ಮುಂಬೈ (ಮೇ. 01): ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದ ನಟ ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತರಾಗಿದ್ದಾರೆ ಎಂದು ಅವರ ಸೋದರ, ಹಿರಿಯ ನಟ ರಣಧೀರ್‌ ಕಪೂರ್‌ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಣಧೀರ್‌ ಕಪೂರ್‌ ಅವರು, ‘ಕ್ಯಾನ್ಸರ್‌ಗೆ ನ್ಯೂಯಾರ್ಕ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಿ ಇನ್ನೆರಡು ತಿಂಗಳಲ್ಲಿ ಸ್ವದೇಶಕ್ಕೆ ಮರಳಲಿದ್ದಾರೆ,’ ಎಂದು ಹೇಳಿದ್ದಾರೆ. ರಿಷಿಗೆ ಕ್ಯಾನ್ಸರ್‌ ಬಾಧಿಸಿತ್ತು ಎಂಬುದನ್ನು ಕಪೂರ್‌ ಕುಟುಂಬ ಬಹಿರಂಗಪಡಿಸಿದ್ದು ಇದೇ ಮೊದಲು.