ಉತ್ತರ ಪ್ರದೇಶದ ಔರಯಾದ ಮಹಿಳಾ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಚಾರು ನಿಗಮ್, ಎಮರ್ಜೆನ್ಸಿ ಸಹಾಯವಾಣಿ 112ಗೆ ಕರೆ ಮಾಡಿ, ಶಸ್ತ್ರಾಸ್ತ್ರ ಹೊಂದಿರುವ ಕಳ್ಳರು ದರೋಡೆ ಮಾಡುತ್ತಿರುವ ಬಗ್ಗೆ ಸುಳ್ಳು ದೂರು ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಪೊಲೀಸರು (Police) ದೂರು ಕೊಟ್ರೂ ತುಂಬಾ ತಡವಾಗಿ ಬರುತ್ತಾರೆ, ಸರಿಯಾಗಿ ತನಿಖೆ (Investigation) ಮಾಡೋದೆ ಇಲ್ಲ ಅನ್ನೋದು ಹಲವರ ಸಾಮಾನ್ಯ ದೂರು. ಅಲ್ಲದೆ, ಪೊಲೀಸರ ಸಹಾಯವಾಣಿಗೆ (Helpline) ಕರೆ ಮಾಡಿದ್ರೂ ಸರಿಯಾಗಿ ಉತ್ತರ ನೀಡಲ್ಲ, ಕಾಲ್‌ ರಿಸೀವ್‌ (Call Receive) ಮಾಡಲ್ಲ ಹಾಗೂ ಸರಿಯಾಗಿ ರೆಸ್ಪಾನ್ಸ್‌ (Response) ಮಾಡಲ್ಲ ಎಂದೂ ಹಲವರು ದೂರುತ್ತಾರೆ. ಈ ಹಿನ್ನೆಲೆ ಇತ್ತೀಚೆಗೆ ಉತ್ತರ ಪ್ರದೇಶದ (Uttar Pradesh) ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಸ್ಥಳೀಯ ಪೊಲೀಸರನ್ನು ಅಚ್ಚರಿಗೊಳಗಾಗುವಂತೆ ಮಾಡಿದ್ದಾರೆ. ನಮ್ಮ ಪೊಲೀಸರು ಎಮರ್ಜೆನ್ಸಿ ಸಹಾಯವಾಣಿಗೆ (Emergency Helpline) ಕರೆ ಮಾಡಿದರೆ ಎಷ್ಟು ವೇಗವಾಗಿ ರೆಸ್ಪಾಂಡ್‌ ಮಾಡುತ್ತಾರೆ ಅಂತ ಮಹಿಳಾ ಎಸ್‌ಪಿ (Superintendent of Police) ಪರೀಕ್ಷೆ ಮಾಡಿದ್ದಾರೆ. ಇನ್ನು, ಈ ಸರ್ಪೈಸ್‌ ಪರೀಕ್ಷೆಗೆ ಪೊಲೀಸರು ಪ್ರತಿಕ್ರಿಯೆ ನೀಡಿರುವ ರೀತಿ ಹೇಗಿದೆ ಗೊತ್ತಾ..? ಮುಂದೆ ಓದಿ..

ಉತ್ತರ ಪ್ರದೇಶದ ಔರಯಾದ ಮಹಿಳಾ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಚಾರು ನಿಗಮ್, ಎಮರ್ಜೆನ್ಸಿ ಸಹಾಯವಾಣಿ 112ಗೆ ಕರೆ ಮಾಡಿ, ಶಸ್ತ್ರಾಸ್ತ್ರ ಹೊಂದಿರುವ ಕಳ್ಳರು ದರೋಡೆ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದಾರೆ. ಈ ಕರೆಗೆ ಪೊಲೀಸರು ಎಷ್ಟು ವೇಗವಾಗಿ ಪ್ರತಿಕ್ರಿಯೆ ನೀಡ್ತಾರೆ ಅನ್ನೋದನ್ನು ಪರೀಕ್ಷಿಸೋಕೆ ಮಹಿಳಾ ಅಧಿಕಾರಿ ಮಾಡಿದ ನಕಲಿ ಕರೆ ಇದು. ಪೊಲೀಸರು ಈ ಸರ್ಪೈಸ್‌ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೂ, ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಇದನ್ನು ಓದಿ: ಸೆಕ್ಸ್‌ಗಾಗಿ ದಿನವಿಡೀ ಗಂಡನ ಕಾಟ, ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಹಾಯ ಕೋರಿದ ವೃದ್ಧೆ

ಔರಯಾ ಪೊಲೀಸ್‌ ಟ್ವಿಟ್ಟರ್‌ನಲ್ಲಿ ಈ ಘಟನೆಯನ್ನು ಪೋಸ್ಟ್‌ ಮಾಡಿದೆ. ಈ ವಿಡಿಯೋದಲ್ಲಿ ಎಸ್‌ಪಿ ಚಾರು ನಿಗಮ್, ದುಪಟ್ಟಾದಲ್ಲಿ ತನ್ನ ಮುಖ ಮುಚ್ಚಿಕೊಂಡಿದ್ದು, ಹಾಗೂ ಸನ್‌ಗ್ಲಾಸ್ ಅನ್ನೂ ಸಹ ಹಾಕಿದ್ದಾರೆ. ಇತರೆ ಪೊಲೀಸರು ತನ್ನನ್ನು ಗುರುತಿಸದಂತೆ ಅವರು ಈ ರೀತಿ ಮಾಡಿದ್ದಾರೆ. ಇನ್ನು, ಔರಯಾ ಪೊಲೀಸರು ಕ್ಯಾಪ್ಷನ್‌ ಹಾಕಿಕೊಂಡಿರುವುದು ಹೀಗೆ.. ‘’ಜಿಲ್ಲಾ ಪೊಲೀಸರ ಪ್ರತಿಕ್ರಿಯೆ ಸಮಯ ಹಾಗೂ ಅವರು ಎಷ್ಟು ಜಾಗರೂಕರಾಗಿದ್ದಾರೆ ಎಂಬುದನ್ನು ಪರೀಕ್ಷೆ ಮಾಡಲು ಔರಯಾ ಪೊಲೀಸ್‌ ಸೂಪರಿಟೆಂಡೆಂಟ್‌ ಚಾರು ನಿಗಮ್‌ ತನ್ನ ಗುರುತು ಮರೆಮಾಚಿ ನಿರ್ಜನ ರಸ್ತೆಯಲ್ಲಿ 112ಗೆ ಕರೆ ಮಾಡಿದ್ದರು. ಹಾಗೂ, ಬೈಕ್‌ನಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಜನರು ಕಳ್ಳತನ ಮಾಡಿದ್ದಾರೆ ಎಂದು ನಕಲಿ ಮಾಹಿತಿ ನೀಡಿದ್ದಾರೆ. ಇದರ ವಿಚಾರಣೆ ತೃಪ್ತಿದಾಯಕವಾಗಿದೆ’’ ಎಂದು ಕ್ಯಾಪ್ಷನ್‌ ಹೇಳುತ್ತದೆ. 

ಪೊಲೀಸರ ಟ್ವೀಟ್‌ ಹಾಗೂ ವಿಡಿಯೋವನ್ನು ನೀವೇ ನೋಡಿ.. 

Scroll to load tweet…

ಇದನ್ನೂ ಓದಿ: ಹೊಟೇಲ್‌ಗಳಲ್ಲಿ ಹೆಚ್ಚುವರಿ ಸೇವಾ ಶುಲ್ಕ ವಸೂಲಿ: ಬೆಂಗಳೂರಿನಿಂದ 15 ದೂರು ದಾಖಲು
ಈ ವಿಡಿಯೋ ಕ್ಲಿಪ್‌ ಅನ್ನು 2,83,000 ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ವೈರಲ್‌ ಆಗಿದೆ. ಅಲ್ಲದೆ, 2,100 ಕ್ಕೂ ಹೆಚ್ಚು ಲೈಕ್‌, ಸುಮಾರು 300 ರೀಟ್ವೀಟ್‌ಗಳನ್ನೂ ಕಂಡಿದೆ. ಇಂತಹ ಸರ್‌ಪ್ರೈಸ್‌ ಡ್ರಿಲ್‌ಗಳು ಎಷ್ಟು ಅಗತ್ಯವಾಗಿದೆ ಎಂದು ಹಲವು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಪೊಲೀಸ್‌ ವ್ಯವಸ್ಥೆಯನ್ನು ಉತ್ತಮಗೊಳಿಸುವ ಪರಿಶ್ರಮದ ಕಡೆಗೆ ಎಸ್‌ಪಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಹಲವರು ಹೊಗಳಿದ್ದಾರೆ. 

ಮಹಿಳಾ ಎಸ್‌ಪಿಯ ಕೆಲಸ ನಿಜಕ್ಕೂ ಶ್ಲಾಘನೀಯ ಅಲ್ಲವೇ..? ಈ ಬಗ್ಗೆ ನಿಮ್ಮ ಅಭಿಪ್ರಾಯವೇನು..? 

ಇದನ್ನೂ ಓದಿ: ಅಮರನಾಥ ಯಾತ್ರೆಯಲ್ಲಿ ಸಿಲುಕಿದ ಕನ್ನಡಿಗರಿಗೆ ರಾಜ್ಯದಿಂದ ಸಹಾಯವಾಣಿ!