ಸ್ಟಾರ್ ನಟನ ಮನೆ ಮುಂದೆ ಕಿರುತೆರೆ ನಟಿ ಹೈಡ್ರಾಮ. ಸಿಂಬು ಯಾರನ್ನ ಮದುವೆ ಆಗ್ತಾರೆ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು..

ವಿಜಯ್‌ ಟಿವಿಯಲ್ಲಿ '7c' ಧಾರಾವಾಹಿ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ಶ್ರೀನಿಧಿ ಯಾರೇ ನೀ ಮೋಹಿನಿ ಮತ್ತು ಪುದು ಪುದು ಅರ್ಥಗಳು'ನಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ನಟಿ ಅಭಿಮಾನಿಗಳ ಜೊತೆ ಮಾತನಾಡುವಾಗ ಅವರಿಂದ ವೃತ್ತಿ ಜೀವನಕ್ಕೆ ಸಲಹೆ ಪಡೆದುಕೊಂಡಿದ್ದಾರೆ. ಅದರಲ್ಲಿ ಒಬ್ಬರು ನಟ ಸಿಂಬುರನ್ನು ಮದುವೆಯಾಗುವಂತೆ ಐಡಿಯಾ ಕೊಟ್ಟಿದ್ದಾರೆ, ಆದರೆ ಶ್ರೀನಿಧಿಗೆ ಬಾಯ್‌ಫ್ರೆಂಡ್‌ ಇದ್ದಾನೆ. 

ಭಾನುವಾರ ರಾತ್ರಿ ಶ್ರೀನಿಧಿ ಇದ್ದಕ್ಕಿದ್ದಂತೆ ಸಿಂಬು ಅವರ ನಿವಾಸದ ಹೊರಗಡೆ ನಿಂತು ಹೈಡ್ರಾಮಾ ಮಾಡಿದ್ದಾರೆ. ನನಗೆ ಸಿಂಗು ಬೇಕೇ ಬೇಕು ಅವರನ್ನೇ ಮದುವೆ ಆಗುವುದು ಎಂದು ಕೂಗಾಡಿದ್ದಾರೆ. ಸಿಂಬು ಮನೆಯಲ್ಲಿ ಇಲ್ಲದ ಕಾರಣ ಸಿಂಬು ಪೋಷಕರು ಶ್ರೀನಿಧಿಗೆ ಸಮಾಧಾನ ಮಾಡಿ ಮನೆಗೆ ಹೋಗುವಂತೆ ಹೇಳಿದ್ದಾರೆ. ಈ ಘಟನೆ ನಡೆದ ನಂತರ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಅಭಿಪ್ರಾಯ ಬರೆದುಕೊಂಡಿದ್ದಾರೆ.

ನಟ ಸಿಂಬು ಕಾರು ಅಪಘಾತ; 70 ವರ್ಷದ ವ್ಯಕ್ತಿ ಸಾವು, ಸಿಸಿಟಿವಿ ದೃಶ್ಯ ವೈರಲ್

'ನನಗೆ ನಂಬಲು ಆಗುತ್ತಿಲ್ಲ ನನ್ನ ರಿಯಲ್ ಲೈಫ್‌ ಸ್ಫೂರ್ತಿ ಸಿಂಬು ಇಷ್ಟು ವರ್ಷ ಸಿಂಗಲ್ ಆಗಿರುವುದು ನನ್ನನ್ನು ಮದುವೆ ಆಗಲು ಎಂದು. ಇವತ್ತೇ ನನಗೆ ಅರ್ಥ ಆಗಿದ್ದು ಅವನು ಸಿಂಬು ರಿಯಲ್ ಲೈಫ್‌ ಹೇಗಿದೆ ಎಂದು ನೀವೆಲ್ಲರೂ ದಯವಿಟ್ಟು ಬಂದು ನಮ್ಮ ಲವ್ ಆಂಡ್ ಮದುವೆ ಸೆಟ್ ಮಾಡಿ ಕೊಡಿ. ಸಿಂಬು ಹೊರತು ಪಡಿಸಿ ನಾನು ಯಾರನ್ನು ಮದುವೆ ಆಗುವುದಿಲ್ಲ. ಸಿಗದಿದ್ದರೆ ಜೆಲ್ಲಿಕಟ್ಟುಗಿಂತ ಭೀಕರವಾದ ಹೋರಾಟ ಮಾಡುತ್ತೀನಿ. ಪ್ರೀತಿ ಸಿಕ್ಕಿಲ್ಲ ಅಂದ್ರೆ ನಾವು ಹೋರಾಟ ಮಾಡಿ ಪಡೆಯಬೇಕು' ಎಂದು ಶ್ರೀನಿಧಿ ಬರೆದುಕೊಂಡಿದ್ದಾರೆ.

ಶ್ರೀನಿಧಿ ಹುಚ್ಚಾಟದ ವಿಚಾರ ಸಿಂಬುಗೆ ತಲುಪಿದ್ದರೂ ಪ್ರತಿಕ್ರಿಯೆ ನೀಡುತ್ತಿಲ್ಲ. ಸಿಂಬು ಸಧ್ಯಕ್ಕೆ ಸಿಂಗಲ್ ಅಥವಾ ಎಂಗೇಜ್ಡ್‌ ಅಂತ ಯಾರಿಗೂ ಗೊತ್ತಿಲ್ಲ. ಕ್ಲಾರಿಟಿ ಕೊಟ್ಟರೆ ಶ್ರೀನಿಧಿ ಹುಚ್ಚಾಟಕ್ಕೆ ಬ್ರೇಕ್ ಬೀಳುತ್ತದೆ ಎಂದಿದ್ದಾರೆ ನೆಟ್ಟಿಗರು. 

ಸಿಂಬು ಜೊತೆ ಸಂಬಂಧದಲ್ಲಿದ್ದ ನಟಿಯರು!

ಸಿಂಬು ಅವರ ಹೆಸರು ಅನೇಕ ನಟಿಯರ ಜೊತೆ ರಿಲೆಷನ್‌ಶಿಪ್‌ ಹೊಂದಿದ್ದರು ಎಂದು ಕೇಳಿಬಂದಿದೆ. ಆದರೆ ಕೆಲವರನ್ನು ಅದನ್ನು ಒಪ್ಪಿಕೊಂಡರು. ಇನ್ನು ಕೆಲವು ವದಂತಿಗಳಾಗಿವೆ. ಹನ್ಸಿಕಾ ಮೋಟ್ವಾನಿ (Hansika Motwani),ತ್ರಿಶಾ ಕೃಷ್ಣನ್ (Trisha Krishnan) ಮುಂತಾದ ಟಾಪ್‌ ನಟಿಯರ ಹೆಸರುಗಳು ಸೇರಿವೆ.

Maanadu Simbu: ನೀವಿಲ್ಲದೇ ನಾನಿಲ್ಲ ಎಂದು ಟ್ವೀಟ್ ಮಾಡಿದ ಕಾಲಿವುಡ್​ ನಟ

ಸಿಂಬು ಮತ್ತು ನಿಧಿ ಅಗರ್ವಾಲ್‌: ನಿಧಿ ಅಗರ್ವಾಲ್ ತಮಿಳು ಚಿತ್ರರಂಗದಲ್ಲಿ ಜಯಂ ರವಿ ಜೊತೆ ಭೂಮಿ ಸಿನಿಮಾದಲ್ಲಿ ಪಾದಾರ್ಪಣೆ ಮಾಡಿದರು. ಆಕೆಯ ಕೊನೆಯ ಚಿತ್ರ ಸಿಂಬು ಜೊತೆಗಿನ ಈಶ್ವರನ್. ಸಿಂಬು ಮತ್ತು ನಿಧಿ ಅಗರ್ವಾಲ್ ಒಟ್ಟಿಗೆ ನಟಿಸಿದಾಗಿನಿಂದ ಅವರ ಲಿಂಕ್-ಅಪ್ ಬಗ್ಗೆ ಹಲವು ವದಂತಿಗಳು ಹೊರಬಿದ್ದಿವೆ.

ಸಿಂಬು ಮತ್ತು ನಿಧಿ ಅಗರ್ವಾಲ್‌: ನಿಧಿ ಅಗರ್ವಾಲ್ ತಮಿಳು ಚಿತ್ರರಂಗದಲ್ಲಿ ಜಯಂ ರವಿ ಜೊತೆ ಭೂಮಿ ಸಿನಿಮಾದಲ್ಲಿ ಪಾದಾರ್ಪಣೆ ಮಾಡಿದರು. ಆಕೆಯ ಕೊನೆಯ ಚಿತ್ರ ಸಿಂಬು ಜೊತೆಗಿನ ಈಶ್ವರನ್. ಸಿಂಬು ಮತ್ತು ನಿಧಿ ಅಗರ್ವಾಲ್ ಒಟ್ಟಿಗೆ ನಟಿಸಿದಾಗಿನಿಂದ ಅವರ ಲಿಂಕ್-ಅಪ್ ಬಗ್ಗೆ ಹಲವು ವದಂತಿಗಳು ಹೊರಬಿದ್ದಿವೆ.

ಇದ್ದಕ್ಕಿದ್ದಂತೆ 15 ಕೆಜಿ ತೂಕ ಇಳಿಸಿಕೊಂಡ ನಟ ಸಿಂಬು; ಅಭಿಮಾನಿಗಳಿಗೆ ಬಿಗ್ ಶಾಕ್!

ಸಿಂಬು ಮತ್ತು ಹಂಸಿಕಾ ಮೋಟ್ವಾನಿ: ನಯನತಾರಾ ಮತ್ತು ಹನ್ಸಿಕಾ ಅವರು ಡೇಟ್ ಮಾಡಿದ ಇತರ ಹುಡುಗಿಯರಿಗಿಂತ ಹೆಚ್ಚು ಪ್ರಭಾವ ಬೀರಿದ್ದಾರೆ. ಎಲ್ಲಾ ಬ್ರೇಕ್-ಅಪ್‌ಗಳಲ್ಲಿ, ಹನ್ಸಿಕಾ ಮೋಟ್ವಾನಿಯೊಂದಿಗಿನ ಒಡಕು ಎಲ್ಲದಕ್ಕಿಂತ ಟಫ್‌ ಆಗಿತ್ತು ಎಂದು ಒಂದು ಸಂದರ್ಶನದಲ್ಲಿ, ಸಿಂಬು ಒಪ್ಪಿಕೊಂಡರು.

ಸಿಂಬು ಮತ್ತು ನಯನತಾರಾ: ಈ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿತ್ತು. ಇಬ್ಬರೂ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇವರ ರಿಲೆಷನ್‌ಶಿಪ್‌ ಅವರ ವಲ್ಲವನ್ ಚಿತ್ರಕ್ಕಿಂತ ಮುಂಚೆಯೇ ಪ್ರಾರಂಭವಾಯಿತು. ಸಿಂಬು ಮತ್ತು ನಯನತಾರಾ ಒಟ್ಟಿಗೆ ವಾಸಿಸುತ್ತಿದ್ದಾರೆ ಎಂಬ ಅನೇಕ ಗಾಸಿಪ್‌ಗಳು ಆಗ ಹರಿದಾಡಿದ್ದವು, ನಂತರ ಕಾರಣಾಂತರಗಳಿಂದ ಇಬ್ಬರೂ ಸೌಹಾರ್ದಯುತವಾಗಿ ಬೇರ್ಪಟ್ಟರು.