Asianet Suvarna News Asianet Suvarna News

Vir Das ವಿರುದ್ಧ ಹಿಂದೂ ಜನಜಾಗೃತಿ ಸಮಿತಿ ದೂರು: ಬೆಂಗಳೂರಿನ ಕಾರ್ಯಕ್ರಮ ರದ್ದು ಮಾಡಲು ಆಗ್ರಹ

ಗೋವಾ ಮೂಲದ ಹಿಂದೂ ಜನಜಾಗೃತಿ ಸಮಿತಿ ಸೋಮವಾರ ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸರಿಗೆ ದೂರು ನೀಡಿದ್ದು, ವೀರ್‌ ದಾಸ್‌ ಅವರ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

comedian vir das lands in trouble again hindu janajagruti samiti files police complaint against his bengaluru show ash
Author
First Published Nov 8, 2022, 6:49 PM IST

ಕಾಮಿಡಿಯನ್‌ (Comedian) ವೀರ್‌ ದಾಸ್‌ (Vir Das) ‘’ಐ ಕಮ್‌ ಫ್ರಮ್‌ 2 ಇಂಡಿಯಾಸ್‌’’ (I Come from Two Indias) ಎನ್ನುವ ವಿವಾದಾತ್ಮಕ ವಿಡಿಯೋ ಕ್ಲಿಪ್‌ ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಅಂತಾರಾಷ್ಟ್ರೀಯ (International) ಮಟ್ಟದಲ್ಲಿ ಇಂತಹ ವಿಚಾರಗಳನ್ನು ಹೇಳಿದ್ದಕ್ಕೆ ಹಲವರು ಇವರನ್ನು ಹೊಗಳಿದರೆ, ಇನ್ನು ಹಲವರು ಭಾರತವನ್ನು (India) ಕೆಟ್ಟ ರೀತಿಯಲ್ಲಿ ತೋರಿಸುತ್ತಿರುವುದಕ್ಕೆ ಟೀಕೆ ಮಾಡುತ್ತಿರುತ್ತಾರೆ. ತನ್ನ ಕಮೆಂಟ್‌ಗಳಿಂದಾಗಿ ವೀರ್‌ ದಾಸ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಭಾರತದಲ್ಲಿ ಅವರ ಮುಂಬರುವ ಕಾರ್ಯಕ್ರಮ ಹಿನ್ನೆಲೆ ಕಾಮಿಡಿಯನ್‌ ವಿರುದ್ಧ ಮತ್ತೆ ದೂರು ಕೇಳಿಬಂದಿದೆ. ಹಿಂದೂ ಜನಜಾಗೃತಿ ಸಮಿತಿ (Hindu Janajagruthi Samithi) ವೀರ್‌ ದಾಸ್‌ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ನವೆಂಬರ್ 10 ರಲ್ಲಿ ಬೆಂಗಳೂರಲ್ಲಿ ನಡೆಯುತ್ತಿರುವ ಕಾರ್ಯಕ್ರಮ ರದ್ದುಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ. 

ಗೋವಾ (Goa) ಮೂಲದ ಹಿಂದೂ ಜನಜಾಗೃತಿ ಸಮಿತಿ ಸೋಮವಾರ ಬೆಂಗಳೂರಿನ ವೈಯಾಲಿಕಾವಲ್‌ ಪೊಲೀಸರಿಗೆ ದೂರು ನೀಡಿದ್ದು, ವೀರ್‌ ದಾಸ್‌ ಅವರ ಕಾರ್ಯಕ್ರಮ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ವೀರ್‌ ದಾಸ್‌ ಹಿಂದೂಗಳ (Hindu) ಭಾವನೆಗೆ ಧಕ್ಕೆ ತಂದಿದ್ದಾರೆ ಹಾಗೂ ಭಾರತವನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಇವರು ಕಳೆದ ವರ್ಷ ನವೆಂಬರ್‌ನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಕರ್ಯಕ್ರಮದಲ್ಲಿ ಭಾರತೀಯ ಮಹಿಳೆಯರು, ಪ್ರಧಾನಿ ಮೋದಿ ಹಾಗೂ ಭಾರತವನ್ನು ಅವಹೇಳನ ಮಾಡಿದ್ದರು ಎಂದು  ಸಂಘಟನೆಯ ವಕ್ತಾರ ಮೋಹನ್‌ ಗೌಡ ದೂರು ನೀಡಿದ್ದಾರೆ. 
 

ಇದನ್ನು ಓದಿ: BBK9 ನಾನು ಗಡಿನಾಡ ಕನ್ನಡಿಗ ಎಂದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ, ದೂರು ದಾಖಲು


ಈ ಹಿನ್ನೆಲೆ, ಬೆಂಗಳೂರಿನಂತಹ ಕೋಮು ಸೂಕ್ಷ್ಮ ಪ್ರದೇಶದಲ್ಲಿ ಅಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಸರಿಯಲ್ಲ. ತಕ್ಷಣವೇ ಈ ಕಾರ್ಯಕ್ರಮವನ್ನು ರದ್ದು ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸಹ ಈ ದೂರಿನಲ್ಲಿ ಹೇಳಲಾಗಿದೆ. 

ವೀರ್‌ ದಾಸ್‌ ಈ ವಿವಾದಾತ್ಮಕ ವಿಡಿಯೋ ಕ್ಲಿಪ್‌ಗಾಗಿ ತೊಂದರೆಗೀಡಾಗಿರುವುದು ಇದೇ ಮೊದಲಲ್ಲ.  2021ರಲ್ಲಿ ತಿಲಕ್‌ ಮಾರ್ಗ್‌ ಪೊಲೀಸರು ನಟ ಹಾಗೂ ಕಾಮಿಡಿಯನ್‌ ವಿರುದ್ಧ ಇದೇ ವಿಡಿಯೋ ಕಾರಣಕ್ಕಾಗಿ ದೂರು ದಾಖಲಿಸಿದ್ದರು. ಭಾರತದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಲಾಗಿದೆ ಎಂದು ಅವರ ವಿರುದ್ಧ ದೂರು ದಾಖಲಾಗಿತ್ತು. 

ಇದನ್ನೂ ಓದಿ: ಪೊಲೀಸರು ಅಲರ್ಟ್ ಆಗಿದ್ದಾರಾ ಅಂತ ಚೆಕ್‌ ಮಾಡೋಕೆ ಮಹಿಳಾ ಎಸ್‌ಪಿ ಮಾಡಿದ ಪ್ಲ್ಯಾನ್‌ ವೈರಲ್..!
 
ಈ ಮಧ್ಯೆ, ವೀರ್‌ ದಾಸ್‌ ಸದ್ಯ ತನ್ನ ವಾಂಟೆಡ್‌ ಎಂಬ ವಿಶ್ವ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ನವೆಂಬರ್‌ 10 ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದ ಮೂಲಕ ಭಾರತದಲ್ಲಿ ಈ ವಾಂಟೆಡ್‌ ಟೂರ್‌ ಆರಂಭವಾಗುತ್ತದೆ. ಬೆಂಗಳೂರು ಮಾತ್ರವಲ್ಲದೆ, ಕೋಲ್ಕತ್ತ, ಚೆನ್ನೈ, ಪುಣೆ, ಮುಂಬೈ, ಹೈದರಾಬಾದ್‌. ಲುಧಿಯಾನಾ ಹಾಗೂ ಚಂಡೀಗಢದಲ್ಲಿ ನಡೆಯಲಿದೆ. 

ಭಾರತದ ನಂತರ ಆಸ್ಟ್ರೇಲಿಯಾ ಹಾಗೂ ಅಮೆರಿಕದಲ್ಲಿ 2 ಶೋಗಳನ್ನು ಕಾಮಿಡಿಯನ್‌ ವೀರ್‌ ದಾಸ್‌ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಹಿಂದೂ ಭಾವನೆಗಳಿಗೆ ಧಕ್ಕೆ; ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ವಿರುದ್ಧ ಪ್ರಕರಣ ದಾಖಲು

Follow Us:
Download App:
  • android
  • ios