ಸಿಟ್ಟುಗೊಂಡಿರೋ ಪತ್ನಿಯ ಸಿಟ್ಟು ಇಳಿಸೋದು ಹೇಗೆ? ಈ ನಟನಿಗೆ ನೀವೇನಾದ್ರೂ ಐಡಿಯಾ ಕೊಡಲು ರೆಡಿನಾ? ಹಾಗಿದ್ರೆ ಈ ಚಾಲೆಂಜ್​ ತೆಗೆದುಕೊಳ್ಳಿ... 

ದೃಷ್ಟಿ ಎಂದರೆ ಸಾಕು... ಸೀರಿಯಲ್​ ಪ್ರಿಯರಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ದೃಷ್ಟಿಬೊಟ್ಟು ನಾಯಕಿ ಕಣ್ಮುಂದೆ ಬರುತ್ತಾಳೆ. ಒಮ್ಮೊಮ್ಮೆ ತೀರಾ ಕಪ್ಪು ಬಣ್ಣ ಬಳಿದುಕೊಂಡು ಕಾಣಿಸಿಕೊಳ್ಳುವ ನಾಯಕಿ ಈಕೆ. ಸದ್ಯ ತನ್ನ ಗಂಡನ ಅಕ್ಕನಿಂದ ಕಿರುಕುಳ ಅನುಭವಿಸುತ್ತಾ, ಅಕ್ಕನ ಮಾತನ್ನೇ ಕೇಳಿಕೊಂಡಿರೋ ತಮ್ಮ ಅರ್ಥಾತ್​ ಪತಿಯಿಂದಲೂ ನಿಂದನೆಗೆ ಒಳಗಾಗ್ತಿದ್ದವಳು ದೃಷ್ಟಿ. ಆದರೆ, ಅದೇ ದೃಷ್ಟಿ ಮತ್ತು ದತ್ತಾ ನಡುವೆ ಈಗ ಪ್ರೀತಿ ಹುಟ್ಟುತ್ತಿದೆ. ದತ್ತಾ ಪ್ರೀತಿಸಿದ್ದ ದೃಷ್ಟಿಯ ಅಕ್ಕ ಓಡಿಹೋಗಿದ್ದಳು. ಅವಳೀಗ ಸಿಕ್ಕಿದ್ದಾಳೆ. ಆದರೆ ಅವಳೇ ದತ್ತನ ಲವರ್​ ಎನ್ನುವ ವಿಷಯ ದೃಷ್ಟಿಗೆ ಗೊತ್ತಿರಲಿಲ್ಲ. ಅದು ಕೂಡ ಈಗ ಗೊತ್ತಾಗಿದೆ.

ಇನ್ನು ದತ್ತಾ ಕಣ್ಣಿಗೆ ದೃಷ್ಟಿ ಅಕ್ಕ ಬಿದ್ದಿರಲಿಲ್ಲದ ಹಿನ್ನೆಲೆಯಲ್ಲಿ ಶರಾವತಿ ಅಸ್ತ್ರವಾಗಿಸಿಕೊಂಡು ಏನೋ ದೊಡ್ಡ ಪ್ಲ್ಯಾನ್​ ಮಾಡಿ ದತ್ತಾ ಮತ್ತು ದೃಷ್ಟಿಯನ್ನು ಹನಿಮೂನ್​ಗೆ ಕಳಿಸಿದ್ದಳು. ತಾನು ಎಷ್ಟೇ ಕಿರುಕುಳ ಕೊಟ್ಟರೂ ದೃಷ್ಟಿ ಪ್ರೀತಿಸುವುದನ್ನು ನೋಡಿ ದತ್ತಾಗೆ ದೃಷ್ಟಿಯ ಮೇಲೆ ಪ್ರೀತಿ ಹುಟ್ಟುತ್ತಿದೆ. ಆದರೆ ಆ ಪ್ರೀತಿಯನ್ನು ಹೇಳಿಕೊಳ್ಳಲು ಪರದಾಡುತ್ತಿದ್ದಾನೆ ದತ್ತಾ. ಎಷ್ಟೋ ವೇಳೆ ಹಲವರಿಗೆ ಹೀಗೆಯೇ ಆಗುವುದು ಉಂಟು. ಮೊದಲ ಬಾರಿ ಲವ್​ ಶುರುವಾದಾಗ, ಅದನ್ನು ಹೇಳಿಕೊಳ್ಳುವುದು ಹೇಗೆ, ಆರಂಭಿಸುವುದು ಹೇಗೆ ಎಂದು ಗೊತ್ತಾಗದೇ ಪೇಚಾಡುವುದು ಇದೆ. ಆದರೆ ಸೀರಿಯಲ್​ಗಳಲ್ಲಿ ಕೆಲ ವರ್ಷಗಳಿಂದ ವಿಚಿತ್ರ ಟ್ರೆಂಡ್​ ಶುರುವಾಗಿದೆ. ಅದೇನೆಂದರೆ ಮದ್ವೆಯಾದರೂ ಪತಿ-ಪತ್ನಿ ದೂರ ಇರುವುದು. ಬಹುತೇಕ ಸೀರಿಯಲ್​ಗಳಲ್ಲಿ ಇದೇ ಹಣೆಬರಹ. ದೃಷ್ಟಿಬೊಟ್ಟುವಿನಲ್ಲಿಯೂ ಇದೇ ಕಥೆ. ಆದರೆ ಇದೀಗ ಲವರ್​ಗೆ ಅಲ್ಲ, ಬದಲಿಗೆ ಪತ್ನಿಗೆ ಐ ಲವ್​ ಯು ಹೇಳಲು ಆಗದೇ ಒದ್ದಾಡ್ತಿದ್ದಾನೆ ದತ್ತಾ.

ದೃಷ್ಟಿಗೆ ತನ್ನ ಪ್ರೀತಿಯನ್ನು ಹೇಗೆ ನಿವೇದನೆ ಮಾಡಿಕೊಳ್ಳಬೇಕು ಎಂದು ಎಲ್ಲರ ಬಳಿ ಟಿಪ್ಸ್​ ಕೇಳ್ತಿದ್ದಾನೆ. ಇದನ್ನು ಕಲರ್ಸ್​ ಕನ್ನಡ ವಾಹಿನಿ ಶೇರ್​ ಮಾಡಿಕೊಂಡಿದ್ದು, ನೀವೇನಾದ್ರೂ ಟ್ರೈ ಮಾಡ್ತೀರಾ ಎಂದು ಕೇಳಿದೆ. ಸಿಟ್ಟು ಮಾಡಿಕೊಂಡೋ ಗರ್ಲ್​ಫ್ರೆಂಡ್​ ಸಿಟ್ಟು ಇಳಿಸೋದು ಹೇಗೆ ಟಿಪ್ಸ್ ಕೊಡಿ ಎಂದು ಕೇಳಲಾಗಿದೆ. ಆದರೆ ಇಲ್ಲಿ ಗರ್ಲ್​ಫ್ರೆಂಡ್ ಅಲ್ಲ, ಬದಲಿಗೆ ಪತ್ನಿ ಅಷ್ಟೇ. ನಿಮ್ಮ ಸಜೆಷನ್​ ಇದ್ರೆ ಕೊಡ್ಬೋದು! ಅಂದಹಾಗೆ ಇದು ಸೀರಿಯಲ್​ ಅಷ್ಟೇ. 

ಅಷ್ಟಕ್ಕೂ ದತ್ತ ಪಾತ್ರಧಾರಿ ನಟ ವಿಜಯ್ ಸೂರ್ಯ ಅವರಿಗೆ ಇದಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದಾರೆ. ಚಾಕಲೇಟ್‌ ಬಾಯ್‌ ಎಂದೇ ಫೇಮಸ್‌ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಅಂದಹಾಗೆ ವಿಜಯ್‌ಸೂರ್ಯ ಅವರಿಗೆ ಸಕತ್‌ ಹಿಟ್‌ ಕೊಟ್ಟಿದ್ದು ‘ಅಗ್ನಿಸಾಕ್ಷಿ’ ಸೀರಿಯಲ್‌. ಆರು ವರ್ಷಗಳಿಗೂ ಅಧಿಕ ಕಾಲ ಈ ಸೀರಿಯಲ್‌ ಪ್ರಸಾರ ಆಗಿತ್ತು. ಬಳಿಕ ನಟ ದಿನ ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡಿದ್ದರು. ಆಮೇಲೆ ‘ಪ್ರೇಮಲೋಕ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಧಾರಾವಾಹಿಗಳ ಜೊತೆಗೆ ಅವರು ಸಿನಿಮಾ ಕೂಡ ಮಾಡುತ್ತಿದ್ದಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಹಲವಾರು ನಟ-ನಟಿಯರು ಸ್ಟಾರ್‌ಗಳಾಗಿ ಮೆರೆಯುತ್ತಿದ್ದಾರೆ. ಕೆಲವರಿಗೆ ಅದೃಷ್ಟ ಒಲಿಯುವುದಿಲ್ಲ. ಹಾಗೆಯೇ ವಿಜಯ್ ಅವರು ಬೆಳ್ಳಿತೆರೆಗೆ ಕಾಲಿಟ್ಟರೂ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ.