ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ!
ಬಾಲಿವುಡ್ ಹಿರಿಯ ನಟಟ ಇನ್ನಿಲ್ಲ| ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ| ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್| ಇರ್ಫಾನ್ ಬೆನ್ನಲ್ಲೇ ಬಾಲಿವುಡ್‌ಗೆ ಮತ್ತೊಂದು ಆಘಾತ
ಮುಂಬೈ(ಏ.30: ಉಸಿರಾಟದ ಸಮಸ್ಯೆಯಿಂದ ಬುಧವಾರ ಬೆಳಗ್ಗೆ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಿಷಿ ಕಪೂರ್(67) ಚಿಕಿತ್ಸೆ ಫಲಕಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಇರ್ಫಾನ್ ಕಳೆದುಕೊಂಡ ದುಃಖದಲ್ಲಿದ್ದ ಬಾಲಿವುಡ್‌ಗೆ ಮತ್ತೊಂದು ಆಘಾತವಾಗಿದೆ.
"
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿ ಕಪೂರ್
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ರಿಷಿ ಕಪೂರ್ ಚಿಕಿತ್ಸೆಗೆಂದು ಅಮೆರಿಕಗೆ ತೆರಳಿದ್ದರು. ಸುಮಾರು ಒಂದು ವರ್ಷ ಅಲ್ಲೇ ಇದ್ದು ಚಿಕಿತ್ಸೆ ಪಡೆದಿದ್ದ ಅವರು ಕಳೆದ ಸಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದಿಂದಾಗಿ ಎರಡು ಬಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದೆಹಲಿಯಲ್ಲಿ ನಡೆದಿದ್ದ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರಿಷಿ ಕಪೂರ್ ಮೊದಲ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು.. ವಾಪಾಸಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಅವರು ಸೋಂಕಿನಿಂದ ಬಳಲುತ್ತಿದ್ದೆ ಎಂದು ಹೇಳಿದ್ದರು. ಆದರೆ ಮುಂಬೈಗೆ ಮರಳಿದ್ದ ಅವರು ಜ್ವರದಿಂದಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು.
ರಿಷಿ ಕಪೂರ್ ಬಹುತೇಕ ಕ್ಯಾನ್ಸರ್ ಮುಕ್ತ
"
ನಟ, ನಿರ್ದೇಶಕ ಹಾಗೂ ನಿರ್ಮಾಪಕ
1955 ರಲ್ಲಿ ಶೀರ್ 420 ಸಿನಿಮಾ ಮೂಲಕ ಚಿತ್ರರಂಗದಲ್ಲಿ ಕಾಣಿಸಿಕೊಂಡ ರಿಷಿ ಕಪೂರ್ ನಿರ್ದೇಶಕ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಂಡಿದ್ದರು. ಬಾಬಿ. ಝಿಂದಾ ದಿಲ್ . ರಾಜಾ. ರಂಗೀಲಾ ರತನ್. ಲೈಲಾ ಮಜ್ನು ಚಿತ್ರಗಳಲ್ಲಿ ಅಭಿನಯಿಸಿದ್ದರು. ಈ ಮೂಲಕ 1970 ರಿಂದ 2009ರವರೆಗೂ ಪ್ರೇಕ್ಷಕರನ್ನ ರಂಜಿಸಿದ್ದರು.
1980 ರಲ್ಲಿ ನೀತೂ ಸಿಂಗ್ ಜೊತೆ ವಿವಾಹವಾಗಿದ್ದರು. ರಣಬೀರ್ ಕಪೂರ್ ಹಾಗೂ ರಿಧಿಮಾ ಕಪೂರ್ ರಿಷಿ ಕಪೂರ್ ಮಕ್ಕಳು.
ರಿಷಿ ಕಪೂರ್ ಪಡೆದ ಪ್ರಶಸ್ತಿ ಗಳು
1970 - ಮೇರಾ ನಾಮ್ ಜೋಕಾರ್ ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತ
ಮೇರಾ ನಾಮ್ ಜೋಕಾರ್ ಸಿನಿಮಾದಲ್ಲಿ ಉತ್ತಮ ಬಾಲ ನಟನಾಗಿ 1971- ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಭಿಸಿತು.
ರೋಮ್ಯಾಂಟಿಕ್ ಮ್ಯಾನ್ ರಿಷಿ ಕಪೂರ್ ಪಡೆದ ಪ್ರಶಸ್ತಿಗಳಿವು
1973 -ರಲ್ಲಿ ಬಾಬಿ ಸಿನಿಮಾಗಾಗಿ ಫಿಲ್ಮ್ ಫೇರ್‌ನ ಉತ್ತಮ ನಟ ಪ್ರಶಸ್ತಿ ಲಭಿಸಿತು
2006 - ಜೀವಮಾನದ ಸಾಧನೆಗಾಗಿ ಝೀ ಸಿನಿ ಪ್ರಶಸ್ತಿ
2007 - ಎಂಟಿವಿ ಲೈಕ್ರಾ ಪ್ರಶಸ್ತಿಗಳು: 2006 ರ ಮಹಾ ಸ್ಟೈಲ್ ಐಕಾನ್
2008 - ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್
2008 - ಎಫ್‌ಐಸಿಸಿಐ "ಲಿವಿಂಗ್ ಲೆಜೆಂಡ್ ಇನ್ ಎಂಟರ್‌ಟೈನ್‌ಮೆಂಟ್" ಪ್ರಶಸ್ತಿ
2008 - 10 ನೆಯ ಮುಂಬಯಿ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಇಂಟರ್‌ನ್ಯಾಷನಲ್ ಫಿಲ್ಮ್ (ಎಂ.ಎ.ಎಂ.ಐ) ಜೀವನಾವಧಿ ಸಾಧನೆಯ ಪ್ರಶಸ್ತಿ ಲಭಿಸಿತು
2009- ಸಿನಿಮಾದ ನೆರವಿಕೆಗಾಗಿ ರಷ್ಯಾ ಸರ್ಕಾರದಿಂದ ಮನ್ನಣೆ ಸಿಕ್ಕಿತು
2010 -ಅಪ್ಸರಾ ಪ್ರಶಸ್ತಿಗಳು: ಲವ್ ಆಜ್ ಕಲ್ ಚಿತ್ರದಲ್ಲಿ ಪೋಷಕ ಪಾತ್ರದ ಉತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿತು
2010 - ಲವ್ ಆಜ್ ಕಲ್ ನಲ್ಲಿ ಉತ್ತಮ ಪೋಷಕ ಪಾತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಲಭಿಸಿತು
ಕ್ಯಾನ್ಸರ್ ವಿರುದ್ಧ ಹೋರಾಡಿದ್ದು ಕಷ್ಟದ ಸಮಯ; ಭಾವುಕರಾದ ರಿಷಿ ಕಪೂರ್
ಕೊನೆ ಆಸೆ ಈಡೇರಲೇ ಇಲ್ಲ
ಇನ್ನು ಸೋಶಿಯಲ್ ಮೀಡಿಯಾದಲ್ಲಿ ಯಾವತ್ತೂ ಆಕ್ಟಿವ್ ಆಗಿರುವ ಕಪೂರ್ ಏಪ್ರಿಲ್ 2ರ ಬಳಿಕ ಯಾವುದೇ ಪೋಸ್ಟ್ ಹಾಕಿಲ್ಲ. ಆದರೆ ಇತ್ತೀಚೆಗಷ್ಟೇ ಅವರು ತಮ್ಮ ಮುಂದಿನ ಪ್ರಾಜೆಕ್ಸ್ ಬಗ್ಗೆ ಮಾತನಾಡಿದ್ದರು. ಹಾಲಿವುಡ್ ಸಿನಿಮಾ ದ ಇಂಟರ್ನ್ ರಿಮೇಕ್ ಮಾಡುವುದಾಗಿ ಹೇಳಿದ್ದ ಅವರು, ದೀಪಿಕಾ ಪಡುಕೋಣೆಯನ್ನು ಈ ಸಿನಿಮಾಗೆ ತೆಗೆದುಕೊಳ್ಳುವುದಾಗಿ ನುಡಿದಿದ್ದರು. ಆದರೀಗ ತಮ್ಮ ಈ ಪ್ರಾಜೆಕ್ಸ್ ಪೂರೈಸುವುದಕ್ಕೂ ಮೊದಲಲೇ ಅವರು ಇಹಲೋಕ ತ್ಯಜಿಸಿದ್ದಾರೆ.
ಹಸನ್ಮುಖಿ ಹೀರೋ ನಿಧನಕ್ಕೆ ಬಾಲಿವುಡ್ ಕಂಬನಿ
"