ರೋಮ್ಯಾಂಟಿಕ್ ಮ್ಯಾನ್ ರಿಷಿ ಕಪೂರ್ ಪಡೆದ ಪ್ರಶಸ್ತಿಗಳಿವು...
70ರ ದಶಕದ ಹೆಸರಾಂತ ನಟ ರಿಷಿ ಕಪೂರ್ ಸಿನಿಮಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳ ಮೂಲಕ ರೋಮ್ಯಾಂಟಿಕ್ ಮ್ಯಾನ್ ಎನಿಸಿಕೊಂಡು ಸದಾ ಗಾಸಿಪ್‌ನಲ್ಲಿದ ನಟ ಈಗ ನೆನಪು ಮಾತ್ರ. ರಿಷಿ ಕಪೂರ್ ಪಡೆದಿರುವ ಪ್ರಶಸ್ತಿಗಳನ್ನು ನೋಡಿ...
1970 - ಮೇರಾ ನಾಮ್ ಜೋಕಾರ್ ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತಿ
ಮೇರಾ ನಾಮ್ ಜೋಕಾರ್ ಸಿನಿಮಾದಲ್ಲಿ ಉತ್ತಮ ಬಾಲ ನಟನಾಗಿ 1971- ನ್ಯಾಷನಲ್ ಫಿಲ್ಮ್ ಪ್ರಶಸ್ತಿ ಲಭಿಸಿತ್ತು .
1973ರಲ್ಲಿ ಬಾಬಿ ಸಿನಿಮಾಗಾಗಿ ಫಿಲ್ಮ್ ಫೇರ್‌ನ ಉತ್ತಮ ನಟ ಪ್ರಶಸ್ತಿ ಲಭಿಸಿತು.
2006ರಲ್ಲಿ ಜೀವಮಾನ ಸಾಧನೆಗಾಗಿ ಝೀ ಸಿನಿ ಪ್ರಶಸ್ತಿ
2007ರಲ್ಲಿ ಎಂಟಿವಿ ಲೈಕ್ರಾ ಪ್ರಶಸ್ತಿಗಳು: 2006 ರ ಮಹಾ ಸ್ಟೈಲ್ ಐಕಾನ್
2008ರಲ್ಲಿ ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್
2008ರಲ್ಲಿ ಎಫ್‌ಐಸಿಸಿಐ "ಲಿವಿಂಗ್ ಲೆಜೆಂಡ್ ಇನ್ ಎಂಟರ್‌ಟೈನ್‌ಮೆಂಟ್" ಪ್ರಶಸ್ತಿ
2009 - 10ನೇ ಸಾಲಿನ ಮುಂಬಯಿ ಅಕಾಡೆಮಿ ಆಫ್ ದಿ ಮೂವಿಂಗ್ ಇಮೇಜ್ ಇಂಟರ್‌ನ್ಯಾಷನಲ್ ಫಿಲ್ಮ್ (ಎಂ.ಎ.ಎಂ.ಐ) ಜೀವನಾವಧಿ ಸಾಧನೆಯ ಪ್ರಶಸ್ತಿ ಲಭಿಸಿತ್ತು .
2009ರಲ್ಲಿ ಸಿನಿಮಾದ ನೆರವಿಗಾಗಿ ರಷ್ಯಾ ಸರ್ಕಾರದಿಂದ ಮನ್ನಣೆ ಸಿಕ್ಕಿತು
2010ರಲ್ಲಿ ಅಪ್ಸರಾ ಪ್ರಶಸ್ತಿಗಳು: ಲವ್ ಆಜ್ ಕಲ್ ಚಿತ್ರದಲ್ಲಿ ಪೋಷಕ ಪಾತ್ರದ ಉತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿತ್ತು .
2010ರಲ್ಲಿ ಲವ್ ಆಜ್ ಕಲ್ ನಲ್ಲಿ ಉತ್ತಮ ಪೋಷಕ ಪಾತ್ರಕ್ಕಾಗಿ ಸ್ಟಾರ್ ಸ್ಕ್ರೀನ್ ಪ್ರಶಸ್ತಿ ಲಭಿಸಿತ್ತು .