* ಕೆಕೆ ಕೊನೆಯ ಕ್ಷಣಗಳು ವಿಡಿಯೋದಲ್ಲಿ ದಾಖಲು* ಗಾಯಕ ಕೆಕೆ ನಡೆಸಿಕೊಂಡು ಹೋಗಿದ್ದು ವಿವಾದ* ಸಭಾ ಸ್ಥಳದಲ್ಲಿ ಕನಿಷ್ಠ ಮೂಲಸೌಕರ್ಯವೂ ಇಲ್ಲ
ಕೋಲ್ಕತಾ(ಜೂ.02): ಬಂಗಾಳದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಗಾಯಕ ಕೆಕೆ ಅವರ ಕೊನೆಯ ಕ್ಷಣಗಳು ವಿಡಿಯೋಗಳಲ್ಲಿ ದಾಖಲಾಗಿವೆ. ಹೃದಯಾಘಾತ ಆದವರನ್ನು ಸಾಮಾನ್ಯವಾಗಿ, ಹೃದಯಕ್ಕೆ ತೊಂದರೆಯಾಗದಂತೆ ಸ್ಟೆ್ರಚರ್‌ನಲ್ಲಿ ಮಲಗಿಸಿ ಕರೆದೊಯ್ಯುವುದು ಸಾಮಾನ್ಯ. ಆದರೆ ನಡೆಸಿಕೊಂಡು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು ದೃಶ್ಯದಲ್ಲಿ ಕಂಡುಬರುತ್ತದೆ.
ಹೀಗಾಗಿ ಇಷ್ಟುದೊಡ್ಡ ಕಾರ್ಯಕ್ರಮ ಆಯೋಜಿಸಿದ್ದರೂ ಇಡೀ ಸಭಾಂಗಣದಲ್ಲಿ ವೈದ್ಯಕೀಯ ಸೌಲಭ್ಯ ಇಲ್ಲದ ಕಾರಣಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಡೆಸಿಕೊಂಡು ಕರೆದೊಯ್ದರೆ ಎದೆ ಮೇಲೆ ಒತ್ತಡ ಬೀಳುತ್ತದೆ ಎಂಬುದು ತಜ್ಞರ ವಾದ.
ಈ ನಡುವೆ, ವಿಡಿಯೋದಲ್ಲಿ ಕೆಕೆ ಅವರು ಎದೆನೋವಿನಿಂದ ಒದ್ದಾಡುತ್ತಿರುವ ದೃಶ್ಯ ದಾಖಲಾಗಿದೆ. ಇದೇ ಸ್ಥಿತಿಯಲ್ಲಿ ಅವರು ಅವರ ಹೋಟೆಲ್‌ಗೆ ಹಿಂದಿರುಗಿದ್ದಾರೆ. ಇಲ್ಲಿಂದ ಆಸ್ಪತ್ರೆಗೆ ಕರೆದೊಯ್ಯುವ ದಾರಿಯ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಕೆಕೆ ವಿಪರೀತವಾಗಿ ಬೆವರುತ್ತಿರುವುದು ದಾಖಲಾಗಿದೆ. ಕುಸಿದು ಬಿದ್ದ ಅವರನ್ನು ಕರೆದೊಯ್ಯಲು ಸ್ಟೆ್ರಚರ್ ಸಹ ಇಲ್ಲದೇ ಅವರನ್ನು ನಡೆಸಿಕೊಂಡು ಹೋಗಿದ್ದಾರೆ.
