ಭಾಗ್ಯಳ ತಂಗಿ ಪೂಜಾಳ ಮದುವೆಯ ವಿಷಯದಲ್ಲಿ ಇರುವ ಗೊಂದಲ ಈಗ ತಿಳಿಯಾಗಿದ್ದು, ಆದಿಯಿಂದಾಗಿ ಮದುವೆ ಸುಸೂತ್ರವಾಗಿ ನಡೆಯಲಿದೆ. ಪೂಜಾಳ ಮದುವೆ ಮುಗಿಯುತ್ತಲೇ ಮತ್ತೊಂದು ಭರ್ಜರಿ ಗುಡ್​ನ್ಯೂಸ್ ಇದೆಯಂತೆ. ಏನದು? 

ಜೀವನದಲ್ಲಿ ಎಂದಿಗೂ ಯಾರ ಮುಂದೆಯೂ ತಲೆತಗ್ಗಿಸಿಲ್ಲ. ಲೈಫ್​ನಲ್ಲಿ ಇದೇ ಮೊದಲ ಬಾರಿಗೆ ಮಂಡಿಯೂರಿ ಕ್ಷಮೆ ಕೋರುತ್ತಿದ್ದೇನೆ ಎನ್ನುತ್ತಲೇ ಭಾಗ್ಯಳ ಮುಂದೆ ಆದಿ ಮಂಡಿಯೂರಿ ಕ್ಷಮೆ ಕೋರಿದ್ದಾನೆ. ಆಸ್ತಿಗಾಗಿ ಈ ಮದುವೆಯಾಗುತ್ತಿದೆ ಎಂದು ಭಾಗ್ಯಾಳನ್ನು ಚುಚ್ಚಿದ್ದ ಆತನ ಮಾತಿಗೆ ನೊಂದು ಭಾಗ್ಯ ತಂಗಿ ಪೂಜಾ ಮತ್ತು ಕಿಶನ್​ ಮದುವೆ ಆಗದಂತೆ ತಡೆಯೊಡ್ಡಿದ್ದಳು. ತಂಗಿಯ ಮದುವೆಗಾಗಿ ಎಷ್ಟೆಲ್ಲಾ ಕಷ್ಟಪಟ್ಟಿದ್ದ ಭಾಗ್ಯ, ಹಸೆಮಣೆಯಿಂದಲೇ ತಂಗಿಯನ್ನು ಕರೆದುಕೊಂಡು ಬಂದು ಮದುವೆಯನ್ನು ರದ್ದು ಮಾಡಲು ಮುಂದಾಗಿದ್ದಳು. ಆದರೆ ಆದಿಗೆ ತನ್ನಿಂದ ತಪ್ಪಾಗಿರುವುದು ತಿಳಿಸಿದೆ. ಭಾಗ್ಯ ಎಂಥ ಸ್ವಾಭಿಮಾನಿ ಹೆಣ್ಣು, ಆಕೆ ಹೇಗೆಲ್ಲಾ ಬದುಕಿದ್ದಾಳೆ ಎನ್ನುವ ಸತ್ಯದ ಅರಿವು ಆಗುತ್ತಿದ್ದಂತೆಯೇ ನೊಂದುಕೊಂಡಿದ್ದಾನೆ. ಭಾಗ್ಯಳಿಗೆ ಇಲ್ಲಸಲ್ಲದ ಮಾತುಗಳನ್ನಾಗಿ ನೋಯಿಸಿದ್ದ ಆತನಿಗೆ ಈಗ ನೋವಾಗಿದೆ. ಮಂಡಿಯೂರುತ್ತಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಭಾಗ್ಯಳ ಬಳಿ ಕ್ಷಮೆ ಕೋರಿದ್ದಾನೆ.

ಪೂಜಾಳಿಗೆ ಯಾವುದೇ ಆಪತ್ತು ಬರದಂತೆ ಕಾಯುವ ಜವಾಬ್ದಾರಿ ನನ್ನದು ಎಂದು ಮಾತು ಕೊಟ್ಟಿದ್ದಾನೆ. ಅಲ್ಲಿಗೆ ಪೂಜಾ ವಿವಾಹ ಸಂಪನ್ನವಾಗುತ್ತದೆ. ಪೂಜಾಳ ಮದುವೆಗೆ ಇದ್ದ ಎಲ್ಲಾ ಅಡ್ಡಿ ಆತಂಕಕಗಳೂ ಸದ್ಯ ನಿವಾರಣೆಯಾಗಿದೆ. ಮಾಮೂಲಿನಂತೆ ಎಲ್ಲಾ ಸೀರಿಯಲ್​ಗಳಲ್ಲಿಯೂ ಇರುವಂತೆ ಇಲ್ಲಿಯೂ ಇಬ್ಬರು ಲೇಡಿ ವಿಲನ್​ಗಳಿಗೆ ಸದ್ಯ ಬುದ್ಧಿ ಬರುವುದಿಲ್ಲ. ಕನ್ನಿಕಾ ಮತ್ತು ಮೀನಾಕ್ಷಿ ಇನ್ನೂ ಪೂಜಾಳ ಮದುವೆ ವಿರುದ್ಧವೇ ಇದ್ದಾರೆ. ಸೀರಿಯಲ್​ ಮುಂದಕ್ಕೆ ಹೋಗಬೇಕು ಎಂದರೆ ಲೇಡಿ ವಿಲನ್​ಗಳು ಇರಲೇಬೇಕಲ್ಲ, ಹಾಗೆಯೇ ಇವರು ಇದ್ದಾರೆ.

ಆದರೆ ಇದೀಗ ಇವೆಲ್ಲವುಗಳ ನಡುವೆಯೇ, ಸೀರಿಯಲ್​ ಪ್ರಿಯರಿಗೆ ಗುಡ್​ನ್ಯೂಸ್​ ಕೂಡ ಕಾದಿದ್ದು, ಮುಂದಿನ ಕಥೆಯನ್ನು ನೆಟ್ಟಿಗರೇ ಬರೆದುಬಿಟ್ಟಿದ್ದಾರೆ. ಅದೇನೆಂದರೆ, ಭಾಗ್ಯ ಮತ್ತು ಆದಿಯ ಮದುವೆ ಎನ್ನುವುದು. ಅಷ್ಟಕ್ಕೂ ಕನ್ನಿಕಾ ಅಣ್ಣನಾಗಿ ಆದಿ ಅರ್ಥಾತ್​ ನಟ ಹರೀಶ್​ ಎಂಟ್ರಿಯಾದಾಗಲೇ ಭಾಗ್ಯಳಿಗೆ ಈತ ಜೋಡಿ ಎಂದಿದ್ದರು ನೆಟ್ಟಿಗರು. ಆದರೆ, ಈತ ಕಿಶನ್​ ಅಣ್ಣ ಎಂದು ತಿಳಿಯದೇ ಕುಸುಮಾ ಮತ್ತು ಭಾಗ್ಯ ಗಾಡಿಯ ವಿಷಯದಲ್ಲಿ ಆದಿ ಜೊತೆ ಜಗಳವಾಡಿಕೊಂಡಿದ್ದರು. ಕುಸುಮಾ, ಆದಿಯ ಕಾರನ್ನು ಒಡೆದಿದ್ದಳು. ಕೊನೆಗೆ ಇವನೇ ಕಿಶನ್​ ಅಣ್ಣ ಎಂದು ತಿಳಿದಾಗ ಇಬ್ಬರೂ ಕ್ಷಮೆ ಕೋರಿದ್ದರು. ಆದರೆ ಇವರಿಬ್ಬರ ಅಬ್ಬರ ನೋಡಿ, ಭಾಗ್ಯ ಮತ್ತು ಕುಸುಮಾ ಸರಿಯಿಲ್ಲ. ತನ್ನ ತಮ್ಮನ ಮದುವೆ ಅವಳ ಜೊತೆ ಸಾಧ್ಯನೇ ಇಲ್ಲ ಎಂದಿದ್ದ ಆದಿ. ಕೊನೆಗೆ ಇದಕ್ಕೆ ತಕ್ಕಂತೆ ಕನ್ನಿಕಾ ಮತ್ತು ಮೀನಾಕ್ಷಿ ಸೇರಿ ಭಾಗ್ಯಳ ಮನೆಯವರ ವಿರುದ್ಧ ಆದಿಯ ತಲೆ ತುಂಬಿದ್ದರು.

ಆದರೂ ಆದಿ ಮತ್ತು ಭಾಗ್ಯ ಒಂದಾಗಬೇಕು, ತಾಂಡವ್​ಗೆ ಬುದ್ಧಿ ಬರಬೇಕು ಎಂದೆಲ್ಲಾ ನೆಟ್ಟಿಗರು ಕಮೆಂಟ್​ ಹಾಕುತ್ತಲೇ ಬಂದಿದ್ದಾರೆ. ಇದೀಗ ಆದಿ ಮತ್ತು ತಾಂಡವ್​ ಕೂಡ ಭೇಟಿಯಾಗಿದ್ದು, ತಾಂಡವ್​ಗೆ ತನ್ನದೇ ಕಂಪೆನಿಯಲ್ಲಿ ಪೋಸ್ಟ್​ ಕೊಡಲು ಆದಿ ಮುಂದೆ ಬಂದಿದ್ದಾರೆ. ತಾಂಡವ್​ ಭಾಗ್ಯಳ ಗಂಡ ಎನ್ನುವುದು ಆದಿಗೆ ಇನ್ನೂ ಗೊತ್ತಿಲ್ಲ. ಆದರೆ ತಾಂಡವ್​ ತನ್ನ ಪತ್ನಿ ಮತ್ತು ಮನೆಯವರ ವಿರುದ್ಧ ಮಾಡಿರುವ ಆರೋಪಗಳನ್ನು ಆದಿ ನಂಬಿದ್ದಾನೆ. ಆದರೆ ಅವರೇ ಭಾಗ್ಯಳ ಮನೆಯವರು ಎಂದು ತಿಳಿದಿಲ್ಲ. ಇನ್ನು ಅದು ಗೊತ್ತಾದ ಮೇಲೆ ತಾಂಡವ್​ಗೆ ಸರಿಯಾಗಿ ಬುದ್ಧಿ ಕಲಿಸಿ ಭಾಗ್ಯಳ ಮದುವೆಯಾಗುತ್ತಾನೆ ಎಂದಿರುವ ವೀಕ್ಷಕರು ಅದಕ್ಕೆ ಏನಿಲ್ಲವೆಂದರೂ ಇನ್ನೂ 2-3 ವರ್ಷ ಕಾಯಿರಿ ಎಂದು ಕಮೆಂಟ್​ಗಳಲ್ಲಿ ಬರೆಯುತ್ತಿದ್ದಾರೆ!