'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಬಳಿಕ ನಟಿ ಗಗನಾಗೆ ಪ್ರಪೋಸಲ್ ಬರೋದು ಹೆಚ್ಚುತ್ತಿದೆ. ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ...
'ಭರ್ಜರಿ ಬ್ಯಾಚುಲರ್ಸ್ ಸೀಸನ್ 2'ನಲ್ಲಿ ಡ್ರೋನ್ ಪ್ರತಾಪ್ ಮತ್ತು ಗಗನಾ ಸಕತ್ ಹವಾ ಸೃಷ್ಟಿಸಿದ್ದರು. ಆದರೆ ಕೊನೆಗೆ ಗೆಲುವು ಸುನೀಲ್ ಹಾಗೂ ಅಮ್ರಿಟಾ ಜೋಡಿಯದ್ದಾಯಿತು. ಮೂರನೇ ಸ್ಥಾನವನ್ನು ಅಂದರೆ ಎರಡನೆಯ ರನ್ನರ್ ಅಪ್ ಆಗಿದೆ ಡ್ರೋನ್ ಪ್ರತಾಪ್ ಮತ್ತು ಗಗನಾ ಜೋಡಿ. ಈ ಜೋಡಿಯ ಅಭಿಮಾನಿಗಳಿಗೆ ಇದು ಸಹಜವಾಗಿ ದುಃಖ ತರಿಸಿದೆ. ಇದೇ ಕಾರಣಕ್ಕೆ ಗಗನಾ ಅವರ ಪುಟಾಣಿ ಅಭಿಮಾನಿಯೊಬ್ಬಳು ಅಕ್ಕಾ ನೀವು ಮಹಾನಟಿಯಲ್ಲಿಯೂ ಗೆಲ್ಲಲಿಲ್ಲ, ಇಲ್ಲಿಯೂ ಗೆಲ್ಲಲಿಲ್ಲ ನನಗೆ ತುಂಬಾ ಬೇಜಾರು ಆಗ್ತಿದೆ ಎಂದು ಅತ್ತಿರುವುದಾಗಿ ಗಗನಾ ಹೇಳಿಕೊಂಡಿದ್ದಾರೆ.
ಆದರೆ, ಮೊದಲ ಸ್ಥಾನ ಬರದಿದ್ದರೇನಂತೆ, ಒಂದು ರಿಯಾಲಿಟಿ ಷೋಗೆ ಹೋಗಿ ಬಂದ ಮೇಲೆ ಸಹಜವಾಗಿ ಸ್ಪರ್ಧಿಗಳು ದೊಡ್ಡ ಸೆಲೆಬ್ರಿಟಿಗಳೇ ಆಗುತ್ತಾರೆ. ಅವರಿಗೆ ಇನ್ನು ಪ್ರಪೋಸಲ್ ಬರುವುದು ಹೊಸ ವಿಷಯವೇನಲ್ಲ. ಅದೇ ರೀತಿ ಗಗನಾಗೂ ಇದಾಗಲೇ ಪ್ರಪೋಸಲ್ ಬರಲು ಶುರುವಾಗಿದೆ. ಇದನ್ನು ಮಾಧ್ಯಮವೊಂದರಲ್ಲಿ ಇವರು ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಖಾತೆಯಿಂದ ಒಬ್ಬಾತ ನನ್ನದೂ ನಿನ್ನದೂ ಸೇಮ್ ಕಾಸ್ಟ್, ಅಷ್ಟು ಹೊಲ ಎಲ್ಲಾ ಐತೆ, ಮದ್ವೆಯಾಗೋಣ ಅಂತ ಹೇಳಿರುವ ಬಗ್ಗೆ ನಟಿ ಹೇಳಿಕೊಂಡಿದ್ದಾರೆ.
ಇದರಲ್ಲಿ ತಾವು ಲಿಂಗಾಯತರು ಎಂದು ಗಗನಾ ಹೇಳಿಕೊಂಡಿದ್ದು, ತಮ್ಮ ಫ್ಯಾನ್ಸ್ ಸಂಖ್ಯೆ ಹೆಚ್ಚಾಗಿರುವುದಾಗಿಯೂ ಹೇಳಿದ್ದಾರೆ. ಇನ್ನು ಭರ್ಜರಿ ಬ್ಯಾಚುಲರ್ಸ್ನಲ್ಲಿ ಈ ಜೋಡಿ ಮೂರು ಲಕ್ಷ ಗೆದ್ದಿದೆ. ಅಂದರೆ ಒಬ್ಬೊಬ್ಬರಿಗೆ ಒಂದೂವರೆ ಲಕ್ಷ ರೂಪಾಯಿ ಸಿಕ್ಕಿದೆ. ಇನ್ನು ಗಗನಾ ಕುರಿತು ಹೇಳುವುದಾದರೆ, ಮಹಾನಟಿಯ ಮೊದಲ ಸೀಸನ್ ಮೂಲಕ ಮನೆಮಾತಾದವರು ಚಿತ್ರದುರ್ಗದ ಗಗನಾ. ಇದೀಗ ಅವರಿಗೆ ರಿಯಾಲಿಟಿ ಷೋಗಳಲ್ಲಿ ಭಾರಿ ಬೇಡಿಕೆ ಇದೆ. ಭರ್ಜರಿ ಬ್ಯಾಚುಲರ್ಸ್ ರಿಯಾಲಿಟಿ ಷೋನಲ್ಲಿ ಡ್ರೋನ್ ಪ್ರತಾಪ್ಗೆ ಜೋಡಿಯಾಗಿದ್ದ ಗಗನಾ ಪೈಪೋಟಿಗೆ ಬಿದ್ದವರಂತೆ ಸ್ಪರ್ಧಾ ಜೋಡಿಗಳು ರೊಮಾನ್ಸ್ನಲ್ಲಿ ತೊಡಗಿಸಿಕೊಂಡಿತ್ತು. ಎಲ್ಲವೂ ಟಾಸ್ಕ್ ಆಗಿದ್ದರಿಂದ ಎಲ್ಲಾ ಜೋಡಿಗಳೂ ಹೀಗೆಯೇ ಮಾಡಿದ್ದರೆ, ಡ್ರೋನ್ ಪ್ರತಾಪ್ ಗಗನಾಳಿಗಾಗಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದರು. ಪ್ರಪೋಸಲ್ ರೌಂಡ್, ಆ ರೌಂಡ್, ಈ ರೌಂಡ್ ಎನ್ನುತ್ತಲೇ ರಿಯಲ್ ಪ್ರೇಮಿಗಳನ್ನೂ ನಾಚಿಸುವಂತೆ ಈ ಜೋಡಿಗಳು ಕಾಣಿಸಿಕೊಂಡಿದ್ದವು.
ಕೊನೆಯ ರೌಂಡ್ನಲ್ಲಿ ಮಕ್ಕಳ ವಿಷಯದವರೆಗೂ ಹೋಗಿತ್ತು. ಡ್ರೋನ್ ಪ್ರತಾಪ್ಗೆ ಒಂದು ವೇಳೆ ನಿಮ್ಮ ಮದುವೆಯಾಗುವ ಹುಡುಗಿ ಮಕ್ಕಳು ಬೇಡ ಅಂದ್ರೆ ಏನು ಮಾಡ್ತೀರಿ ಎಂದು ಕೇಳಿದ್ದಾರೆ. ನನಗೆ ಮಕ್ಕಳು ಬೇಕೇ ಬೇಕು. ಅದನ್ನು ಮುಂಚಿತವಾಗಿಯೇ ಮಾತನಾಡಿಕೊಳ್ತೇನೆ. ಮನಸ್ಸಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ. ಆಗ ರವಿಚಂದ್ರನ್ ಅವರು, ಅಲ್ಲಿ ಇದ್ದ ಪ್ರಶ್ನೆ ಮದುವೆಯಾದ ಮೇಲೆ ಮಗು ಬೇಡ ಎಂದರೆ ಏನು ಮಾಡುತ್ತೀ ಎನ್ನುವುದು, ಮದುವೆಗೆ ಮುನ್ನವೇ ಡಿಸಿಷನ್ ತಗೊಂಡ್ವಿ ಎನ್ನುವ ಪ್ರಶ್ನೆಯೆಲ್ಲಾ ಬರುವುದಿಲ್ಲ. ಒಂದು ವೇಳೆ ಮದುವೆಯಾದ ಮೇಲೆ ಮಗುನೇ ಆಗದೇ ಇರುವ ಪರಿಸ್ಥಿತಿ ಇರಬಹುದು, ಮಗುನೇ ಬೇಡ ಎನ್ನುವ ಪರಿಸ್ಥಿತಿ ಇರಬಹುದು. ಆ ಸಮಯದಲ್ಲಿ ಏನು ಮಾಡುತ್ತಿ ಎಂದು ಕೇಳಿದ್ದಾರೆ. ಅದಕ್ಕೆ ಡ್ರೋನ್ ಪ್ರತಾಪ್, ಒಂದು ವೇಳೆ ಮಗು ಆಗುವ ಸ್ಥಿತಿ ಇದ್ದರೂ ಮಗು ಬೇಡ ಎಂದರೆ ಡಿವೋರ್ಸ್ ಕೊಡುತ್ತೇನೆ ಎಂದಿದ್ದರು. ಇದನ್ನು ಕೇಳಿ ಗಗನಾ ಅರೆಕ್ಷಣ ಶಾಕ್ ಆಗಿದ್ದರು.
