Asianet Suvarna News Asianet Suvarna News

ಕಂಠಪೂರ್ತಿ ಕುಡಿದು ಸೆಲೆಬ್ರಿಟಿ ಎಂಬುದನ್ನೇ ಮರೆತ ಗಾಯಕಿ

ಗಾಯಕಿಯೊಬ್ಬಳು ಕಂಠಪೂರ್ತಿ ಕುಡಿದು ಜನರ ಬಳಿಯೇ ತಾನು ಯಾರೂ ಎಂದು ಕೇಳಿದ ಘಟನೆ ನಡೆದಿದ್ದು, ನಟಿಯ ಎಣ್ಣೆಯಾಟದ ವಿಡಿಯೋ ವೈರಲ್ ಆಗಿದೆ. 

Adele was spotted in a drunk state at Heaven Nightclub akb
Author
Bandung, First Published May 29, 2022, 9:17 AM IST

ಪಾಶ್ಚಾತ್ಯ ಸಂಗೀತಗಾರ್ತಿಯೊಬ್ಬಳು ಕಂಠಮಟ್ಟ ಕುಡಿದು ತಾನು ಸೆಲೆಬ್ರಿಟಿ ಎಂಬುದನ್ನೇ ಮರೆತ ಘಟನೆ ಹೆವನ್ ನೈಟ್‌ಕ್ಲಬ್‌ನ ಪೋರ್ನ್ ಐಡಲ್ ಈವೆಂಟ್‌ನಲ್ಲಿ ನಡೆದಿದೆ. ಮದ್ಯದ ನಶೆಯಲ್ಲಿ ತೇಲಾಡುತ್ತಾ ನೈಟ್‌ ಕ್ಲಬ್‌ನಲ್ಲಿ ಸಾರ್ವಜನಿಕ ಶೋಗೆ ಬಂದ ಸಂಗೀತಗಾರ್ತಿ ಅಡೆಲೆ (Adele) ತಾನು ಅಲ್ಲಿಗೆ ಏಕೆ ಹೋಗಿದ್ದೇನೆ ಎಂಬುದನ್ನೇ ಮರೆತಿದ್ದಾಳೆ. ಆಕೆ ಕುಡಿದು ತೂರಾಡಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂದು ಲ್ಯಾಡ್‌ಬೈಬಲ್ ಎಂಬ ವೆಬ್‌ಸೈಟ್ ವರದಿ ಮಾಡಿದೆ.

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕುಡಿದು ತೂರಾಡುವುದನ್ನು ನೀವು ಗಮನಿಸಿರಬಹುದು. ಅದೇ ರೀತಿ ಈ ಗಾಯಕಿಯೂ ಲಂಡನ್ ನೈಟ್‌ಕ್ಲಬ್‌ನಲ್ಲಿ ಇದೇ ರೀತಿ ಕುಡಿದು ತೂರಾಡಿದ್ದಾಳೆ. ಆಲ್ಕೋಹಾಲ್ ತ್ಯಜಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ತಿಂಗಳುಗಳ ನಂತರ, ಹೆವನ್ ನೈಟ್‌ಕ್ಲಬ್‌ನ ಪೋರ್ನ್ ಐಡಲ್ ಈವೆಂಟ್‌ನಲ್ಲಿ ಅಡೆಲೆ ಕುಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು LADbible ವರದಿ ಮಾಡಿದೆ. ಸಂಜೆಯಿಂದ ಅಡೆಲೆ ಅವರ ಹಲವಾರು ಕ್ಲಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಟಿಕ್‌ಟಾಕ್ ಗಾಯಕಿ ಅವಳು ಪ್ರಸಿದ್ಧ ಎಂಬುದನ್ನು ಆಕೆ ಮರೆತಿರುವುದನನ್ಉ ತೋರಿಸಿದೆ.

 

ವೀಡಿಯೊದಲ್ಲಿ ಕುಡಿದ ಮತ್ತಿನಲ್ಲಿರುವ 31 ವರ್ಷದ ಗಾಯಕಿ ವಿಐಪಿ ಪ್ರದೇಶದಿಂದ ಕೆಳಗೆ ಜಾರುತ್ತಿರುವುದನ್ನು ತೋರಿಸಿದೆ. ಅಲ್ಲದೇ ಆಕೆ ನಾನು ಯಾರೂ ಎಂದು ಜನರಿಗೆ ಹೇಗೆ ಗೊತ್ತು ಎಂಬುದಾಗಿ ಗುಂಪು ಸೇರಿದ ಜನರನ್ನೇ ಕೇಳುತ್ತಿದ್ದಾಳೆ. ಆದರೆ ಅಲ್ಲಿ ಗದ್ದಲ ಇದ್ದುದ್ದರಿಂದ ಜನರು ಆಕೆಗೆ ಏನೆಂದು ಉತ್ತರಿಸಿದರೆಂದು ಕೇಳಿಸುವುದಿಲ್ಲ. ಆದರೆ ಆಕೆ ತುಂಬಾ ಪ್ರಸಿದ್ಧಳಾಗಿದ್ದರಿಂದ ಅವರು ಬಹುಶಃ ಅವಳಿಗೆ ಅದನ್ನೇ ಹೇಳಿರುತ್ತಾರೆ ಎಂದು ಊಹಿಸಬಹುದು.

ಕುಡಿದು ತೂರಾಡಿದ ಮಹಿಳಾ ಅಧಿಕಾರಿ : ವಿಡಿಯೋ ವೈರಲ್‌

ಈ ಗಾಯಕಿ ಹೀಗೆ ಕೇಳುತ್ತಿರುವ ವಿಡಿಯೋ ಭಾರತದಲ್ಲಿ ಪ್ರಸ್ತುತ ನಿಷೇಧಿಸಲ್ಪಟ್ಟಿರುವ ಸಾಮಾಜಿಕ ಜಾಲತಾಣವಾದ ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ಜನ ವೀಕ್ಷಿಸಿದ್ದಾರೆ. ಅಡೆಲೆ  ಜನರ ಹೃದಯಕ್ಕೆ ಇಳಿದಿದ್ದಾಳೆ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಇತರರು ಯಾವುದೇ ಸಾಮಾನ್ಯ ವ್ಯಕ್ತಿಯಂತೆ ತನ್ನ ಸಂಜೆಯನ್ನು ಆನಂದಿಸಲು ಪ್ರಯತ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು  ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ, ಅಡೆಲೆ ತಾನು ಮದ್ಯಪಾನವನ್ನು ತ್ಯಜಿಸಿದ್ದೇನೆ ಎಂದು ಹೇಳಿಕೊಂಡಿದ್ದಳು. ಗಾಯಕಿ  ತಾನು ಪುನರಾಗಮನ ಮಾಡಲು ಬಯಸುತ್ತಿರುವುದರಿಂದ ತನ್ನ ಕುಡಿತವನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಳು. ಸಿಂಗಲ್ ಈಸಿ ಆನ್ ಮಿ ಆಲ್ಬಮ್‌ ಬಿಡುಗಡೆಗೆ ಸ್ವಲ್ಪ ಮೊದಲು ಈ ಹೇಳಿಕೆ ನೀಡಿದ್ದಳು. ಅಡೆಲೆ ತನ್ನ ಧ್ವನಿಯನ್ನು ರಕ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

ನನ್ನನ್ನು ಮದುವೆ ಆಗಲೇ ಬೇಕೆಂದು ಮಧ್ಯರಾತ್ರಿ ನಟನ ಮನೆ ಮುಂದೆ ಹೈಡ್ರಾಮಾ ಮಾಡಿದ ಕಿರುತೆರೆ ನಟಿ!
 

ಇದಕ್ಕೂ ಮೊದಲು ವೋಗ್‌ಗೆ ನೀಡಿದ ಸಂದರ್ಶನದಲ್ಲಿ ಆಲ್ಕೋಹಾಲ್‌ನೊಂದಿಗೆ ತನ್ನ ಸಮೀಕರಣವನ್ನು ತೆರೆದ ಅಡೆಲೆ, ತಾನು ಯಾವಾಗಲೂ ಆಲ್ಕೋಹಾಲ್‌ನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದೇನೆ ಮತ್ತು ಅದರಿಂದ ಆಕರ್ಷಿತಳಾಗಿದ್ದೇನೆ ಎಂದು ಹೇಳಿದರು. COVID-19 ಲಾಕ್‌ಡೌನ್ ಸಮಯದಲ್ಲಿ ಅವಳಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ 'ಹ್ಯಾಂಗ್‌ಸೈಟಿ' ಯನ್ನು ಎದುರಿಸುವ ಕುರಿತು ಅಡೆಲೆ ಮಾತನಾಡಿದರು. ಲಾಕ್‌ಡೌನ್ ಅವಳನ್ನು 'ವಾರದ ಏಳು ರಾತ್ರಿಯೂ ವೈನ್ ಕುಡಿಯುವವಳಾಗಿ ಆಗಿ ಪರಿವರ್ತಿಸಿತು ಎಂದು ಅಡೆಲೆ ಹೇಳಿದ್ದಾಳೆ.

ನಾನು ಬಾರ್‌ನ ಮುಂಭಾಗದಿಂದ ಹೊರ ಬೀಳುವ ಬದಲು ಹಿಂದಿನ ಬಾಗಿಲಿನಿಂದ ಹೊರ ಬೀಳುತ್ತಿದ್ದೆ. ನಂತರ ನಾನು ಕೆಟ್ಟ ಹ್ಯಾಂಗೊವರ್‌ನೊಂದಿಗೆ ದಿನಾ ಬೆಳಗ್ಗೆ ಏಳುತ್ತಿದ್ದೆ ಎಂದು ನನಗೆ ನೆನಪಿದೆ. ನಾನು ಅದನ್ನು ಹ್ಯಾಂಗ್‌ಸೈಟಿ ಎಂದು ಕರೆಯುತ್ತೇನೆ. ನಾನು ಯಾರೊಂದಿಗೆ ಮಾತನಾಡಿದೆ? ನಾನೇನು ಮಾಡಿದೆ? ಎಂಬುದು ತಿಳಿಯುತ್ತಿರಲಿಲ್ಲ ಎಂದು ಆಕೆ  ಹೇಳಿದ್ದಳು. ಈ ಗಾಯಕಿಯ ಅನಧಿಕೃತ ಜೀವನಚರಿತ್ರೆ ಬರೆದ ಮಾರ್ಕ್ ಶಪಿರೊ (Marc Shapiro ) ಅವರು ಆ ಪುಸ್ತಕದಲ್ಲಿ ಅಡೆಲೆ ಕುಡಿದ ಸ್ಥಿತಿಯಲ್ಲಿ ವೇದಿಕೆಗೆ ಹೋಗುತ್ತಿದ್ದಳು ಎಂದು ಬರೆದಿದ್ದಾರೆ.
 

Follow Us:
Download App:
  • android
  • ios