ಪನೋರಮಾ ಸ್ಟುಡಿಯೋಸ್ ನಿರ್ಮಾಣದ ‘ದೃಶ್ಯಂ-3’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 4 ದಿನದಲ್ಲಿ 300 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದಿರುವ ‘ದೃಶ್ಯಂ 3’, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುತ್ತದೆಯೇ? ಕಾದು ನೋಡಬೇಕಿದೆ..!
Ajay Devgn Drishyam 3 box office collection in 4 Days:ನಾಲ್ಕೇ ದಿನಕ್ಕೆ 300 ಕೋಟಿ ಕ್ಲಬ್‌ಗೆ ಎಂಟ್ರಿ! ಅಜಯ್ ದೇವಗನ್ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಧಮಾಕಾ!
ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಸಸ್ಪೆನ್ಸ್, ಥ್ರಿಲ್ ಮತ್ತು ಕುತೂಹಲದ ಅಂಶಗಳನ್ನು ಹೊತ್ತು ಬಂದಿರುವ ಈ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕೇವಲ ನಾಲ್ಕು ದಿನಗಳಲ್ಲೇ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಡಿ ದಾಟಿದೆ ಎನ್ನಲಾಗಿದೆ.
ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಕಂಡಿತ್ತು. ಶುಕ್ರವಾರ ಸಿನಿಮಾ ಬರೋಬ್ಬರಿ 62 ಕೋಟಿ ರೂಪಾಯಿ ಗಳಿಸಿತ್ತು. ನಂತರ ಶನಿವಾರ 53.50 ಕೋಟಿ ರೂಪಾಯಿ ಹಾಗೂ ಭಾನುವಾರ 61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಾರಾಂತ್ಯದಲ್ಲಿ ಭರ್ಜರಿ ಓಟ ಕಂಡಿದ್ದ ಸಿನಿಮಾದ ಗಳಿಕೆಯಲ್ಲಿ ಸೋಮವಾರ ತುಸು ಇಳಿಕೆ ಕಂಡುಬಂದಿದೆ. ಮೊದಲ ಸೋಮವಾರ ಭಾರತದಲ್ಲಿ ಚಿತ್ರ 21 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಭಾನುವಾರದ ಗಳಿಕೆಗೆ ಹೋಲಿಸಿದರೆ ಇದು ಶೇಕಡಾ 65.6ರಷ್ಟು ಇಳಿಕೆಯಾಗಿದೆ.
ಆದರೂ ನಾಲ್ಕು ದಿನಗಳ ಒಟ್ಟಾರೆ ಲೆಕ್ಕಾಚಾರ ನೋಡಿದರೆ ‘ದೃಶ್ಯಂ 3’ ಭರ್ಜರಿ ವೇಗದಲ್ಲೇ ಮುನ್ನುಗ್ಗುತ್ತಿದೆ. ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ 197.50 ಕೋಟಿ ರೂಪಾಯಿಗೆ ತಲುಪಿದ್ದರೆ, ದೇಶೀಯ ಗ್ರಾಸ್ ಕಲೆಕ್ಷನ್ ಸುಮಾರು 237 ಕೋಟಿ ರೂಪಾಯಿ ಎನ್ನಲಾಗಿದೆ. ಇನ್ನು ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅಲ್ಲಿಂದ ಸುಮಾರು 66 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ವಿಶ್ವಾದ್ಯಂತ ಚಿತ್ರದ ಒಟ್ಟು ಕಲೆಕ್ಷನ್ 303 ಕೋಟಿ ರೂಪಾಯಿಗೆ ತಲುಪಿದೆ.
ಬಾಕ್ಸ್ ಆಫೀಸ್ ಸಂಖ್ಯೆಗಳ ಜೊತೆಗೆ ಪ್ರೇಕ್ಷಕರ ಹಾಜರಾತಿಯಲ್ಲೂ ಸಿನಿಮಾ ಗಮನ ಸೆಳೆಯುತ್ತಿದೆ. ನಾಲ್ಕನೇ ದಿನ ಭಾರತಾದ್ಯಂತ 9.6 ಲಕ್ಷಕ್ಕೂ ಹೆಚ್ಚು ಮಂದಿ ‘ದೃಶ್ಯಂ 3’ ವೀಕ್ಷಿಸಿದ್ದಾರೆ ಎನ್ನಲಾಗಿದೆ. ಬಿಡುಗಡೆಯಾದ ಬಳಿಕ ಇದುವರೆಗೆ ಚಿತ್ರದ ಒಟ್ಟು ವೀಕ್ಷಕರ ಸಂಖ್ಯೆ 78 ಲಕ್ಷದ ಗಡಿ ದಾಟಿದೆ. ದೇಶಾದ್ಯಂತ 16,274 ಶೋಗಳಲ್ಲಿ ಸುಮಾರು ಶೇಕಡಾ 24ರಷ್ಟು ಆಕ್ಯುಪೆನ್ಸಿ ದಾಖಲಾಗಿದ್ದು, ಸಂಜೆ ಪ್ರದರ್ಶನಗಳಿಗೆ ಹೆಚ್ಚಿನ ಪ್ರೇಕ್ಷಕರು ಬಂದಿದ್ದಾರೆ.
ಅಭಿಷೇಕ್ ಪಾಠಕ್ ನಿರ್ದೇಶನದ ‘ದೃಶ್ಯಂ 3’ನಲ್ಲಿ ಅಜಯ್ ದೇವಗನ್ ಜೊತೆಗೆ ಟಬು, ಶ್ರಿಯಾ ಶರಣ್, ಜೈದೀಪ್ ಅಹ್ಲಾವತ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಮೂಲದ ಕಥೆಯಿಂದ ವಿಭಿನ್ನವಾಗಿರುವ ಕ್ಲೈಮ್ಯಾಕ್ಸ್ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ ಎನ್ನಲಾಗಿದ್ದು, ಇದು ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಪನೋರಮಾ ಸ್ಟುಡಿಯೋಸ್ ನಿರ್ಮಾಣದ ಈ ಥ್ರಿಲ್ಲರ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಲ್ಕೇ ದಿನದಲ್ಲಿ 300 ಕೋಟಿ ಕ್ಲಬ್‌ಗೆ ಎಂಟ್ರಿ ಪಡೆದಿರುವ ‘ದೃಶ್ಯಂ 3’, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುತ್ತದೆಯೇ ಎಂಬ ಕುತೂಹಲ ಇದೀಗ ಮೂಡಿದೆ.


