿಕೊಂಡ ಧನುಶ್ರೀ. ನೆಗೆಟಿವ್ ಕಾಮೆಂಟ್ ಮಾಡುವವರಿಗೆ ಉತ್ತರ ಕೊಟ್ಟ ಸುಂದರಿ...
ಸೋಷಿಯಲ್ ಮೀಡಿಯಾ Influencer ಧನುಶ್ರೀ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ಕೆಲವು ದಿನಗಳಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಮೇಕಪ್ ಜಾಸ್ತಿ ಮಾಡಿಕೊಳ್ಳುತ್ತಾರೆ, ದುಡ್ಡು ಖರ್ಚು ಮಾಡುತ್ತಾರೆ, ಎಲ್ಲಂದ್ರೆ ಅಲ್ಲಿ ರೀಲ್ಸ್ ಮಾಡುತ್ತಾರೆ, ಫ್ಯಾಮಿಲಿಯಲ್ಲಿ ಹೇಳೋರು ಕೇಳೋರು ಯಾರೂ ಇಲ್ವಾ ಅಂತೆಲ್ಲಾ ಕಾಮೆಂಟ್ ಬರುತ್ತಿದೆ. ಇದೆಲ್ಲಾ ಓಕೆ ಆದರೆ ಕೆಲವರು ಬಣ್ಣ ತಾರತಮ್ಯ ಮಾಡಿದ್ದಾರೆ. ಇದಕ್ಕೆ ಬೇಸರಗೊಂಡ ಸುಂದರೆ ಉತ್ತರ ಕೊಟ್ಟಿದ್ದಾರೆ.
'ನಾನೊಂದು ಸತ್ಯ ಅರ್ಥ ಮಾಡಿಕೊಂಡಿರುವೆ...ಪ್ರತಿಯೊಬ್ಬರು ನೋಡಲು ವಿಭಿನ್ನವಾಗಿರುತ್ತಾರೆ ಬೇರೆ ಬೇರೆ ಬಣ್ಣದಲ್ಲಿರುತ್ತಾರೆ. ಹಾಗೇ ನನಗೆ ಮುಖ ಬಣ್ಣ ಬೇರೆ ಇದ್ದರೆ ಕೈ-ಕಾಲುಗಳ ಬಣ್ಣ ಬೇರೆ ಇದೆ. ನನ್ನ ಕೈ ಇರುವ ಬಣ್ಣಕ್ಕೆ ಹೊಂದುವಂತ ಕ್ರೀಮ್‌ನ ನನ್ನ ಮುಖಕ್ಕೆ ಬಳಸಲು ಆಗಲ್ಲ ಹಾಗೆ ನನ್ನ ಮುಖಕ್ಕೆ ಹಚ್ಚಿಕೊಳ್ಳುವುದನ್ನು ಕೈ ಗಳಿಗೆ ಬಳಸಲು ಆಗಲ್ಲ. ಈ ವಿಚಾರವಾಗಿ ನನಗೆ ಸಾಕಷ್ಟು ನೆಗೆಟಿವ್ ಕಾಮೆಂಟ್ ಮತ್ತು ಮೆಸೇಜ್‌ಗಳು ಬರುತ್ತದೆ. ಹಾಗಂತ ಈ ರೀತಿ ಅವಮಾನಗಳನ್ನು ಎದುರಿಸುತ್ತಿರುವುದು ನಾನು ಒಬ್ಬಳೆ ಅಲ್ಲ. ನಿಮ್ಮನ್ನು ನೀವು ಒಮ್ಮೆ ನೋಡಿಕೊಂಡರೆ ನಿಮ್ಮ ದೇಹದ ಅದೆಷ್ಟೋ ಬಾಡಿ ಪಾರ್ಟ್‌ಗಳ ಬಣ್ಣವೇ ನಿಮ್ಮ ಇನ್ನಿತ್ತರ ಭಾಗಕ್ಕೆ ಮ್ಯಾಚ್ ಆಗುವುದಿಲ್ಲ. ಇದರಿಂದ ನಿಂದನೆ ಎದುರಿಸುವ ಅಗತ್ಯವಿಲ್ಲ ಅಥವಾ ನಮ್ಮನ್ನು ನಾವೇ ಕೀಳಾಗಿ ನೋಡುವ ಅಗತ್ಯವಿಲ್ಲ ದೇವ ಸೃಷ್ಟಿನೇ ಹಾಗಿದೆ' ಎಂದು ಧನುಶ್ರೀ ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.
ನಮ್ಮಿಬ್ಬರ ಮಧ್ಯೆ ಏನೋ ಇದೆ ಅಂದುಕೊಳ್ತಾರೆ ಆದರೆ ನಾವು ಸ್ನೇಹಿತರಷ್ಟೆ; ಧನಂಜಯ್ ಬಗ್ಗೆ ಅಮೃತಾ ಸ್ಪಷ್ಟನೆ!
'ಯಾರು ಏನು ಅನ್ನುತ್ತಾರೆ ಹೇಗೆ ಕಾಮೆಂಟ್ ಮಾಡುತ್ತಾರೆ ಅಂತ ಯೋಜನೆ ಮಾಡಿನೇ ನನ್ನ ಅರ್ಧ ಜೀವನ ಕಳೆದಿರುವೆ ಯೋಜನೆ ಮಾಡಿದ್ದೀನಿ ಅಷ್ಟೆ ಅಂದುಕೊಳ್ಳಬೇಡಿ..ಜನರು ಹಾಗೆ ನಡೆದುಕೊಂಡಿದ್ದಾರೆ. ಇರಲಿ ಜನರು ಏನೇ ಮಾತನಾಡಲಿ ಕಾಮೆಂಟ್ ಮಾಡಲಿ ನಿಮಗೆ ಏನು ಇಷ್ಟ ಅದೇ ಮಾಡಬೇಕು. ನನ್ನ ಮನಸ್ಸು ಏನು ಹೇಳುತ್ತದೆ ಅದನ್ನು ಮಾಡಬೇಕು. ಈ ಭೂಮಿ ಮೇಲೆ ಯಾರೂ ಪರ್ಫೆಕ್ಟ್ ಆಗಿಲ್ಲ ನಮಗಿಂತ ಸ್ಟ್ರಾಂಗ್ ಮತ್ತು ಬ್ಯೂಟಿಫುಲ್ ಆಗಿ ಯಾರೂ ಇಲ್ಲ. ನನಗೆ ಮೇಕಪ್ ಅಂದ್ರೆ ತುಂಬಾನೇ ಇಷ್ಟ. ನನಗೆ ಮೇಕಪ್ ಇಷ್ಟ ಅದಿಕ್ಕೆ ಮಾಡಿಕೊಳ್ಳುವೆ ಅಲ್ಲದೆ ನನ್ನ ಆತ್ಮಸ್ಥೈರ್ಯ ಹೆಚ್ಚಿಸುತ್ತದೆ. ಒಂದು ವಿಚಾರ ನನ್ನ ಆತ್ಮಸ್ಥೈರ್ಯ ಹೆಚ್ಚುತ್ತಿರುವಾಗ ನಾನು ಯಾಕೆ ಅಷ್ಟೊಂದು ಯೋಚನೆ ಮಾಡಿ ಸುಮ್ಮನಿರಬೇಕು ಖುಷಿಯಿಂದ ಮಾಡುವೆ' ಎಂದು ಹೇಳಿದ್ದಾರೆ ಧನುಶ್ರೀ.
ತಿಂಗಳಲ್ಲಿ 20 ರಿಂದ 30 ಸಾವಿರ ಬೇಕು:
ಸೋಷಿಯಲ್ ಮೀಡಿಯಾದಲ್ಲಿ ನಾನು ಏನು ಕೆಲಸ ಮಾಡುತ್ತಿರುವೆ ನಾನು ಖುಷಿಯಾಗಿ ಮಾಡುತ್ತಿರುವೆ ಎಲ್ಲರೂ 8 ಗಂಟೆ ಕೆಲಸ ಮಾಡಬಹುದು ನಾನು 24 ಗಂಟೆ ಕೆಲಸ ಮಾಡಿದರೂ ಮಾಡುವ ಕೆಲಸದಲ್ಲಿ ಖುಷಿ ಇದೆ. ನಾನು ಇಷ್ಟ ಪಟ್ಟು ಕೆಲಸ ಮಾಡುತ್ತಿರುವೆ. ಫೈನ್ಯಾನ್ಸ್ ಸಂಸ್ಥೆಯಲ್ಲಿ ಈ ಹಿಂದೆ ನಾನು ಕೆಲಸ ಮಾಡಿರುವೆ ದಿನ ಎದ್ದು ಕೆಲಸಕ್ಕೆ ಹೋಗಬೇಕು ಎದ್ದೇಳಬೇಕು ಅನ್ನೋದೇ ಹಿಂಸೆ ಆಗ ನಾನು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದೆ ಆದರೆ ಈಗ ಖುಷಿಯಿಂದ ಕೆಲಸ ಮಾಡುತ್ತಿರುವೆ' ಎಂದು ಖಾಸಗಿ ಯೂಟ್ಯೂಬ್ ಸಂದರ್ಶನದಲ್ಲಿ ಧನುಶ್ರೀ ಮಾತನಾಡಿದ್ದಾರೆ.
ನಕಲಿ ಕಣ್ರೆಪ್ಪೆ ಹಾಕಿಸಿಕೊಂಡ ಬಿಗ್ ಬಾಸ್ ಧನುಶ್ರೀ; ಯಾಕಿಷ್ಟೊಂದು ಶೋಕಿ ಎಂದು ಕಾಲೆಳೆದ ನೆಟ್ಟಿಗರು
'ಸಂಜೆ ಜಿಮ್ ಅಥವಾ ಶಾಪಿಂಗ್ ಮಾಡುವೆ ,Influencer ಜೀವನ ಹೇಗೆ ಅಂದ್ರೆ ನಾವು ಒಳ್ಳೆ ಬಟ್ಟೆ ಧರಿಸಬೇಕು ನಮ್ಮನ್ನು ನಾವು ನೀಟ್ ಆಗಿ ಕ್ಯಾರಿ ಮಾಡಬೇಕು ಜನ ನಮ್ಮನ್ನು ನೋಡಿ ಫಾಲೋ ಮಾಡುತ್ತಾರೆ. ನಾನೇ ಅದೆಷ್ಟೋ ಜನರನ್ನು ಫಾಲೋ ಮಾಡುವೆ. ನಾನು ತಿಂಗಳಲ್ಲಿ ಮಾಡುವ ಸಂಪಾದನೆ ಇದಕ್ಕೆ ಅಂತ ಇಡಬೇಕು. ಒಂದೊಂದು ತಿಂಗಳು ಒಂದೊಂದು ರೀತಿ ಆದಾಯ ಇರುತ್ತದೆ ಆದರೆ ನನ್ನ ಲೈಫ್ ಸ್ಟೈಲ್‌ಗೆಂದು 20-30 ಸಾವಿರ ಹಣ ಬೇಕಾಗುತ್ತದೆ. ಇದೆಲ್ಲಾ ಬಿಟ್ಟು ಮನೆ ಖರ್ಚು ಹೆಚ್ಚಿಗೆ ಇರುತ್ತದೆ. ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದರು ಅದನ್ನು ಬಿಡಿಸಿ ಮನೆ ಖರ್ಚು, ಮನೆ ಲೋನ್ ನನ್ನ ಲೋನ್ ತುಂಬಾ ಇದೆ ಅದೆಲ್ಲಾ ನೋಡಿಕೊಳ್ಳಬೇಕು' ಎಂದು ಧನುಶ್ರೀ ಹೇಳಿದ್ದಾರೆ.
