ಬಾಲಿವುಡ್ ನಟ ರಿಷಿ ಕಪೂರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ತಮ್ಮ ಖಾಯಿಲೆ ಬಗ್ಗೆ ಮೊದಲ ಬಾರಿ ಮಾತನಾಡಿದ್ದಾರೆ. 

ಬ್ರೇಕಪ್ ನಂತರ ಕತ್ರಿನಾ ಕೈಫ್ ಬರ್ತಡೇಗೆ ಸಲ್ಲು ಭಾಯ್ ವಿಶ್

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಕ್ಯಾನ್ಸರ್ ವಿರುದ್ಧ ಹೋರಾಡಿದ ರೀತಿಯನ್ನು ಹೇಳಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಕುಟುಂಬದವರ ಸಹಕಾರವನ್ನು ಸ್ಮರಿಸಿಕೊಂಡಿದ್ದಾರೆ. 

‘ನಾನು ಕಳೆದ 11 ತಿಂಗಳಿಂದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇದು ಅತ್ಯಂತ ಕ್ಲಿಷ್ಟಕರವಾದ ಸಮಯ. ಪತ್ನಿ ನೀತು, ಮಕ್ಕಳಾದ ರಣಬೀರ್, ರಿದ್ದಿಮಾ ತುಂಬಾ ಸಪೋರ್ಟಿವ್ ಆಗಿದ್ದಾರೆ. ಎಲ್ಲರಿಗೂ ನಾನು ಋಣಿ. ಜುಲೈ ಅಂತ್ಯದಲ್ಲಿ ಒಂದು ಟ್ರೀಟ್ ಮೆಂಟ್ ಇದೆ. ಅದನ್ನು ಮುಗಿಸಿಕೊಂಡು ವಾಪಸ್ಸಾಗುವ ನಿರೀಕ್ಷೆಯಲ್ಲಿದ್ದೇನೆ. ಭಾರತಕ್ಕೆ ಹಿಂತಿರುಗಲು ನಾನು ಕಾಯುತ್ತಿದ್ದೇನೆ ಎಂದು ಭಾವುಕರಾದರು.